Home News Swara Bhaskar: ಈ ಮಾಜಿ ಸಿಎಂ ಹೆಂಡತಿ ಮೇಲೆ ನನಗೆ ತುಂಬಾ ಕ್ರಶ್ – ಖ್ಯಾತ...

Swara Bhaskar: ಈ ಮಾಜಿ ಸಿಎಂ ಹೆಂಡತಿ ಮೇಲೆ ನನಗೆ ತುಂಬಾ ಕ್ರಶ್ – ಖ್ಯಾತ ನಟಿ ಶಾಕಿಂಗ್ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

 

 Swara Bhaskar: ಹುಡುಗಿಯರಿಗೆ ಹುಡುಗನ ಮೇಲೆ ಅಥವಾ ಹುಡುಗರಿಗೆ ಹುಡುಗಿಯ ಮೇಲೆ ಕ್ರಷ್ ಆಗುವುದು ಸಾಮಾನ್ಯ. ಆದರೆ ಇದೀಗ ಖ್ಯಾತ ನಟಿ ಒಬ್ಬರು ಮಾಜಿ ಸಿಎಂ ಅವರ ಹೆಂಡತಿ ಮೇಲೆ ನನಗೆ ತುಂಬಾ ಕ್ರಶ್ ಆಗಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಹೌದು, ನಟಿ ಸ್ವರಾ ಭಾಸ್ಕರ್ ಅವರು ನೀಡಿರುವ ಹೇಳಿಕೆಗಳು ಮತ್ತೊಮ್ಮೆ ವಿವಾದಕ್ಕೆ ಸಿಲುಕಿವೆ. ಲೈಂಗಿಕತೆ ಕುರಿತು ಅವರು ನೀಡಿರುವ ಹೇಳಿಕೆಗಳು ವೈರಲ್ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ತೀವ್ರ ಟೀಕೆಗಳಿಗೂ ಕಾರಣವಾಗಿದೆ.

ಅಂದಹಾಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರಿಗೆ ನಿಮ್ಮ ಕ್ರಶ್‌ ಯಾರು? ಎಂಬ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಸ್ವರಾ, ‘ನನಗೂ ಕ್ರಶ್‌ ಇದ್ದಾರೆ, ಅದು ಬೇರೆ ಯಾರೂ ಅಲ್ಲ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಎಂದಿದ್ದಾರೆ. ಈ ಹೆಸರು ಹೇಳಿರುವುದರಿಂದ ಉತ್ತರ ಪ್ರದೇಶದಲ್ಲಿ ನನ್ನ ಪತಿಯ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರಬಹುದು’ ಎಂದೂ ಸ್ವರಾ ನಗುತ್ತಾ ಹೇಳಿದ್ದಾರೆ. ಈ ವಿಡಿಯೋ ವೈರಲ್‌ ಆಗಿದ್ದು, ಸಖತ್‌ ಟ್ರೋಲ್‌ ಮಾಡಲಾಗುತ್ತಿದೆ.