Home Crime ಧರ್ಮಸ್ಥಳ: ಕೊಂದವರು ಯಾರು ಆಂದೋಲನ ಶುರು, SIT ಮುಂದುವರಿಸಲು ಸಿಎಂಗೆ. ಮನವಿ

ಧರ್ಮಸ್ಥಳ: ಕೊಂದವರು ಯಾರು ಆಂದೋಲನ ಶುರು, SIT ಮುಂದುವರಿಸಲು ಸಿಎಂಗೆ. ಮನವಿ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಮಹಿಳೆಯರ ಮೇಲಿನ ಎಲ್ಲ ದೌರ್ಜನ್ಯ ಕೊಲೆ ಪ್ರಕರಣಗಳನ್ನೂ ವಿಶೇಷ ತನಿಖಾ ತಂಡದ(ಎಸ್‌ಐಟಿ) ವ್ಯಾಪ್ತಿಗೆ ತರಬೇಕು. ತಾರ್ಕಿಕ ಅಂತ್ಯದವರೆಗೂ ಎಸ್‌ಐಟಿ ತನಿಖೆ ಮುಂದುವರೆಸಬೇಕು ಎಂದು ಮಹಿಳಾ ಹೋರಾಟಗಾರರು, ಲೇಖಕಿಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘ಕೊಂದವರು ಯಾರು?’ ಎಂಬ ಆಂದೋಲನದ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಹಿಳಾ ನಿಯೋಗ, ಧರ್ಮಸ್ಥಳ ಪ್ರಕರಣಗಳಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸಿಬಿಐ ಕೋರ್ಟ್ ಹೇಳಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು. ಎಸ್‌ಐಟಿ ತನಿಖೆಯನ್ನು ಸಮಗ್ರವಾಗಿ ನಡೆಸಬೇಕು. ತಾರ್ಕಿಕ ಅಂತ್ಯದವರೆಗೂ ಸ್ಥಗಿತಗೊಳಿಸಬಾರದು’ ಎಂದು ಮನವಿ ಮಾಡಿತು. ನಾವು
‘ಮಹಿಳೆಯರು ಹಾಗೂ ಸಮಾನಮನಸ್ಕರು ಸೇರಿ ‘ಕೊಂದವರು ಯಾರು ಆಂದೋಲನ’ ರಚಿಸಿದ್ದೇವೆ. ಧರ್ಮಸ್ಥಳದ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಮಹಿಳೆಯರ ಪರವಾಗಿ ನಮ್ಮ ಈ ಆಂದೋಲನ ಧ್ವನಿ ಎತ್ತುತ್ತಿದೆ. ಸರ್ಕಾರವು ನೊಂದವರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಕೊಂದವರು ಯಾರು ಆಂದೋಲನ’ ಕೋರಿದ್ದಾರೆ.
ಕೊಂದವರು ಯಾರು ಆಂದೋಲನದ ಪ್ರಮುಖರಾದ ಚಂಪಾವತಿ, ಮಧು ಭೂಷಣ್, ಶಕುನ್, ಮಾಯಾರಾವ್, ಗೌರಮ್ಮ, ಜ್ಯೋತಿ ಅನಂತಸುಬ್ಬರಾವ್, ಮಮತಾ ಯಜಮಾನ್, ಮಲ್ಲಿಗೆ ಸಿರಿಮನೆ, ಗೀತಾ, ಸುಜಾತಾ ಮುಂತಾದ ಗಣ್ಯ ಮಹಿಳೆಯರು ಸಿಎಂ ರನ್ನು ಭೇಟಿಯಾದ ನಿಯೋಗದಲ್ಲಿದ್ದರು.

ಮುಖ್ಯಮಂತ್ರಿಗಳನ್ನು ಭೇಟಿಯಾದ ಮಹಿಳೆಯರ ಬೇಡಿಕೆ ಏನು?