ಮಾರುಕಟ್ಟೆಗೆ ಬರಲಿದೆ ಬ್ಯಾಗ್ ಗಳಲ್ಲಿ ‘ಮರಳು’..ಸಚಿವ ನಿರಾಣಿ ಪ್ರಯತ್ನಕ್ಕೆ ಸಿಗಲಿದೆಯೇ ರಾಜ್ಯದ ಜನತೆಯ ಸ್ಪಂದನೆ

ಒಂದು ಕಾಲದಲ್ಲಿ ಹೇರಳವಾಗಿ ಸಿಗುತ್ತಿದ್ದ ಮರಳಿಗೆ ಇಂದು ಸಂಚಾಕಾರ ಬಂದಿದೆ. ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರಳು ದಂಧೆಗಳಿಗೆ ತಕ್ಕಮಟ್ಟಿಗೆ ಬ್ರೇಕ್ ಬಿದ್ದ ಕಾರಣ ಮರಳು ಸಿಗುವುದು ಸ್ವಲ್ಪ ಕಷ್ಟ ಎಂದುಕೊಳ್ಳುತ್ತಿರುವ ಜನತೆಗೆ ಒಂದು ಹೊಸ ಸುದ್ದಿ ಖುಷಿಯುಂಟು ಮಾಡಿದೆ.

ಹೌದು, ಇನ್ನೂ ಮುಂದೆ ಬ್ಯಾಗ್ ಗಳಲ್ಲಿ ಸಿಗಲಿದೆಯಂತೆ ಮರಳು. ಸಿಮೆಂಟ್ ಸಿಗುವ ಹಾಗೆಯೇ ಮರಳು ಕೂಡಾ ಮಾರುಕಟ್ಟೆಯಲ್ಲಿ 50 ಕೆಜಿ ಬ್ಯಾಗ್ ಗಳಲ್ಲಿ ಸಿಗಲಿದೆ, ಅತೀ ಕಡಿಮೆ ಬೆಲೆಯಲ್ಲಿ ಎ, ಬಿ, ಸಿ ಎಂದು ವಿಂಗಡಿಸಿ ಮೂರು ವಿಧಗಳಲ್ಲಿ ಮಾರಾಟ ನಡೆಸಲಾಗುತ್ತದೆ ಎಂದು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಇಂದು ವಿಕಾಸ ಸೌಧದಲ್ಲಿ ತಿಳಿಸಿದ್ದಾರೆ.

ರಾಜ್ಯದ ಪಾನೀಯ ನಿಗಮದ ಮೂಲಕ ಹೇಗೆ  ಮದ್ಯವನ್ನು ಮರಾಟ ಮಾಡಲಾಗುತ್ತದೆಯೋ, ಅದೇ ರೀತಿಯಲ್ಲಿ ಮರಳನ್ನು ಕೂಡಾ ಮಾರಾಟ ನಡೆಸಲೂ ನಿರ್ಧರಿಸಿದೆ. ಈ ಮೂಲಕ 25%ನಷ್ಟು ವ್ಯರ್ಥವಾಗುತ್ತಿದ್ದ ಮರಳನ್ನು ಸಂರಕ್ಷಣೆ ಕೂಡಾ ಮಾಡಬಹುದು ಎಂಬುವುದು ಸಚಿವರ ಯೋಜನೆಯ ಅಭಿಪ್ರಾಯ.ಸದ್ಯಕ್ಕೆ ರಾಜ್ಯದ 5 ಕಡೆಗಳಲ್ಲಿ ಮಾರುಕಟ್ಟೆಗೆ ತರಲು ನಿರ್ಧರಿಸಲಾಗಿದ್ದು, ಇನ್ನೂ ಹೆಚ್ಚಿನ ಕಡೆಗಳಲ್ಲಿ ಮಾರುಕಟ್ಟೆಗೆ ಬರುವಂತಾಗಲಿ.

ಅದೇನೇ ಇರಲಿ,ಸಚಿವರ ಈ ಹೊಸ ಯೋಜನೆಯಿಂದ ಅಕ್ರಮವಾಗಿ ನಡೆಯುವ ಮರಳುಗಾರಿಕೆಗೆ ಬ್ರೇಕ್ ಬಿದ್ದು,ಜನತೆಯು ಮಾರುಕಟ್ಟೆಯಲ್ಲಿ ಸಿಗುವ ಮರಳಿನ ಕಡೆ ಮುಖ ಮಾಡುತ್ತಾರೋ? ಇಲ್ಲವೋ? ಎಂಬುದನ್ನು ಕಾದುನೋಡಬೇಕಾಗಿದೆ.

Leave A Reply

Your email address will not be published.