ಕೆಯ್ಯೂರು ಹಾಲು ಉತ್ಪಾದಕರ ಸಂಘದ ಮಾಜಿ ನಿರ್ದೇಶಕ ಮಾಡಾವು ಸಂಪಾಜೆ ಭವಾನಿಶಂಕರ್ ಎಂ.ಎಸ್.ನಿಧನ
ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಭವಾನಿಶಂಕರ ಮಾಡಾವು ಸಂಪಾಜೆ (70ವ)ರವರು ಜು.3 ರಂದು ನಸುಕಿನ ಜಾವ ನಿಧನರಾದರು.
ಕೆಯ್ಯೂರು ಗ್ರಾಮದ ಮಾಡಾವು ನಿವಾಸಿಯಾಗಿರುವ ಪ್ರಗತಿಪರ ಕೃಷಿಕ ಭವಾನಿಶಂಕರ ಮಾಡಾವು ಸಂಪಾಜೆ ಅವರು ಎದೆ ನೋವು ಕಾಣಿಸಿಕೊಂಡಿದ್ದು ಪುತ್ತೂರು ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ಅವರನ್ನು ಮಂಗಳೂರು ಕೆ ಎಮ್ ಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರ ಚಿಕಿತ್ಸೆ ವೇಳೆ ಕೋವಿಡ್ ಪರೀಕ್ಷೆ ಪಾಸಿಟಿವ್ ಬಂದಿತ್ತು. ಇದಾದ ಬಳಿಕ ಚಿಕಿತ್ಸೆಗೆ ಸ್ಪಂಧಿಸದೆ ಜು.3 ರಂದು ಮೃತಪಟ್ಡಿದ್ದಾರೆ.
ಮೃತರು ಪತ್ನಿ ಚಂದ್ರಾವತಿ, ಪುತ್ರರಾದ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ರಾಜ್ ಕುಮಾರ್ ಮತ್ತು ಸುದ್ದಿ ಬಿಡುಗಡೆ ಪತ್ರಿಕೆಯ ಜಾಹಿರಾತು ವಿಭಾಗದ ರಾಜೇಶ್ ಎಂ ಎಸ್ , ಸೊಸೆಯಂದಿರಾದ ಮೀನಾಕ್ಷಿ ರಾಜ್ ಕುಮಾರ್, ಉಷಾ ರಾಜೇಶ್, ನಾಲ್ವರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಜನಸಂಘದ ಕಾಲದಿಂದಲೂ ಸಕ್ರೀಯರಾಗಿದ್ದರು.
ಭವಾನಿಶಂಕರ ಮಾಡಾವು ಸಂಪಾಜೆ ಅವರು ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿದ್ದು, ಜನಸಂಘದ ಕಾಲದಿಂದಲೂ ಹಿರಿಯರೊಂದಿಗೆ ಸಕ್ರಿಯರಾಗಿದ್ದರು. ಇವರ ನಿಷ್ಠೆಗೆ ಹಲವು ಕಡೆ ಗೌರವ ಲಭಿಸಿತ್ತು. ಕೆಯ್ಯೂರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಹಲವು ವರ್ಷ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.