Mukaleppa: ನಾನು ಕೂಡ ಹಿಂದೂ, ನಾನು ಯಾವ ಮತಾಂತರ ಮಾಡಿಲ್ಲ – ಲವ್ ಜಿಹಾದ್ ಕುರಿತು ಮುಕಳೆಪ್ಪ ಫಸ್ಟ್ ರಿಯಾಕ್ಷನ್

Share the Article

Mukaleppa: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿಯನ್ನು ಮದುವೆಯಾದ ಕನ್ನಡದ ಖ್ಯಾತ ಯೂಟ್ಯೂಬರ್‌ ಕ್ವಾಜಾ ಶಿರಹಟ್ಟಿ ಅಲಿಯಾಸ್‌ ಮುಕಳೆಪ್ಪ ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಈ ಬೆನ್ನಲ್ಲೇ ಲವ್ ಜಿಹಾದ್ ಆರೋಪ ಕೂಡ ಕೇಳಿಬಂದಿತ್ತು. ಇದೀಗ ಈ ಕುರಿತು ಮುಕಳೆಪ್ಪ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.

ಹೌದು, ಮುಕಳೆಪ್ಪ ಜೊತೆ ಆತನ ಪತ್ನಿ ಗಾಯತ್ರಿ ಒಟ್ಟಾಗಿ ವಿಡಿಯೋವನ್ನು ಮಾಡಿದ್ದು ಮೊದಲು ಮಾತನಾಡಿದ ಮುಕಳೆಪ್ಪ, “ಎಲ್ಲರೂ ಮುಕಳೆಪ್ಪ ಲವ್ ಜಿಹಾದ್ ಎಂದು ಹೇಳುತಿದ್ದಾರೆ. ಆದರೆ‌ ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ. ಇಬ್ಬರು ಇಷ್ಟ ಪಟ್ಟು ಮದುವೆಯಾಗಿದ್ದೆವೆ. ನಾವು ಇಬ್ಬರೂ ಮತಾಂತರಗೊಂಡಿಲ್ಲ. ನನ್ನ ಪತ್ನಿ ಯಾವ ಧರ್ಮದಲ್ಲಿ ಹುಟ್ಟಿದ್ದಾಳೆ ಅದೇ ಧರ್ಮ ಪಾಲಿಸ್ತೆನೆ. ನಾನು ಹುಟ್ಟಿದ ಧರ್ಮವನ್ನೇ ನಾನು ಪಾಲಿಸ್ತೆನೆ. ಯಾವುದೇ ಮತಾಂತರ ಮಾಡಲ್ಲ. ಕಲಾವಿದರಲ್ಲಿ ಯಾವುದೇ ಜಾತಿ ಧರ್ಮ ತರಬೇಡಿ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೆನೆ ಎಂದರೆ ನಾನು‌ ಕುಡಾ ಕನ್ನಡ ಹಿಂದೂನೇ. ನಮಗೆ ಯಾವುದೇ ತರ ಕಿರಿಕಿರಿ ಮಾಡೊದು ಮತ್ತು ನಮ್ಮ ಬಗ್ಗೆ ವಿಡಿಯೋ ಮಾಡಿ‌ ಹಾಕೊದು ಮಾಡಬೇಡಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ:Suicide: NEET ಪರೀಕ್ಷೆಯಲ್ಲಿ ಬಂತು ಶೇ.99.99 ಅಂಕ – ಡಾಕ್ಟರ್ ಆಗೋಕೆ ಇಷ್ಟ ಇಲ್ಲ ಎಂದು ಸಾವಿಗೆ ಶರಣಾದ ವಿದ್ಯಾರ್ಥಿ

ಇನ್ನು ಅದೇ ವೇಳೆ ಮುಕಳೆಪ್ಪ ಪತ್ನಿ ಗಾಯತ್ರಿ ಕುಡಾ ಹೇಳಿಕೆ ನೀಡಿದ್ದು, ನಾನು ಯಾವತ್ತೂ ಹಿಂದೂ ಆಗೇ ಇದ್ದೇನೆ. ನನ್ನ ಪತಿ ನನಗೆ ಮತಾಂತರ ಮಾಡೊದು ಎನ್ನುವದು ಎಲ್ಲ ಸುಳ್ಳು ಸುದ್ದಿ. ಇದನ್ನ‌ ಯಾರೂ ನಂಬಬೇಡಿ. ಮುಕಳೆಪ್ಪನನ್ನ ಇಷ್ಟು ದಿನ ಹೇಗೆ ನೋಡಿದ್ದಿರೊ ಅದೇ ರೀತಿ ನೋಡ್ರಿ. ಎಂದು ಕೈ‌ಮುಗಿದು ಕೇಳ್ತೆನೆ, ನಮ್ಮನ್ನ ಬದುಕಲು ಬಿಡಿ ಎಂದು ಗಾಯತ್ರಿ ಹೇಳಿದ್ದಾರೆ.

Comments are closed.