Home Entertainment BBK-12: ಬಿಗ್ ಬಾಸ್-12 ಕ್ಕೆ ಬರೋ ಮೊದಲ 3 ಸ್ಪರ್ಧಿಗಳ ಹೆಸರು ರಿವಿಲ್ ಮಾಡಿದ ಕಲರ್ಸ್...

BBK-12: ಬಿಗ್ ಬಾಸ್-12 ಕ್ಕೆ ಬರೋ ಮೊದಲ 3 ಸ್ಪರ್ಧಿಗಳ ಹೆಸರು ರಿವಿಲ್ ಮಾಡಿದ ಕಲರ್ಸ್ ಕನ್ನಡ!!

Hindu neighbor gifts plot of land

Hindu neighbour gifts land to Muslim journalist

 

BBK-12: ಕನ್ನಡಿಗರು ಬಹುದಿನಗಳಿಂದ ಕಾದು ಕುಳಿತಿರುವ, ರಿಯಾಲಿಟಿ ಶೋಗಳಿಗೆ ಬಾಸ್ ಎನಿಸಿರುವ ಬಿಗ್ ಬಾಸ್ ಸೀಸನ್ ನಾಳೆಯಿಂದ(ಸೆ. 28) ಆರಂಭವಾಗಲಿ. ಈ ದಿನ ಸಂಜೆ ಗ್ರ್ಯಾಂಡ್ ಓಪನಿಂಗ್ ಪಡೆಯಲಿರುವ ಬಿಗ್ ಬಾಸ್ ಸರಿಯಾಗಿ ಮೂರು ತಿಂಗಳ ಕಾಲ ಜನರನ್ನು ಮನರಂಜಿಸಲಿದೆ. ಇದರ ನಡುವೆ ಈ ಬಾರಿ ಬಿಗ್ ಬಾಸ್ ಮನೆಗೆ ಬರುವ ಕಂಟೆಸ್ಟೆಂಟ್ಸ್ ಯಾರು ಎಂಬುದು ಅಭಿಮಾನಿಗಳ ಕುತೂಹಲ. ಕಲರ್ಸ್ ಕನ್ನಡ ಇದೀಗ ಕೊಂಚ ಈ ಕುತೂಹಲವನ್ನು ತಣಿಸುವ ಪ್ರಯತ್ನ ಮಾಡಿದೆ.

 

 ಹೌದು, ಬಿಗ್ ಬಾಸ್ ಸೀಸನ್ 12ಕ್ಕೆ ಎಂಟ್ರಿ ಕೊಡಲಿರುವ ಮೊದಲ ಮೂರು ಸ್ಪರ್ಧಿಗಳ ಹೆಸರನ್ನು ಕಲರ್ಸ್ ಕನ್ನಡ ರಿವಿಲ್ ಮಾಡಿದೆ. ಮಂಜು ಭಾಷಿಣಿ, ಕಾಕ್ರೋಚ್ ಸುಧಿ ಹಾಗೂ ಮಲ್ಲಮ್ಮ ಹೆಸರು ರಿವೀಲ್ ಆಗಿದೆ.  ಇದರಲ್ಲಿ ಮಂಜು ಮತ್ತು ಕಾಕ್ರೋಚ್ ಸುಧಿ ಅವರು ನಟನೆಯ ಹಿನ್ನೆಲೆಯಲ್ಲಿ ಗುರುತಿಸಿಕೊಂಡು ಮುನ್ನಲೆಗೆ ಬಂದರೆ ಮಲ್ಲಮ್ಮ ಮಾತ್ರ ತಮ್ಮ ವಿಶೇಷ ಪ್ರತಿಭೆಯಿಂದ ಗುರುತಿಸಿಕೊಂಡು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ವಿಚಾರವನ್ನು ಕಲರ್ಸ್ ಕನ್ನಡದನ್ನು instagram ಪೇಜ್ ನಲ್ಲಿ ಹಂಚಿಕೊಂಡಿದೆ.

 

ಕಾಕ್ರೋಚ್ ಸುಧಿ ಅವರು ಸಿನಿಮಾಗಳಲ್ಲಿ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರು ‘ಟಗರು’ ಸಿನಿಮಾದಲ್ಲಿ ಕಾಕ್ರೋಚ್ ಪಾತ್ರ ಮಾಡಿದ್ದರು. ಅಂದಿನಿಂದ ಅವರು ಕಾಕ್ರೋಚ್ ಸುಧಿ ಎಂದೇ ಫೇಮಸ್ ಆದರು. ಮಂಜು ಭಾಷಿಣಿ ಅವರು ಕೂಡ ಬಿಗ್ ಬಾಸ್​ಗೆ ಬರುತ್ತಿದ್ದಾರೆ. ಅವರು ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ಲಲಿತಾಂಬ ಹೆಸರಿನ ಪಾತ್ರ ಮಾಡಿದ್ದರು. ಅವರು ಸಿನಿಮಾಗಳಲ್ಲೂ ಮಾಡಿದ್ದಾರೆ. ಜೀ ಕನ್ನಡದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಅವರು ಬಂಗಾರಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಮೂರನೇ ಸ್ಪರ್ಧಿಯಾಗಿ ಮಲ್ಲಮ್ಮ ಅವರು ಬರುತ್ತಿದ್ದಾರೆ. ಅವರು ಉತ್ತರ ಕರ್ನಾಟಕದವರು.  ಮಾತಿನ ಮಲ್ಲಿ ಮಲ್ಲಮ್ಮ ಎಂದೇ ಫೇಮಸ್. ರೀಲ್ಸ್ ಮಾಡಿಯೂ ಫೇಮಸ್ ಆಗಿದ್ದಾರೆ.