ಧರ್ಮಸ್ಥಳ: ಭಾರೀ ಕಾನ್ಫಿಡೆನ್ಸ್’ನಲ್ಲಿ ಗಿರೀಶ್ ಮಟ್ಟನ್ನನವರ್, ದೊಡ್ಡ ಬೆಳವಣಿಗೆ ಒಂದರ ಸೂಚನೆ?

ಧರ್ಮಸ್ಥಳ: ತಲೆ ಬುರುಡೆ ಮತ್ತು ನೂರಾರು ಹೆಣ ಹೂತ ಪ್ರಕರಣ ಸಂಬಂಧ ದಿನಕ್ಕೊಂದು ಹೊಸ ಕಥೆ ಮತ್ತು ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅಲ್ಲಲ್ಲಿ ಹೊಸ ಹೊಸ ಪಾತ್ರಧಾರಿಗಳು ಹುಟ್ಟಿಕೊಳ್ಳುತ್ತಿದ್ದಾರೆ ತನಿಖೆಯ ಗತಿ ಬದಲಾಗುತ್ತಿದೆ. ಮಾಧ್ಯಮಗಳು ಕಥೆಗೆ ಬಣ್ಣ ಬಣ್ಣದ ಚಿತ್ರಕಥೆ ಕ್ಲೈಮ್ಯಾಕ್ಸ್ ತಾವೇ ಕಲ್ಪಿಸಿ ರೂಪಿಸಿ ಬಿತ್ತರಿಸುತ್ತಿವೆ. ಈ ಮಧ್ಯೆ ಜನಸಾಮಾನ್ಯರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಅಂತ ಗೊಂದಲ ಶುರುವಾಗಲು ಪ್ರಾರಂಭಿಸಿದೆ.

ಸುಜಾತಾ ಭಟ್ ಪಾತ್ರ ಎಂಟ್ರಿ ಆಗಿ ಮಗಳು ಅನನ್ಯಾ ಭಟ್ ಗಾಗಿ ನ್ಯಾಯ ಕೇಳಲು ಬಂದ ನಂತರ ಅದ್ಯಾಕೋ ಹೋರಾಟಗಾರರ ಮೇಲೆ ಅನುಮಾನ ಶುರುವಾಗಲು ಪ್ರಾರಂಭವಾಗಿದೆ. ಕೆಲ ಮಾಧ್ಯಮಗಳು ‘ಬುರುಡೆ ಗ್ಯಾಂಗ್ ‘ ಅಂದು ಪ್ರೋಪೋಗಂಡ ಶುರುವಿಟ್ಟಿವೆ. ಇದರ ಜತೆಗೆ ಈಗ ಅನಾಮಿಕನ ಬಂಧನ ಆಗಿದ್ದು, ಸೌಜನ್ಯ ಹೋರಾಟಗಾರರ ಬಂಧನ ಕೂಡಾ ಆಗುತ್ತೆ ಅನ್ನುವ ಸುದ್ದಿ ಪುಕಾರು ಏಳುತ್ತಿದೆ. ನಿಜಕ್ಕೂ ಸತ್ಯ ಏನು ?, ಅನಾಮಿಕನ ಕೈಗೆ ಯಾರೋ ಬುರುಡೆ ಕೊಟ್ಟು ಧರ್ಮಸ್ಥಳದ ಬಗ್ಗೆ ಪ್ರಚಾರ ಮಾಡಲು ಹೇಳಿದ್ದರ..??! ಈ ಬಗ್ಗೆ ತನಿಖೆ ನಡೆಯುತ್ತಿದೆ.
ಬುರುಡೆ ತಂದು ಕೊಟ್ಟದ್ದು ಯಾರು?
ಈ ಸಂದರ್ಭ, ಸುಜಾತ ಭಟ್ ಪ್ರಕರಣದ ನಂತರ ಹೋರಾಟಗಾರರಲ್ಲಿ ಕೊಂಚ ವಿಚಲನೆ ಕಂಡು ಬಂದಿದ್ದು ನಿಜವೇ ಆದರೂ, ಈಗಿನ ಲೀಡಿಂಗ್ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟನ್ನನವರ್, ಜಯಂತ್ ಟಿ ಇತ್ಯಾದಿ ಫ್ರಂಟ್ ಲೈನ್ ನಾಯಕರ ಕಾನ್ಫಿಡೆನ್ಸ್ ಕೊಂಚವೂ ಕಮ್ಮಿಯಾಗಿಲ್ಲ. “ಹೋರಾಟದಲ್ಲಿ ಏರು ಪೇರು ಹಾದಿ ಸಹಜ. ಮಾಧ್ಯಮಗಳು ದಿನಕ್ಕೊಂದು ಊಹಾಪೋಹದ ಸುದ್ದಿ ಪ್ರಕಟಿಸಿ ಜನರನ್ನು ದಿಕ್ಕು ತಪ್ಪಿಸುತ್ತಿವೆ. ಲ್ಯಾಬ್ ನಿಂದ ತಲೆ ಬುರುಡೆ ತರಲಾಗಿದೆ ಎಂದು ಟಿವಿಯೊಂದು ಪ್ರಸಾರ ಮಾಡಿದೆ. ಮಾಧ್ಯಮ ಟ್ರೈಯಲ್ ಶುರುವಾಗಿದೆ. ಅವುಗಳ ಬಗ್ಗೆಯೇ ತನಿಖೆ ನಡೆಯಬೇಕು. ನಾವು ಇವ್ಯಾವುಗಳಿಂದಲೂ ವಿಚಲಿತರಾಗಿಲ್ಲ” ಅಂದಿದ್ದಾರೆ ಮಟ್ಟನ್ನನವರ್! ನಮ್ಮ ಮೇಲೆ ಧರ್ಮಸ್ಥಳದ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿದ್ದಾರೆ. ಆದರೆ ಇದುವರೆಗೂ SIT ಆಗಲೀ, ಸ್ಥಳೀಯ ಪೊಲೀಸರಿಗೇ ಆಗಲಿ ಅಂತಹಾ ಒಂದೇ ಒಂದು ಸಣ್ಣ ತುಣುಕು ಕೂಡಾ ಸಿಕ್ಕಿಲ್ಲ ಅಂತ ಗಿರೀಶ್ ಮಟ್ಟನ್ನನವರ್ ಖಚಿತ ನುಡಿಯಲ್ಲಿ ಹೇಳಿದ್ದು, ಬುರುಡೆ ಗ್ಯಾಂಗ್ ಮತ್ತು ಕ್ಷೇತ್ರಕ್ಕೆ ಅಪಚಾರ ಇತ್ಯಾದಿ ಪ್ರಚಾರಗಳಿಗೆ ಪುರಾವೆ ಪೊಲೀಸರಿಗೆ ಸಿಕ್ಕಿಲ್ಲ ಎಂದು ಒತ್ತಿ ಹೇಳಿದ್ದಾರೆ.
ಕಳೆದೆರಡು ದಿನಗಳಿಂದ ಸೌಜನ್ಯ ಹೋರಾಟಗಾರರ ಅಪ್ರತಿಮ ನಾಯಕ ಮಹೇಶ್ ತಿಮರೋಡಿ ಮನೆಯಲ್ಲಿ ಮಹಜರು ಕಾರ್ಯಗಳು ನಡೆಯುತ್ತಿವೆ. ದೂರುದಾರ ಮಾಸ್ಕ್ ಮ್ಯಾನ್ ತಿಮರೋಡಿಯ ಮನೆಯಲ್ಲಿ ತಂಗಿದ್ದ. ಆತನ ಮೊಬೈಲ್ ಮತ್ತು ಇತರ ವಸ್ತುಗಳು ಮಹೇಶ್ ಶೆಟ್ಟಿಯವರ ಮನೆಯಲ್ಲಿ ಸಿಕ್ಕಿದ್ದವು ಎನ್ನುವ ಸುದ್ದಿಯನ್ನು ಮಾಧ್ಯಮಗಳು ಹರಡಿ ಬುರುಡೆ ಗ್ಯಾಂಗ್ ನಲ್ಲಿ ಸೌಜನ್ಯ ಹೋರಾಟಗಾರರ ಪಾತ್ರ ಇದೆ ಅನ್ನುವ ಮಾದರಿಯ ಅನುಮಾನ ಬರುವ ಸುದ್ದಿಗಳನ್ನು ಪ್ರಕಟಿಸಿದ್ದವು. ಇವತ್ತಿಗೂ ಹೊಸ ಹೊಸ ಊಹಾಪೋಹಗಳ ಕಥೆ ಬಿತ್ತರಗೊಳ್ಳುತ್ತಲೇ ಇವೆ.
ಆದರೆ, ಕಾನೂನಿನ ಕೋರ್ಟ್ ಗಳ ದೃಷ್ಟಿಯಲ್ಲಿ ಅನಾಮಿಕ, ವಿಸಿಲ್ ಬ್ಲೋವರ್, ಚಿನ್ನಯ್ಯ ಓರ್ವ ಸಾಕ್ಷಿದಾರ. ಸಾಕ್ಷಿದಾರನನ್ನು ಸೇಫ್ ಮಾಡುವ, ಆತನಿಗೆ ಆತಿಥ್ಯ ನೀಡುವುದಕ್ಕೆ ಯಾವುದೇ ಅಡ್ಡಿ ಆತಂಕವಿಲ್ಲ. ಕೆಲ ದಿನ ಚಿನ್ನಯ್ಯ ಮಹೇಶ್ ಶೆಟ್ಟಿ ತಿಮರೋಡಿ ಒಡೆತನದ ಮನೆಯಲ್ಲಿ ತಂಗಿದ್ದ ಕಾರಣ ಆತನ ಮೊಬೈಲ್ ಮತ್ತು ಇತರ ವಸ್ತುಗಳು ತಿಮರೋಡಿ ಮನೆಯಲ್ಲಿ ಇರೋದು ಸಹಜ. ಹಾಗಾಗಿ ಸದ್ಯದ ಮಟ್ಟಿಗೆ ತಿಮರೋಡಿ ಮನೆಗೆ ಆದದ್ದು ರೈಡ್ ಅಲ್ಲ, ಅದು ಸ್ಥಳ ಮಹಜರು ಎನ್ನಬಹುದು.
ತುಳುಕುವ ಆತ್ಮವಿಶ್ವಾಸದಲ್ಲಿ ಸೌಜನ್ಯ ಹೋರಾಟಗಾರರು
ಯಾರೂ ಏನೇ ಹೇಳಲಿ, ಮೂಲಗಳ ಪ್ರಕಾರ ಸೌಜನ್ಯ ಹೋರಾಟಗಾರರು ಅತ್ಯಂತ ಉತ್ಸಾಹದಿಂದ ಆತ್ಮವಿಶ್ವಾಸದಿಂದ ಮತ್ತು ಇನ್ನಿಲ್ಲದ ತಾಳ್ಮೆಯಿಂದ ಇದ್ದಾರೆ. “ನಮ್ಮ ಮೇಲೆ ತನಿಖೆ ನಡೆಯಲಿ. ನಮ್ಮ ಆರ್ಥಿಕ ಮೂಲದ ತನಿಖೆ ಆಗಲಿ, ಸ್ವಾಗತ. ತಿಮರೋಡಿ ಮನೆಗೆ ರೈಡ್ ಮಾಡಿದ್ರೆ ಹೊಗೆ ಹಾಕಿದ ಕೆಲವು ರಬ್ಬರ್ ಗಿಡದ ಶೀಟ್ ಸಿಗುತ್ತೆ ಅಷ್ಟೇ” ಅಂತ ಗಿರೀಶ್ ಮಟ್ಟಣ್ಣನವರ್ ವ್ಯಂಗ್ಯವಾಡಿದ್ದಾರೆ.
ಕೆಲವೊಂದು ಬಕೆಟ್ ಮಾಧ್ಯಮಗಳ ವರದಿಯನ್ನು ನೋಡಿದರೆ ಎಸ್ಐಟಿ ತನಿಖೆಯಲ್ಲಿ ದೂರುದಾರ ಮಾಸ್ಕ್ ಮ್ಯಾನ್ ಚಿನ್ನಯ್ಯ ಮತ್ತು ಆತನ ಬೆಂಬಲಕ್ಕೆ ನಿಂತಿರುವ ಸೌಜನ್ಯ ಪರ ಹೋರಾಟಗಾರ ಮುಖಂಡರೆಲ್ಲರೂ ಆರೋಪಿತರಾಗಿ ಸದ್ಯದಲ್ಲೇ ಶಿಕ್ಷೆ ಅನುಭವಿಸುತ್ತಾರೆಂಬoತೆ ಬಿಂಬಿಸಲಾಗುತ್ತಿದೆ. ಆದರೆ ಎಸ್ಐಟಿ ತನಿಖೆ ಎಂಬುದು ಪೇಮೆಂಟ್ ಗಿರಾಕಿಗಳಾದ ಕೆಲವೊಂದು ಬಕೆಟ್ ಮಾಧ್ಯಮಗಳು ಹೇಳುವಂತಹಾ ಒಂದೇ ಆಂಗಲ್ ನ ಅಥವಾ ಕೇವಲ ಧರ್ಮಸ್ಥಳದವರನ್ನು ಬಚಾವ್ ಮಾಡಲೆಂದೇ ನಡೆಸುವ ತನಿಖೆಯಾಗಿರುವುದಿಲ್ಲ. ಅದರ ಬದಲು ಎಸ್ಐಟಿಯ ತನಿಖೆ ಅತ್ಯಂತ ಸೂಕ್ಷ್ಮ ಮತ್ತು ಅತ್ಯಂತ ಚಾಣಾಕ್ಷತೆಯದ್ದಾಗಿದ್ದು ಧರ್ಮಸ್ಥಳದ ಸಮಾಧಿ ಶೋಧದ ಸಂದರ್ಭ ಎಸ್ಐಟಿಗೆ ಹಲವಾರು ಪೂರಕ ಸಾಕ್ಷಿಗಳು ಸಿಕ್ಕಿರುವುದರಿಂದ ಇದು ಆರಂಭಿಕ ತನಿಖೆಯಷ್ಟೇ. ಹೀಗಾಗಿ ಮಾಸ್ಕ್ ಮ್ಯಾನ್ ಸೇರಿದಂತೆ ಇದಕ್ಕೆ ಪೂರಕವಾದ ಇತರ ಎಲ್ಲಾ ಆಯಾಮಗಳ ತನಿಖೆ ಈಗಷ್ಟೇ ಆರಂಭವಾಗಿದ್ದು ಇದು ಮೊದಲ ಒಂದು ಹಂತದ ಆರಂಭಿಕ ತನಿಖೆ.
ಎರಡನೇ ಹಂತದಲ್ಲಿ ಧರ್ಮಸ್ಥಳದವರಿಗೆ ಡ್ರಿಲ್?
ಇದಾದ ಬಳಿಕ ನಡೆಯುವುದೇ ಎರಡನೇ ಹಂತದ ತನಿಖೆ. ಈ ತನಿಖೆಯಲ್ಲಿ ಈಗ ಮಾಸ್ಕ್ ಮ್ಯಾನ್ ನನ್ನು ಇದೀಗ ಯಾವ ರೀತಿ ಡ್ರಿಲ್ ಮಾಡಲಾಗುತ್ತದೆಯೋ ಅದೇ ರೀತಿ ಮಾಸ್ಕ್ ಮ್ಯಾನ್ ದೂರು ನೀಡಿದ ಧರ್ಮಸ್ಥಳದವರ ವಿರುದ್ಧವೂ ಎಸ್ಐಟಿ ತನಿಖೆ ನಡೆಸಬೇಕಾದುದು ಕಾನೂನಿನ ಪ್ರಕಾರ ಅನಿವಾರ್ಯವಾಗಿರುತ್ತದೆ. ಆದರೆ ಧರ್ಮಸ್ಥಳದವರು ಈ ರೀತಿಯ ತನಿಖೆಗೆ ಒಳಪಡಬಾರದು ಎಂಬ ಕಾರಣಕ್ಕಾಗಿಯೇ ಬೇರೆ ಬೇರೆ ರಾಜಕೀಯ ಪಕ್ಷಗಳು ಹಾಗೂ ಕೆಲವೊಂದು ಸಂಘಟನೆಗಳು ಮತ್ತು ಕೆಲವೊಂದು ಪೇಮೆಂಟ್ ಬಕೆಟ್ ಮಾಧ್ಯಮಗಳು ಸೇರಿಕೊಂಡು ಸಮಾಜಕ್ಕೆ ತಪ್ಪು ಮಾಹಿತಿ ನೀಡುತ್ತಾ ಜನರ ಅಭಿಪ್ರಾಯಗಳೆಲ್ಲವೂ ಧರ್ಮಸ್ಥಳದ ಪರವಾಗಿಯೇ ಕೇಂದ್ರೀಕರಿಸುವಂತೆ ಮಾಡಿ ಎಸ್ಐಟಿ ಮತ್ತು ಸರಕಾರದ ವಿರುದ್ಧ ಜನ ಆಕ್ರೋಷಿತರಾಗುವಂತೆ ಪ್ರಚೋದಿಸುವ ಹುನ್ನಾರ ಇದಾಗಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.
ಇದೀಗ ಧರ್ಮಸ್ಥಳ ಪರವಾಗಿ ಇಂದು ನಾಯಕರುಗಳು ಮತ್ತು ಬಿಜೆಪಿಯ ಬೃಹತ್ ದಂಡು ದಂಡೆಯಾತ್ರೆಯ ಮಾದರಿಯಲ್ಲಿ ಧರ್ಮಸ್ಥಳಕ್ಕೆ ಪ್ರವಾಸ ಕೈಗೊಂಡು ಧರ್ಮ ಸಂರಕ್ಷಣೆಯ ಹೆಸರಿನಲ್ಲಿ ಬೆಂಬಲ ಸೂಚಿಸಿವೆ. ಧರ್ಮಸ್ಥಳ ಪರವಾಗಿ ಹರಿದು ಬರುತ್ತಿರುವ ಬೆಂಬಲ ಗಾಬರಿ ಮೂಡಿಸುವ ಮಟ್ಟಕ್ಕಿದೆ. ರಾಜಕೀಯ ನೇತಾರರು, ಶಾಸಕರುಗಳು, ಮಂತ್ರಿಗಳು, ಉದ್ಯಮಿಗಳ ಮತ್ತು ಇತರ ಪ್ರಭಾವಿಗಳ ಪ್ರವಾಹ ಮಾದರಿಯ ಸಪೋರ್ಟ್ ಧರ್ಮಸ್ಥಳದ ಕಡೆಗಿದೆ. ಜನಸಾಮಾನ್ಯರು, ಹಿಂದೂ ಕಾರ್ಯಕರ್ತರು, ಸಮೀರ್ ಎಂಟ್ರಿ ನಂತರ ಮುಸ್ಲಿಂ ಸಮುದಾಯಗಳು ಪಾರದರ್ಶಕ ತನಿಖೆಯ ಪರವಾಗಿ ನಿಂತಿದ್ದಾರೆ. ಒಂದು ರೀತಿಯಲ್ಲಿ ಇದು ಆರ್ಥಿಕ ಹೋರಾಟ ಅಂತ ಹೇಳಿದ್ರೆ ತಪ್ಪಾಗಲಾರದು. ಇದು ಹಣವಂತರ ಮತ್ತು ದುಡ್ಡಿಲ್ಲದವರ ನಡುವಿನ ಕದನ. ಇದು ಮಾಸ್ ಮತ್ತು ಕ್ಲಾಸ್ ಸ್ಟ್ರಗಲ್!
ಅತ್ತ ಬಿಜೆಪಿಯ ತಂಡಗಳು ದಂಡು ದಂಡಾಗಿ ಧರ್ಮಸ್ಥಳಕ್ಕೆ ಆಗಮಿಸುತ್ತಿದೆ. ಏನೋ ದೊಡ್ಡ ಘಟನೆ ಶೀಘ್ರವಾಗಿ ನಡೆಯಲಿದೆಯೇ ಎನ್ನುವ ಮುನ್ಸೂಚನೆ ಕೊಟ್ಟ ಹಾಗಿದೆ ಬಿಜೆಪಿಯ ನಡೆ. ಒಂದು ಮಾಹಿತಿಯ ಪ್ರಕಾರ SIT ಈಗಾಗಲೇ ಭಾರೀ ಮಾಹಿತಿ ಕಲೆ ಹಾಕಿದೆ. ಒಂದು ವೇಳೆ ತನಿಖೆಯ ಎರಡನೇ ಹಂತದಲ್ಲಿ ಧರ್ಮಸ್ಥಳದವರ ಮೇಲೆ ಡ್ರಿಲ್ ಶುರುವಾದರೆ, ಆಗ ಧರ್ಮಸ್ಥಳದ ಸಪೋರ್ಟಗೆ ಇರಲಿ ಅಂತ ರಾಜಕೀಯ ನಾಯಕರನ್ನು ಕರೆಸಿ ಕೊಳ್ಳಲಾಗುತ್ತಿದೆ. SIT ತಂಡವು ಧರ್ಮಸ್ಥಳ ಗ್ಯಾಂಗ್ ಅನ್ನು ಮುಟ್ಟಿದರೆ, ಆಗ ದೊಡ್ಡ ಮಟ್ಟದಲ್ಲಿ ರಾಜಕೀಯ ಮತ್ತು ಸಂಸ್ಥೆಗಳ ಬೆಂಬಲ ಪಡೆದು ಪ್ರತಿರೋಧ ಒಡ್ಡುವುದು, (ಅ)ನ್ಯಾಯಕ್ಕೆ ಬೇಡಿಕೆ ಇಡುವ ನೆಪದಲ್ಲಿ ಕೇಂದ್ರದಿಂದ ED ಅಥವಾ NIA ಮುಂತಾದ ಸುಲಭದಲ್ಲಿ ದುರುಪಯೋಗಪಡಿಸಿಕೊಳ್ಳಬಹುದಾದ ತನಿಖಾ ತಂಡಗಳನ್ನು ತಂದು ಧರ್ಮಸ್ಥಳದವರನ್ನು ಬಚಾವ್ ಮಾಡುವ ಹುನ್ನಾರ ನಡೆದಿರುವ ಭಾರೀ ಶಂಕೆ ವ್ಯಕ್ತವಾಗಿದೆ.
ನಾವು ನೀವೆಲ್ಲ ಇಲ್ಲಿ ಕೂತು ಬುರುಡೆಯ ಕವಡೆ ನುಡಿಯಲು ಈ ಸಂದರ್ಭ ಬಳಕೆ ಆಗಬಾರದು. ಸತ್ಯ ಹೊರಕ್ಕೆ ಬರಲಿ. ಸರ್ಕಾರ ತನಿಖೆ ನಡೆಸುತ್ತಿರುವ ಕಾರಣ ತನಿಖೆಗೆ ಎಲ್ಲರೂ ಸಹಕರಿಸೋದು ಅಗತ್ಯ. ಸದ್ಯ ಕಲೆಕ್ಟ್ ಆದ ಮಾಹಿತಿಗಳ ಪ್ರಕಾರ SIT ಗೆ ಹಲವಾರು ಪೂರಕ ಸಾಕ್ಷಿಗಳು ಸಿಕ್ಕಿವೆ. ಸಾಕ್ಷಿದಾರ ಎಲ್ಲಿಯೂ ತನಗೆ ಯಾರೋ ಬುರುಡೆ ತಂದು ಕೊಟ್ರು ಅಂತ ಹೇಳಿಲ್ಲ. ಎಸ್ ಐಟಿ ತಂಡ ಆ ಬಗ್ಗೆ ಏನೂ ಮಾಹಿತಿ ಹೊರ ಹಾಕಿಲ್ಲ. ಸೌಜನ್ಯ ಹೋರಾಟಗಾರರು ಧೈರ್ಯದಿಂದ ಇದ್ದಾರೆ. ಹಾಗಾಗಿ ಬುರುಡೆ ಗ್ಯಾಂಗ್ ಅನ್ನೋದೆ ಒಂದು ದೊಡ್ಡ ಸುಳ್ಳು. ಬುರುಡೆ ಗ್ಯಾಂಗ್ ಎನ್ನುವ ಕಾನ್ಸೆಪ್ಟ್ ಅನ್ನು ಕೆಲ ಕರಪ್ಟ್, ಮಾರಿಕೊಂಡ ಮಾಧ್ಯಮಗಳ ಮೂಲಕ ಸೃಷ್ಟಿ ಮಾಡಿಸಲಾಗಿದೆ. ದಿನಕಳೆದಂತೆ ಈ ವಿಚಾರ ಸುಳ್ಳೆಂದು ಮನವರಿಕೆ ಆಗುತ್ತೆ ಅಂತಿದ್ದಾರೆ ಗಿರೀಶ್ ಮಟ್ಟನ್ನನವರ್!
ಒಟ್ಟಾರೆಯಾಗಿ ಹೇಳಬೇಕಾದರೆ, ಸದ್ಯದ ಮಟ್ಟಿಗೆ ಹೋರಾಟಗಾರರ ಕೈ ಮೇಲಾಗಿದೆ. ಕ್ಲಾಸ್, ಮಾಸ್ ಕದನದಲ್ಲಿ ಮಾಸ್ (ಜನ ಸಮುದ್ರ) ಮುಂದಿದೆ ಅನ್ನಬಹುದು. ಮಂಥನ ಮುಂದುವರೆಯಲಿ. ಬರುವ 2 ವಾರಗಳು ತನಿಖೆಯ ದಿಕ್ಕು ದಿಕ್ಸೂಚಿ ಸೂಚಿಸಬಲ್ಲ ದಿನಗಳು. ಎಸ್ಐಟಿ ತನಿಖೆಯಲ್ಲಿ ಮಹತ್ತರ ಬೆಳವಣಿಗಳು ನಡೆಯಬಹುದಾದ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ.
Comments are closed.