America : ಡೊನಾಲ್ಡ್ ಟ್ರಂಪ್ ಆಪ್ತಮಿತ್ರನಿಗೆ ಗುಂಡಿಕ್ಕಿ ಭೀಕರ ಹತ್ಯೆ!!

Share the Article

America: ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಆಪ್ತಮಿತ್ರ, ಅಮೆರಿಕದ ಬಲಪಂಥೀಯ ಕಾರ್ಯಕರ್ತ ಮತ್ತು ನಿರೂಪಕ ಚಾರ್ಲಿ ಕಿರ್ಕ್ (Charlie Kirk) ಅವರನ್ನು ವೇದಿಕೆಯಲ್ಲೇ ಗುಂಡಿಕ್ಕಿ ಹತ್ಯೆ (Firing) ಮಾಡಿರುವಂತಹ ಘಟನೆ ಬುಧವಾರ ನಡೆದಿದೆ.

ವಾಷಿಂಗ್ಟನ್ ನ ಉತಾಹ್ ಕಾಲೇಜಿನ ಆವರಣದಲ್ಲಿ ಈ ಘಟನೆ ನಡೆದಿದೆ. ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ. ಅವರ ಕುತ್ತಿಗೆ ಭಾಗಕ್ಕೆ ಗುಂಡು ತಗುಲಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸೆಪ್ಟೆಂಬರ್ 10 ರಂದು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರ ಮೇಲೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್‌ ಆಗಿರುವ ಭನಾನಕ ವಿಡಿಯೋದಲ್ಲಿ ಚಾರ್ಲಿ ಕಿರ್ಕ್ ವೇದಿಕೆಯಲ್ಲಿ ಕುಳಿತು, ಮೈಕ್‌ ಹಿಡಿದುಕೊಂಡು ಮಾತನಾಡುತ್ತಿದ್ದ ಸಂದರ್ಭವೇ ದಾಳಿಕೋರ ಗುಂಡು ಹಾರಿಸಿದ್ದಾನೆ. ಗುಂಡು ನೇರವಾಗಿ ಕಿರ್ಕ್ ಅವರ ಕತ್ತಿಗೆ ತಗುಲಿದೆ. ತಕ್ಷಣ ಗುಂಡು ತಗುಲಿದ ಭಾಗದಿಂದ ವಿಪರೀತ ರಕ್ತಸ್ರಾವ ಆಗಿದ್ದಲ್ಲದೇ ಅವರು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಹತ್ಯೆ ಘಟನೆಗೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. FBI ನಿರ್ದೇಶಕ ಕಾಶ್ ಪಟೇಲ್ ಆರಂಭದಲ್ಲಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದರು, ಆದರೆ ನಂತರ ಆ ವ್ಯಕ್ತಿಯನ್ನು ವಿಚಾರಣೆಯ ನಂತರ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಬಂಧನದಲ್ಲಿದ್ದ ವ್ಯಕ್ತಿ, ಉದ್ದೇಶ ಅಥವಾ ಯಾವುದೇ ಕ್ರಿಮಿನಲ್ ಆರೋಪವನ್ನು ಅಧಿಕಾರಿಗಳು ತಕ್ಷಣ ಗುರುತಿಸಲಿಲ್ಲ.

ಇದನ್ನೂ ಓದಿ:Holidays: ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ: ಯಾವಾಗಿಂದ ರಜೆ ಆರಂಭ? ಎಷ್ಟು ದಿನ?

ಅಮೆರಿಕಾ ಅಧ್ಯಕ್ಷ ಟ್ರಂಪ್ ಟ್ರೂತ್ ಸೋಶಿಯಲ್ನಲ್ಲಿ ಚಾರ್ಲಿ ಕಿರ್ಕ್ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಅದೇ ಸಮಯದಲ್ಲಿ, ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಕೂಡ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

Comments are closed.