Home Health Viagra : ವಯಾಗ್ರ ಮಾತ್ರೆ ತಿಂದ್ರೆ ಸಾವಾಗೋದು ಪಕ್ಕನಾ? ತಜ್ಞರು ಹೇಳೋದೇನು?

Viagra : ವಯಾಗ್ರ ಮಾತ್ರೆ ತಿಂದ್ರೆ ಸಾವಾಗೋದು ಪಕ್ಕನಾ? ತಜ್ಞರು ಹೇಳೋದೇನು?

Hindu neighbor gifts plot of land

Hindu neighbour gifts land to Muslim journalist

Viagra : ವಯಸ್ಸಾಗುತ್ತಾ ಹೋದಂತೆ ಪುರುಷರಲ್ಲಿ ಕಾಮಾಸಕ್ತಿಯು ಮೂಡಿದರೂ ಅದು ದೈಹಿಕವಾಗಿ ಕಾರ್ಯ ರೂಪಕ್ಕೆ ತರುವಂತಹ ಸಾಮರ್ಥ್ಯವು ಇರುವುದಿಲ್ಲ. ಹೀಗಾಗಿ ಕೆಲವರು ವಯಾಗ್ರ ಸೇವನೆ ಮಾಡುತ್ತಾರೆ. ಆದರೆ ವಯಾಗ್ರ ಸೇವನೆಯಿಂದ ಸಾವುಗಳು ಸಂಭವಿಸುತ್ತವೆ ಎಂಬುದಾಗಿ ಹೇಳಲಾಗುತ್ತದೆ. ಹಾಗಾದರೆ ಈ ಕುರಿತು ತಜ್ಞರು ಏನು ಹೇಳುತ್ತಾರೆ?

 

 ವಯಾಗ್ರ ಮಾತ್ರೆಗಳ ಕುರಿತಾಗಿ ತಜ್ಞರು ನಿರಂತರವಾಗಿ ವಯಾಗ್ರ ಮಾತ್ರೆಗಳನ್ನು ಸೇವಿಸುವ ಪುರುಷರಲ್ಲಿ ಹೃದಯಸಂಬಂಧಿ ಸಮಸ್ಯೆಗಳು ಕಂಡು ಬರುತ್ತವೆ. ಹೃದಯ ಸಂಬಂಧಿ ಸಮಸ್ಯೆ ಹೊಂದಿರುವ ಪುರುಷರು ಈ ಮಾತ್ರೆ ಸೇವಿಸದಂತೆ ಸಲಹೆ ನೀಡಲಾಗುತ್ತದೆ. ವಯಾಗ್ರ ಸೇವನೆಯಿಂದ ಹೃದಯಬಡಿತ ಹೆಚ್ಚಾಗಿ ಸಾವಿಗೆ ಕಾರಣವಾಗಬಹುದು ಎಂದು ಹೇಳುತ್ತಾರೆ.

 

ಅಲ್ಲದೆ ವಯಾಗ್ರ ಯಾವಾಗ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆಯೂ ತಿಳಿದಿರಬೇಕು. ಮಾತ್ರೆ ಸೇವಿಸಿದ ಎರಡು ಗಂಟೆ ನಂತ್ರ ಅದು ಕೆಲಸ ಮಾಡಲು ಆರಂಭಿಸುತ್ತದೆ. ಆದ್ರೆ ಕೆಲವರು ಮಾತ್ರೆ ಸೇವಿಸಿದ ತಕ್ಷಣವೇ ಮೂಡ್‌ಗೆ ಹೋಗುತ್ತಾರೆ. ಮಾತ್ರೆ ಕೆಲಸ ಮಾಡ್ತಿಲ್ಲ ಎಂದು ಒಂದಾದ ನಂತರ ಮತ್ತೊಂದರಂತೆ ಮಾತ್ರೆ ಸೇವಿಸುತ್ತಾರೆ. ಹೈಡೋಸ್ ಆಗಿ ಲೋ ಬಿಪಿ ಉಂಟಾಗಿ ಸಾವು ಸಂಭವಿಸುತ್ತೆ ಎಂದು ವೈದ್ಯರು (Dr. Stone’s Mens clinic) ಹೇಳುತ್ತಾರೆ.

 

ಇನ್ನೂ ವಯಾಗ್ರ ಸೇವನೆಯು ಅತಿಯಾದರೆ, ಅದರಿಂದ ಕಿವಿ ಕೇಳದೆ ಇರಬಹುದು. ನಿಯಮಿತವಾಗಿ ವಯಾಗ್ರ ಸೇವನೆ ಮಾಡಿದರೆ, ಅದು ಕಿವಿಗಳ ಅಂಗಾಂಗಗಳಿಗೆ ಹಾನಿ ಉಂಟು ಮಾಡಬಹುದು. ಇದು ತಕ್ಷಣವೇ ಸಂಭವಿಸಬಹುದು ಅಥವಾ ದೀರ್ಘಕಾಲ ಸೇವನೆಯಿಂದಾಗಿ ಹೀಗೆ ಆಗಬಹುದು. ಕಿವಿಯಲ್ಲಿ ಗಂಟೆ ಬಡಿದಂತೆ ಆಗುವುದು ಇದರ ಒಂದು ಲಕ್ಷಣವಾಗಿದೆ.

 

ಅಲ್ಲದೆ ಕೆಲವು ಸಂದರ್ಭದಲ್ಲಿ ಮಾತ್ರೆಗಳ ಅಡ್ಡ ಪರಿಣಾಮದಿಂದ ದೀರ್ಘಕಾಲದ ತಲೆನೋವು ಕಾಣಿಸಿಕೊಳ್ಳುತ್ತದೆ. ಅತಿಯಾದ ಡೋಸ್‌ನಿಂದ ನಿಮಿರುವಿಕೆ ಸೇರಿದಂತೆ ಹೊಸ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಪದೇ ಪದೇ ದೀರ್ಘಕಾಲದ ತಲೆನೋವು ಕಾಣಿಸಿಕೊಳ್ಳುತ್ತಿದ್ರೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ.