ಕರಾವಳಿಯವರ ಸೊಕ್ಕು ಮುರಿಯಲು ಕರಾವಳಿಗೆ ಪ್ರವಾಸ ನಿಲ್ಲಿಸಬೇಕು ಕ್ಲಬ್ ಹೌಸ್ ಚರ್ಚೆ ವೈರಲ್

ಮಂಗಳೂರು: ‘ಕರಾವಳಿಗೆ ಪ್ರವಾಸ ಹೋಗುವುದನ್ನು ನಿಲ್ಲಿಸುವ ತನಕ ಮಂಗಳೂರಿನ ಜನರ ಸೊಕ್ಕು ಮುರಿಯೋದಿಲ್ಲ’ ಎಂಬ ಕ್ಲಬ್ ಹೌಸ್ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕರುನಾಡು ವರ್ಸಸ್ ತುಳುನಾಡು ಕ್ಲಬ್‌ ಹೌಸ್‌ನಲ್ಲಿ ನಡೆದಿರುವ ಚರ್ಚೆಯಲ್ಲಿ, ‘ಕರಾವಳಿಗೆ ಟ್ರಿಪ್ ಹೋಗೋದನ್ನು ನಿಲ್ಲಿಸಬೇಕು. ನಮ್ಮಲ್ಲಿ ದೇವಸ್ಥಾನಗಳಿಲ್ವ, ಮನೆ ದೇವರು ಇಲ್ವ? ಇದನ್ನು ಬಿಟ್ಟು ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದೇವೆ. ಅದನ್ನು ನಾವು ಕಡಿಮೆ ಮಾಡಬೇಕು’ ಎಂದು ಸದಸ್ಯರು ಹೇಳಿದ್ದಾರೆ.

‘ಕನ್ನಡ ವಾಹಿನಿಗಳಲ್ಲಿ ಕರಾವಳಿಯ ಕೆಲವರು ಮೆರಿತಾ ಇದ್ದಾರೆ. ಅವರನ್ನು ಪ್ರೊಮೋಟ್ ಮಾಡೋದನ್ನು ಕಡಿಮೆ ಮಾಡಬೇಕು’ ಎಂದಿರುವ ಕರುನಾಡು ಕ್ಲಬ್ ಹೌಸ್ ಗ್ರೂಪ್, ‘ಅನುಶ್ರೀ ಝೀ ಕನ್ನಡದಲ್ಲಿ ಎಂಟ್ರಿ ಆದ ಬಳಿಕ ತುಳುನಾಡಿನವರನ್ನು ತುಂಬುತ್ತಿದ್ದಾರೆ’ ಎಂದಿದ್ದಾರೆ.

ತುಳುನಾಡಿನವರಿಗೆ ಈ ರೀತಿಯಾಗಿ ಅವಹೇಳನ ಮಾಡಿ ಚರ್ಚಿಸಿದ ಕುರಿತೂ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ದ.ಕ.ಉಡುಪಿ ಕರಾವಳಿಯ ಜನತೆ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದಾರೆ. ಕ್ಲಬ್ ಹೌಸ್ ಚರ್ಚೆ ಮಾಡಿದವರಿಗೆ ಸರಿಯಾದ ಉಚ್ಚಾರವೂ ಬರುತ್ತಿಲ್ಲ ಎಂದು ಕಾಲೆಳೆದಿದ್ದಾರೆ.

ಕರ್ನಾಟಕ ರಾಜ್ಯದ ಪಶ್ಚಿಮ ತೀರದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೆರಳದ ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚು ಮಾತನಾಡುವ ಭಾಷೆ. ತುಳು ಮಾತಾಡುವವರನ್ನು ತುಳುವರು (ಅಥವಾ ತುಳುವಲ್ಲಿ ತುಳುವೆರ್ ) ಎಂದು ಕರೆಯುತ್ತಾರೆ. ತುಳು ಭಾಷೆಯನ್ನು ದಕ್ಷಿಣ ಭಾರತದ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ತುಳು ಭಾಷೆಯ ಪ್ರಾಚೀನತೆಯನ್ನು ತುಳುವ ಜನ ಜೀವನದಲ್ಲಿ ಅಡಕವಾಗಿರುವ ವಿಶಿಷ್ಟ ಸಂಸ್ಕೃತಿ ಹಾಗೂ ಪಾಡ್ದನ ಎಂಬ ಜಾನಪದ ಸಾಹಿತ್ಯಗಳಿಂದ ನಿಷ್ಕರ್ಷೆ ಮಾಡಬಹುದು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಬಹುಪಾಲು ಜನರು ತುಳು ಭಾಷೆ ಮಾತನಾಡುತ್ತಾರೆ. ಈ ಜಿಲ್ಲೆಗಳನ್ನು ಒಳಗೊಂಡ ಪ್ರದೇಶವನ್ನು ಚಾರಿತ್ರಿಕವಾಗಿ ತುಳುನಾಡು ಎಂದು ಕರೆಯಲಾಗುತ್ತದೆ. ಹಾಗೆಯೇ ಮುಂಬಯಿ ಪಟ್ಟಣ, ಗುಜರಾತ್ ರಾಜ್ಯದ ಕೆಲ ಭಾಗಗಳಲ್ಲಿ ತುಳುವರು ಇದ್ದಾರೆ. ಸುಮಾರು 2ದಶಲಕ್ಷ ಜನರು ತುಳು ಭಾಷೆ ಮಾತಾಡುತ್ತಾರೆ.

Leave A Reply

Your email address will not be published.