Mysuru Dasara: ಪ್ರಮೋದಾ ದೇವಿ ಒಡೆಯರ್ ಗೆ ದಸರಾ ಅಧಿಕೃತ ಆಹ್ವಾನ

Share the Article

Mysuru Dasara: ಸೆ.22 ರಂದು ಪ್ರಾರಂಭವಾಗಲಿರುವ ನಾಡಹಬ್ಬ ಮೈಸೂರು (dasara mysuru) ದಸರಾ ಅಧಿಕೃತ ಆಹ್ವಾನವನ್ನು ಯದುವಂಶದ ಪ್ರಮೋದಾ ದೇವಿ ಒಡೆಯರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ ಮಹದೇವಪ್ಪ (H C Mahadevappa) ಅವರು ನೀಡಿದ್ದಾರೆ.

ಈ ವೇಳೆ ಮಾತನಾಡಿದ ಹೆಚ್‌.ಸಿ ಮಹದೇವಪ್ಪ ಸಚಿವರು, ದಸರಾಗೆ ಯಾವತ್ತೂ ಯದುವಂಶದಿಂದ ಯಾವುದೇ ತೊಂದರೆ ಆಗಿಲ್ಲ. ಪ್ರತಿ ದಸರಾಗೂ ಯದುವಂಶದ ಸಹಕಾರ ಇರುತ್ತದೆ. ಈ ಬಾರಿಯ ದಸರಾಗೆ ಉತ್ತಮ ಸಹಕಾರ ನೀಡುತ್ತೇವೆ ಎಂದು ಪ್ರಮೋದಾ ತಿಳಿಸಿದರು ಎಂದರು.

ಈಗಾಗಲೇ ಬಾನು ಮುಷ್ತಾಕ್‌ ಅವರಿಂದ ದಸರಾ ಉದ್ಘಾಟಿಸುತ್ತಿರುವ ಬಗ್ಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಯದುವಂಶಕ್ಕೆ ದಸರಾದ ಆಹ್ವಾನ ನೀಡಿದ್ದಾರೆ.

Comments are closed.