ಪ್ರೀತಿಸಿದ ಯುವತಿಯೊಂದಿಗೆ ಮನಸ್ತಾಪ | ನೊಂದು ರಿಕ್ಷಾದೊಳಗೆ ಆತ್ನಹತ್ಯೆ ಮಾಡಿಕೊಂಡ ಚಾಲಕ

ಪ್ರೀತಿಸಿದ ಯುವತಿಯೊಂದಿನ ಮನಸ್ತಾಪದಿಂದ ಮನನೊಂದ ರಿಕ್ಷಾ ಚಾಲಕರೊಬ್ಬರು ರಿಕ್ಷಾದೊಳಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಅಲ್ಬಾಡಿ ಗ್ರಾಮದ ಚೆಣ್ಮಕಿ ಹಾಡಿ ಯಲ್ಲಿ ನಡೆದಿದೆ.

 

ಮೃತರನ್ನು ಬೆಳ್ವೆ ಗ್ರಾಮದ ಹೊನ್ಕಲ್ ನಿವಾಸಿ ಜಿಲ್ಲಾ ನಾಯ್ಕ ಎಂಬವರ ಮಗ ಈಶ್ವರ ನಾಯ್ಕ(30) ಎಂದು ಗುರುತಿಸಲಾಗಿದೆ. ಇವರು ಸುಮಾರು ಸಮಯದಿಂದ ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಮನಸ್ತಾಪ ಉಂಟಾಗಿದ್ದು, ಇದೇ ಚಿಂತೆಯಲ್ಲಿ ಜು.3ರಂದು ಮನೆಯಿಂದ ಅಲ್ಬಾಡಿ ಆಟೋರಿಕ್ಷಾ ನಿಲ್ದಾಣಕ್ಕೆ ಹೋಗುವುದಾಗಿ ಹೇಳಿದವರು ನಾಪತ್ತೆಯಾಗಿದ್ದರು.

ಎಲ್ಲಾ ಕಡೆ ಹುಡುಕಾಡಿದಾಗ ಜು.4ರಂದು ಬೆಳಗ್ಗೆ ಹಾಡಿಯಲ್ಲಿ ಆಟೋರಿಕ್ಷಾ ದೊಳಗೆ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿರುವುದು ಕಂಡು ಬಂದಿದೆ. ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.