Kanpura: ಮ್ಯಾಗಿ ಖರೀದಿಗೆಂದು ಅಕ್ಕನ ನಿಶ್ಚಿತಾರ್ಥ ಉಂಗುರ ಮಾರಾಟ ಮಾಡಲು ಹೊರಟ 13 ರ ಬಾಲಕ!
ಮುಂದೇನಾಯ್ತು?

Kanpura: ಕಾನ್ಪುರ (ಉತ್ತರ ಪ್ರದೇಶ): ಕಾನ್ಪುರದ ಶಾಸ್ತ್ರಿ ನಗರದಲ್ಲಿ 13 ವರ್ಷದ ಬಾಲಕನೊಬ್ಬ ಮ್ಯಾಗಿ ಖರೀದಿ ಮಾಡಲು, ತನ್ನ ಸಹೋದರಿಯ ನಿಶ್ಚಿತಾರ್ಥದ ಉಂಗುರ ತೆಗೆದುಕೊಂಡು ಆಭರಣದ ಅಂಗಡಿಗೆ ಮಾರಲು ಹೋಗಿರುವ ಘಟನೆ ನಡೆದಿದೆ.

ಈ ಘಟನೆಯಿಂದ ಈಗನ ಮಕ್ಕಳಿಗೆ ನೂಡಲ್ಸ್ ಮತ್ತು ಇತರ ಫಾಸ್ಟ್ ಫುಡ್ ವಸ್ತುಗಳ ಮೇಲಿನ ಗೀಳನ್ನು ಎತ್ತಿ ತೋರಿಸಿದೆ. ಆಭರಣ ಅಂಗಡಿ ಮಾಲೀಕರು ಬಾಲಕನ ತಾಯಿಗೆ ಕರೆ ಮಾಡಿದ ನಂತರ ವಿಷಯ ತಿಳಿದಿದ್ದು, ನಂತರ ಕಣ್ಣೀರು ಹಾಕಿರುವುದಾಗಿ ವರದಿಯಾಗಿದೆ.
ವರದಿಗಳ ಪ್ರಕಾರ, ಹುಡುಗ ಒಂದು ಆಭರಣ ಅಂಗಡಿಗೆ ಹೋಗಿ ಚಿನ್ನದ ಉಂಗುರವನ್ನು ಮಾರಾಟ ಮಾಡಲು ಹೋಗಿದ್ದ. ಅಂಗಡಿಯ ಮಾಲೀಕ ಪುಷ್ಪೇಂದ್ರ ಜೈಸ್ವಾಲ್ ಹುಡುಗನ ಗಮನಿಸಿ ಕೆಲವು ಪ್ರಶ್ನೆಗಳನ್ನು ಕೇಳಿದ್ದು, ಹುಡುಗ ಪ್ರಾಮಾಣಿಕವಾಗಿ ಮ್ಯಾಗಿ ಖರೀದಿಸಲು ಹಣ ಬೇಕಾಗಿದ್ದರಿಂದ ಉಂಗುರವನ್ನು ಮಾರಲು ತಂದಿದ್ದೇನೆ ಎಂದು ಹೇಳಿದ್ದಾನೆ.
ಏನೋ ಎಡವಟ್ಟಾಗಿದೆ ಎಂದು ಅರಿತುಕೊಂಡ ಆಭರಣ ವ್ಯಾಪಾರಿ ತಕ್ಷಣ ಹುಡುಗನ ತಾಯಿಯನ್ನು ಅಂಗಡಿಗೆ ಕರೆದು ಉಂಗುರವನ್ನು ತೋರಿಸಿದ್ದಾರೆ. ತಾಯಿ ಶಾಕ್‌ಗೊಳಗಾಗಿದ್ದು, ಅದು ತನ್ನ ಮಗಳ ನಿಶ್ಚಿತಾರ್ಥದ ಉಂಗುರ ಎಂದು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಮದುವೆ ನಡೆಯಲಿದೆ ಎಂದು ಅವರು ಹೇಳಿದರು. ಉಂಗುರ ಮಾರಾಟವಾಗಲಿಲ್ಲ ಎನ್ನುವ ವಿಷಯಕ್ಕೆ ಅವರು ಸಮಾಧಾನಪಟ್ಟುಕೊಂಡರು. ಚಿನ್ನದ ಉಂಗುರವಾಗಿದ್ದು, ಇತ್ತೀಚೆಗೆ ಚಿನ್ನದ ಬೆಲೆ ಗಗನಕ್ಕೇರಿದೆ. ಮಗಳ ಮದುವೆಗೆ ಕೆಲವು ದಿನಗಳ ಮೊದಲು, ಆ ಕುಟುಂಬವು ಅಷ್ಟು ದುಬಾರಿ ಉಂಗುರವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.
ಪುಷ್ಪೇಂದ್ರ ಜೈಸ್ವಾಲ್ ಅವರು ತಮ್ಮ ಮಾರುಕಟ್ಟೆಯಲ್ಲಿ ಯಾವುದೇ ಅಂಗಡಿಯವರು ಸರಿಯಾದ ಪರಿಶೀಲನೆ ಇಲ್ಲದೆ ಅಪ್ರಾಪ್ತ ವಯಸ್ಕರು ತಂದ ವಸ್ತುಗಳನ್ನು ಖರೀದಿಸುವುದಿಲ್ಲ ಎಂದು ಹೇಳಿದರು. ಮಗುವಿನ ಮುಗ್ಧತೆಯಿಂದ ಅವರು ಉಂಗುರವನ್ನು ತಾಯಿಗೆ ಹಿಂದಿರುಗಿಸಿದರು.
ಈ ಆಭರಣ ವ್ಯಾಪಾರಿಯ ಪ್ರಾಮಾಣಿಕತೆ ಮತ್ತು ಸೂಕ್ಷ್ಮತೆಗಾಗಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Comments are closed.