Bigg Boss Kannada: BBK12 is here to stay! ಎಂದಿನಂತೆ ಅದೇ ಸಮಯದಲ್ಲಿ…ವಿಡಿಯೋ ರಿಲೀಸ್‌

Share the Article

Bigg Boss Kannada: ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಕ್ಕೆ ರಿಲೀಫ್‌ ದೊರಕಿದ್ದು, ಇಂದಿನಿಂದಲೇ ಶೂಟಿಂಗ್‌ ಸಿದ್ಧತೆ ನಡೆದಿದೆ. ಸ್ಪರ್ಧಿಗಳನ್ನು ಬಿಗ್‌ಬಾಸ್‌ ಮನೆಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಈಗಲ್‌ ಟನ್‌ ರೆಸಾರ್ಟ್‌ಗೆ ಎಲ್ಲಾ ಸ್ಪರ್ಧಿಗಳನ್ನು ಶಿಫ್ಟ್‌ ಮಾಡಲಾಗಿತ್ತು. ನಿನ್ನೆ ರಾತ್ರಿ ಡಿಸಿಎಂ ಡಿಕೆಶಿ ಜಿಲ್ಲಾಧಿಕಾರಿಗೆ ಅವಕಾಶ ನೀಡುವಂತೆ ಸೂಚಿಸಿದ ನಂತರ ಇಂದು ಬಿಗ್‌ಬಾಸ್‌ ಬಾಸ್‌ ಶೂಟಿಂಗ್‌ ಮತ್ತೆ ಆರಂಭವಾಗಲಿದೆ.

ಇನ್ನು ಇದಕ್ಕೆ ಪೂರಕವೆಂಬಂತೆ ಕಲರ್ಸ್‌ ಕನ್ನಡ ವಾಹಿನಿಯ ಸೋಷಿಯಲ್‌ ಮೀಡಿಯಾದಲ್ಲಿ ಬಿಗ್‌ಬಾಸ್‌ ಮನೆಯ ಲೈಟ್‌ ಆನ್‌ ಆಗುವ ವಿಡಿಯೋ ರಿಲೀಸ್‌ ಆಗಿದ್ದು, ಬಿಗ್‌ಬಾಸ್‌ ಎಂದಿನಂತೆ ಅದೇ ಸಮಯದಲ್ಲಿ ಪ್ರಸಾರ ಎಂದು ವಿಡಿಯೋ ಬಿಡಲಾಗಿದೆ.

Comments are closed.