ಹೆಂಡತಿಯನ್ನು 30 ಕೆ.ಜಿ ಕಬ್ಬಿಣದ ಚೈನ್ ನಿಂದ ಕಟ್ಟಿಹಾಕಿದ ಪತಿರಾಯ

ದಂಪತಿಗಳ ನಡುವೆ ಅನುಮಾನ ಸಲ್ಲದು ಎನ್ನುತ್ತಾರೆ. ಆದರೆ ಕೈ ಹಿಡಿದ ಹೆಂಡತಿ ಮೇಲೇ ಅನುಮಾನ ಬೆಳೆಸಿಕೊಂಡ ಗಂಡನೊಬ್ಬ ಆಕೆಯನ್ನು 30 ಕೆಜಿ ತೂಕದ ಕಬ್ಬಿಣದ ಚೈನ್‌ನಿಂದ ಕಟ್ಟಿಟ್ಟಿದ್ದ ಘಟನೆ ರಾಜಸ್ಥಾನದಲ್ಲಿ ಬಯಲಾಗಿದೆ.

ರಾಜಸ್ಥಾನದ ಪ್ರತಾಪ್‌ಗಢ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಜೀವಾ ಬಾಯ್ ಹೆಸರಿನ ಮಹಿಳೆಗೆ ಮದುವೆಯಾಗಿ ಒಬ್ಬ ಮಗ ಕೂಡ ಇದ್ದಾನೆ. ಆಕೆಯ ತಾಯಿ ಮನೆಯಲ್ಲಿ ಒಬ್ಬಂಟಿಯಾಗಿದ್ದು, ಆಕೆಯ ಸಹಾಯಕ್ಕೆಂದು ಜೀವಾ ಆಗಾಗ ತಾಯಿ ಮನೆಗೆ ಹೋಗಿ ಬರುತ್ತಿದ್ದಳು. ಇದೇ ಕಾರಣಕ್ಕಾಗಿ ಗಂಡನಿಗೆ ಆಕೆಯ ಮೇಲೆ ಅನುಮಾನ ಶುರುವಾಯಿತು. ಅದಕ್ಕಾಗಿ ಗಂಡ ಆಕೆಗೆ ಹೊಡೆಯುತ್ತಿದ್ದ. ಪ್ರತಿದಿನ ಬೇರಾರದ್ದೋ ಜತೆಗೆ ಸಂಬಂಧ ಇಟ್ಟುಕೊಂಡಿದ್ದೀಯ ಎಂದು ಬೈದು, ಹಲ್ಲೆ ಮಾಡುತ್ತಿದ್ದ.

ಅಷ್ಟಕ್ಕೇ ನಿಲ್ಲದ ಆತನ ಹಿಂಸಾಚಾರ ಇನ್ನಷ್ಟು ಮುಂದುವರಿದಿದೆ. 30 ಕೆಜಿಯ ಕಬ್ಬಿಣದ ಚೈನ್ ಅನ್ನು ತಂದು ಅದರಲ್ಲಿ ಹೆಂಡತಿಯ ಕೈ ಕಾಲುಗಳಿಗೆ ಕಟ್ಟಿ ಬಿಟ್ಟಿದ್ದಾನೆ. ಸುಮಾರು ಮೂರು ತಿಂಗಳ ಕಾಲ ಆಕೆ ಆ ಚೈನ್‌ನೊಂದಿಗೇ ಜೀವನ ಸಾಗಿಸಿದ್ದಾಳೆ. ಈ ವಿಚಾರ ಸ್ಥಳೀಯ ಪೊಲೀಸ್ ಠಾಣೆಗೂ ಮುಟ್ಟಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದು, ಮಹಿಳೆಯನ್ನು ಚೈನ್‌ನಿಂದ ಮುಕ್ತಿ ದೊರಕಿದೆ.

Leave A Reply

Your email address will not be published.