ನಗ್ನ ಸ್ತ್ರೀಯರು ಮಾತ್ರ ಪ್ರವೇಶಿಸಬಹುದಾದ ಬೆತ್ತಲೆ ಕಾಡು | ಪುರುಷರಿಗೆ ಇಲ್ಲಿ ಪ್ರವೇಶ ನಿಷಿದ್ಧ !!
ಅದೊಂದು ಕಾಡು ಕೇವಲ ಮಹಿಳೆಯರ ಪ್ರವೇಶಕಷ್ಟೆ ಸೀಮಿತ. ಅಲ್ಲಿ ಪುರುಷರು ಪ್ರವೇಶಿಸುವುದು ಪೂರ್ತಿ ನಿಷಿದ್ಧ. ಅಷ್ಟೇ ಅಲ್ಲ, ಆ ಕಾಡನ್ನು ಪ್ರವೇಶಿಸುವ ಮುನ್ನ ಮಹಿಳೆಯರು ಪೂರ್ತಿ ನಗ್ನರಾಗಿ ಕಾಡಿನೊಳಕ್ಕೆ ಅಡಿಯಿಡಬೇಕು !
ಅಲ್ಲಿನ ಜನಸಮುದಾಯ ‘ ಪವಿತ್ರ ಕಾಡು ‘ ಎಂದು ಕರೆಯುವ ಈ ಬತ್ತಲೆ ಕಾಡು ಇರುವುದು ಇಂಡೋನೇಷ್ಯಾದಲ್ಲಿ. ಪಪುವಾ ಕಾಡು ಎಂದು ಕರೆಯಲ್ಪಡುವ ಈ ಕಾಡು ಇರುವುದು ಅಲ್ಲಿನ ಜಯಪುರ ಎಂಬ ಭಾರತೀಯ ಹೆಸರಿನ ಪಟ್ಟಣದ ವ್ಯಾಪ್ತಿಯಲ್ಲಿ.
ಈ ಕಾಡಿನ ಒಳಗೆ ಹೋಗುವ ಎಲ್ಲ ಮಹಿಳೆಯರು ತನ್ನ ಬಟ್ಟೆಗಳನ್ನು ಪೂರ್ತಿ ತೆಗೆದು ಬದಿಗಿಟ್ಟು ಒಳಹೊಕ್ಕ ಬೇಕು. ಅಲ್ಲಿ ಕೇವಲ ಮಹಿಳೆಯರು ಮಾತ್ರ ಪ್ರವೇಶ ಮಾಡಬಹುದಾದ ಕಾರಣ ಸ್ತ್ರೀಯರು ಪೂರ್ಣಪ್ರಮಾಣದ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ. ತಮ್ಮ ಬರಿಯ ಬತ್ತಲೆ ಮೈಯನ್ನು ಮರಳ ತೀರದ ನೊರೆಯಂತಹ ತಿಳಿಬಿಳಿ ಮರಳ ಮೇಲೆ ಒಣಹಾಕಿ ಬಿಡುತ್ತಾರೆ. ಹಾಗೆ ಸ್ವಲ್ಪ ಹೊತ್ತು ಮಲಗಿದ್ದು, ಬೆನ್ನು ಬಿಸಿಯಾಗಲು ಪ್ರಾರಂಭವಾಗುತ್ತಿದ್ದಂತೆ, ಕಾಡಿನ ಒಳಗೆ ಮತ್ತೊಂದು ತಣ್ಣಗಿನ ಜಾಗಕ್ಕಾಗಿ ಅಲೆದಾಟ. ಅಲ್ಲಿ ಕೂತು ಪರಸ್ಪರ ವಿಷಯ ವಿನಿಮಯ. ಒಬ್ಬರ ಕಥೆಗೆ ಮತ್ತೊಬ್ಬರು ಕಿವಿಯಾಗುತ್ತಾರೆ. ಅಂತಿಂತ್ತದ್ದೆ ಮಾತಾಡಬೇಕೆಂಬ ರೂಲಿಲ್ಲ. ಅಡುಗೆಯಿಂದ ಹಿಡಿದು, ಅತ್ತೆ ಸೊಸೆಯ ಜಗಳದವರೆಗೆ ನಿರಂತರ ಚರಪರ ಮಾತು.
ಹರಟೆಯ ಮಧ್ಯೆಯೇ ಅವರು ಮರಳ ಕೆಳಗೆ ಬೆಚ್ಚಗೆ ಮಲಗಿರುವ ‘ ಕ್ಲಾಂಸ್ ‘ ಹುಡುಕುತ್ತಾರೆ. ಅದು ನಮ್ಮ ನರ್ತೆ ಯ ಥರದ ಚಿಪ್ಪಿನ ಒಳಗೆ ಜೀವಿಸುವ ಮೃದ್ವಂಗಿ ಜೀವಿ. ಹಿಂದೆ ಒಂದು ಮಧ್ಯಾಹ್ನದ ಒಳಗೆ ತಾವು ಸಾಗಿದ ಬೋಟಿನ ತುಂಬಾ ನರ್ತೆ ತುಂಬಿಕೊಂಡು ವಾಪಸ್ಸು ಬರಬಹುದಿತ್ತು.
ಇದೀಗ ಈ ಮೃದ್ವಂಗಿಗಳ ಸಂಖ್ಯೆ ಕೂಡ ಕುಗ್ಗಿದೆ. ಈಗ ಇಡೀ ದಿನ ಚಿಪ್ಪು ಹೆಕ್ಕಿದರೂ ಅರ್ಧ ಬೋಟು ತುಂಬುವುದಿಲ್ಲ ಎನ್ನುತ್ತಾರೆ ಅಲ್ಲಿನ ಬೆತ್ತಲೆ ಕಾಡನ್ನು ಪದೇ ಪದೇ ಭೇಟಿಯಾಗುವ ಮಹಿಳೆಯರು.
ಒಂದು ಕಾಲದಲ್ಲಿ ಪರಿಶುದ್ಧವಾಗಿದ್ದ ಕಾಡಿನಲ್ಲಿ ಇದೀಗ ಪ್ಲಾಸ್ಟಿಕ್ ತನ್ನ ಹಾಜರಿ ಹಾಕಿದೆ. ಆದರೂ ನಗ್ನ ಕಾಡು ಇನ್ನೂ ಸ್ತ್ರೀಯರನ್ನು ಆಕರ್ಷಿಸುತ್ತಿದೆ. ಈ ಕಾಡು ಒಟ್ಟು 8 ಹೆಕ್ಟೇರ್ ನಷ್ಟು ವ್ಯಾಪ್ತಿ ಹೊಂದಿದ್ದು ಸಾಕಷ್ಟು ನಿಭಿಡವಾಗಿಯೇ ಇದೆ. ಈ ಕಾಡಿಗೆ ಪುರುಷರ ಪ್ರವೇಶ ನಿಷೇಧವಿದ್ದರೂ ಅಲ್ಲಲ್ಲಿ ಕೆಲವರು ಕಾಡು ಪ್ರವೇಶಿಸುವುದುಂಟು. ಕೆಲವರು ಕುತೂಹಲದ ಪುರುಷರು ಹಾಗೆ ಕಾಡು ಸೇರಿದರೆ, ಅವರನ್ನು ಅಲ್ಲಿನ ಆದಿವಾಸಿ ಸಮುದಾಯದ ಮುಂದೆ ತಂದು ನಿಲ್ಲಿಸಲಾಗುತ್ತದೆ. ಅವರಿಗೆ ದುಬಾರಿ ಮೊತ್ತದ ಫೈನ್ ಕೂಡ ಹಾಕಲಾಗುತ್ತದೆ. ಅಲ್ಲಿನ ಇಂಡೋನೇಷಿಯಾದ ‘ ರುಪಯ ‘ ದಲ್ಲಿ ಬರೋಬ್ಬರಿ 10 ಲಕ್ಷ ಮೊತ್ತದ ಫೈನ್ !!
ಫೈನ್ ನ ಮೇಲಿನ ಹೆದರಿಕೆಯಿಂದ ಅಲ್ಲ, ಸಾಮಾನ್ಯವಾಗಿ ದಾರಿ ತಪ್ಪಿ ಮಾತ್ರ ಪುರುಷರು ಅತ್ತ ಹೋಗುವುದು. ಬೆತ್ತಲೆ ಸ್ತ್ರೀಯರನ್ನು ಕದ್ದು ನೋಡುವ ಮಂದಿ ಅಲ್ಲಿ ಸಿಗಲಿಕ್ಕಿಲ್ಲ. ಸಾಕಷ್ಟು ಪ್ರಚಾರಕ್ಕೆ ಬರದೇ ಗುಪ್ತವಾಗಿದ್ದ ಈ ಕಾಡು, ಬಿಬಿಸಿ ಪ್ರಕಟ ಮಾಡಿದ ಡಾಕ್ಯುಮೆಂಟರಿ ಒಂದರ ನಂತರ ಸುದ್ದಿಮಾಧ್ಯಮಗಳಲ್ಲಿ ಜೋರಾಗಿ ಸುದ್ದಿಯಾಗುತ್ತಿದೆ.