ಮದುವೆ ಸಮಾರಂಭದಲ್ಲಿ ಸ್ಟೈಲಿಶ್ ಸ್ಟೆಪ್ ಹಾಕಿದ ತಾತಪ್ಪ | ವಿಡಿಯೋ ನೋಡಿದ ಯುವಕ-ಯುವತಿಯರಿಗೆ ಸಣ್ಣಗೆ ನಾಚಿಕೆ, ಹಾಗಿದೆ ಇಲ್ಲಿರೋ ವಿಡಿಯೋ !!

ನೃತ್ಯ ಮಾಡುವ ಕಲೆ ಎಲ್ಲರಿಗೂ ಒಲಿದು ಬರುವುದಿಲ್ಲ. ಪ್ರತಿಭೆ ಇದ್ದರೂ ಸಹ ಕೆಲವರಿಗೆ ನೃತ್ಯ ಮಾಡುವ ಉತ್ಸಾಹ ಇರುವುದಿಲ್ಲ. ಆದರೆ ಇಲ್ಲಿರುವ ವಯಸ್ಕರೊಬ್ಬರು ಮದುವೆ ಸಮಾರಂಭದಲ್ಲಿ ಡಿಜೆ ಮ್ಯೂಸಿಕ್​ಗೆ ಸಕತ್​ ಆಗಿ ನೃತ್ಯ ಮಾಡಿದ್ದಾರೆ. ಇವರನ್ನು ನೋಡಿ ಯುವಕ ಯುವತಿಯರಿಗೆ ಸಣ್ಣಗೆ ನಾಚಿಕೆ, ಆ ಮಟ್ಟಿಗಿದೆ ಅವರ ಸ್ಟೈಲ್ !!

ಈ ಹಿರಿಯ ವ್ಯಕ್ತಿ ಸಹ ನಾವು ಯಾವುದರಲ್ಲೂ ಕಡಿಮೆ ಇಲ್ಲ ಅನ್ನುತ್ತಾ ಯುವಕರಂತೆ ಸ್ಟೆಪ್​ ಹಾಕುತ್ತಿದ್ದಾರೆ. ವಯಸ್ಸಾಯಿತು ಎಂಬುದೇ ಅದೆಷ್ಟೋ ಜನರ ಚಿಂತೆ! ಆದರೆ ಆರೋಗ್ಯವೊಂದಿದ್ದರೆ, ಮುಖ್ಯವಾಗಿ ಮಾನಸಿಕವಾಗಿ ತಮ್ಮನ್ನು ತಾವು ಯುವಕರನ್ನಾಗಿ ಇಟ್ಟುಕೊಂಡರೆ, ಯಾವ ವಯಸ್ಸಿನಲ್ಲಿಯೂ ಸಹ ಯುವಕರಂತೆ ಉತ್ಸಾಹದಿಂದ ಇರಬಹುದು ಎಂಬುದಕ್ಕೆ ಇವರೇ ಸಾಕ್ಷಿ. ಅದರಲ್ಲಿಯೂ ನೃತ್ಯ ಮಾಡಿ ಅಂದಾಕ್ಷಣ ನಮಗೆ ವಯಸ್ಸಾಯ್ತು, ಕುಣಿಯೋಕೆ ಆಗಲ್ಲ ಎಂದು ಭುಜ ಕುಣಿಸಿ ದೂರ ಹೋಗುವವರ ಮಧ್ಯೆ ಇಲ್ಲೊಬ್ಬ ತಾತಪ್ಪ ( ವಯಸ್ಸಿನಲ್ಲಿ ಮಾತ್ರ) ಸಕತ್​ ಹಾಡಿಗೆ ಸೊಂಟ ಬಳುಕಿಸುತ್ತಾ ಸ್ಟೈಲಿಶ್​ ಸ್ಟೆಪ್​ ಹಾಕಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.

https://www.instagram.com/p/CP-F8LtDHsF/?utm_source=ig_embed&utm_campaign=embed_video_watch_again

ಇವರ ಸ್ಟೈಲಿಶ್​ ಸ್ಟೆಪ್​ಗೆ ಯುವಜನತೆಯೇ ಮರುಳಾಗಿದ್ದಾರೆ. ಸಕತ್​ ಆಗಿ ಸೊಂಟ ಬಳುಕಿಸುವ ಇವರು ಬಾಲಿವುಡ್ ನಾಚಿಕೊಳ್ಳುವಂತಹ ಒಳ್ಳೆಯ ಸ್ಟೆಪ್​ ಹಾಕ್ತಾರೆ ಎಂದು ಕಾಮೆಂಟ್​ ಮಾಡಿದ್ದಾರೆ. ಅವರ ಡಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ 40,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು ಯಾವೂರಿನಲ್ಲಿ ರೆಕಾರ್ಡ್ ಮಾಡಿದ ನೃತ್ಯ ಎಂಬ ಮಾಹಿತಿ ಲಭ್ಯವಿಲ್ಲ. ಊರು ಯಾವುದೇ ಆದರೂ ಅವರ ಡಾನ್ಸ್ ಇಡೀ ದೇಶಕ್ಕೆ ಲೈಕ್ ಆಗಿದೆ. ಒಂದು ಹೆಜ್ಜೆ ಡಾನ್ಸ್ ಮಾಡದವರನ್ನು ಕೂಡಾ ಹೆಜ್ಜೆ ಬೆರೆಸುವಂತಿದೆ ಈ ವಿಡಿಯೋ ತುಣುಕು.

Leave A Reply

Your email address will not be published.