Home Crime Love Jihad: ಲವ್‌ ಜಿಹಾದ್‌ ಪ್ರಕರಣ: ಆರೋಪಿ ಅರೆಸ್ಟ್‌

Love Jihad: ಲವ್‌ ಜಿಹಾದ್‌ ಪ್ರಕರಣ: ಆರೋಪಿ ಅರೆಸ್ಟ್‌

Hindu neighbor gifts plot of land

Hindu neighbour gifts land to Muslim journalist

Love Jihad: ಅನ್ಯಕೋಮಿನ ಯುವಕನೊಬ್ಬ ಹಿಂದೂ ಯುವತಿಗೆ ಲವ್‌ ಸೆಕ್ಸ್‌ ದೋಖಾ ಎಸಗಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರಿಯಕರ ಮಹಮ್ಮದ್‌ ಇಶಾಕ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಪೊಲೀಸರು ಇದೀಗ ಇಶಾಕ್‌ನನ್ನು ಬಂಧನ ಮಾಡಿದ್ದಾರೆ.

ಸಂತ್ರಸ್ತೆ ಯುವತಿ ಹೆಚ್‌ ಎಸ್‌ ಆರ್‌ ಠಾಣೆಗೆ ದೂರನ್ನು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಇಶಾಕ್‌ನನ್ನು ಬಂಧನ ಮಾಡಿದ್ದಾರೆ.

ಇನ್ಸ್ಟಾಗ್ರಾಂ ಮೂಲಕ ಪರಿಚಯಗೊಂಡ ಇಶಾಕ್‌ನನ್ನು ಯುವತಿ ಪ್ರೀತಿ ಮಾಡುತ್ತಿದ್ದಳು. ಈಕೆಯನ್ನು ಪುಸಲಾಯಿಸಿ ಲಾಡ್ಜ್‌ಗೆ ಯುವಕ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಇಬ್ಬರ ಒಪ್ಪಿಗೆಯ ಮೇರೆ ಲೈಂಗಿಕ ಕ್ರಿಯೆ ನಡೆದಿದೆ. ನಂತರ ಯುವತಿ ಮದುವೆಯಾಗುವಂತೆ ಕೇಳಿದ್ದಾರೆ. ಆದರೆ ಆಗ ಇದಕ್ಕೆ ಒಪ್ಪದೆ ಹಲವು ನೆಪ ಹೇಳಿ ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿದ್ದಾನೆ. ನಿನ್ನನ್ನು ಮದುವೆಯಾಗಬೇಕಾದರೆ ನೀನು ಮತಾಂತರವಾಗಬೇಕು ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದು, ಇದರಿಂದ ನೊಂದ ಯುವತಿ ಹೆಚ್‌ ಎಸ್‌ಆರ್‌ ಠಾಣೆಗೆ ದೂರನ್ನು ನೀಡಿದ್ದಾಳೆ.