Bigg Boss: ‘Bigg Boss’ ಶೋ ಬಂದ್‌: ರಾತ್ರೋರಾತ್ರಿ ಮನೆಯಿಂದ ಎಲ್ಲಾ ಸ್ಪರ್ಧಿಗಳು ಹೊರಕ್ಕೆ; ರಕ್ಷಿತಾ ಹೇಳಿದ್ದ ಡೈಲಾಗ್‌ ವೈರಲ್‌!

Share the Article

Bigg Boss: ಕನ್ನಡ ಜನಪ್ರಿಯ ಬಿಗ್ ಬಾಸ್ (Bigg Boss) ಶೋ , ಪರಿಸರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬಂದ್ ಆಗಿದ್ದು, ಸ್ಪರ್ಧಿಗಳು ರಾತ್ರೋರಾತ್ರಿ ಹೊರಗೆ ಬಂದಿದ್ದಾರೆ. ಈ ನಡುವೆ ಮನೆಯೊಳಗೆ ಹೋಗುವಾಗ ರಕ್ಷಿತಾ ಶೆಟ್ಟಿ (Rakshitha shetty)ಹೊಡೆದಿರುವ ಡೈಲಾಗ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು, ಬಿಗ್‌ ಬಾಸ್‌ ಮನೆ ಪ್ರವೇಶಿಸಿದ ಕೂಡಲೇ ರಕ್ಷಿತಾ ಅವರನ್ನು ಇತರ ಸ್ಪರ್ಧಿಗಳು ಎಲಿಮಿನೇಟ್‌ ಮಾಡಿದ್ದರು. ಎಲಿಮಿನೇಟ್‌ ಮಾಡಿದ್ದರೂ ರಕ್ಷಿತಾ ಅವರು ಸೀಕ್ರೆಟ್‌ ರೂಮಿನಲ್ಲಿ ಇರಿಸಲಾಗಿತ್ತು. ಒಂದು ವಾರದ ಬಳಿಕ ರಕ್ಷಿತಾ ಅವರನ್ನು ಮತ್ತೆ ಮನೆಯೊಳಗೆ ಕಳುಹಿಸಲಾಗಿತ್ತು. ಮನೆಗೆ ಕಳುಹಿಸುವ ವೇಳೆ ರಕ್ಷಿತಾ ಅವರೊಂದಿಗೆ ಮಾತನಾಡಿದ್ದ ಸುದೀಪ್ ಅವರು, ಮನೆಗೆ ಹೋದ ಮೇಲೆ ಯಾರನ್ನು ಎಲಿಮಿನೇಟ್ ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು. ಈ ವೇಳೆ ರಕ್ಷಿತಾ ಅವರು ಎಲ್ಲರನ್ನೂ ಎಲಿಮಿನೇಟ್ ಮಾಡುತ್ತೇನೆಂದು ಉತ್ತರಿಸಿದ್ದರು.

ಇದನ್ನೂ ಓದಿ:Karnataka: ‘ಪದವೀಧರ ಕ್ಷೇತ್ರ’ ದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅವಕಾಶ: ಈ ದಾಖಲೆಗಳು ಕಡ್ಡಾಯ

ಇದೀಗ ರಕ್ಷಿತಾ ಅವರು ಮನೆ ಪ್ರವೇಶಿಸಿದ ಮೂರನೇ ದಿನಕ್ಕೆ ಎಲ್ಲರೂ ಹೊರ ಬಂದಿದ್ದಾರೆ. ಹೀಗಾಗಿ ರಕ್ಷಿತಾ ಅವರು ಹೊಡೆದಿದ್ದ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Comments are closed.