ಚೆರಿಯಪರಂಬು, ಕಲ್ಲುಮೊಟ್ಟೆ SKSSF SYS ವತಿಯಿಂದ ಶ್ರಮದಾನ
ಚೆರಿಯಪರಂಬು ಕಲ್ಲುಮೊಟ್ಟೆ SKSSF ಕಾರ್ಯಕರ್ತರು ಸಮಸ್ತ ಸ್ಥಾಪಕ ದಿನವಾದ ದಿನಾಂಕ 27.06.2021ರಂದು ಕಲ್ಲು ಮೊಟ್ಟೆ ಚೆರಿಯಪರಂಬು ನಾಪೋಕ್ಲು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ 2 ಬದಿಗಳಲ್ಲಿ ಇರುವಂತಹ ಕಾಡುಗಳನ್ನು ಕಡಿದು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನಂತರ ಚೆರಿಯಪರಂಬು ದರ್ಗಾಶರೀಫ್ ಆವರಣದಲ್ಲಿ ಬೆಳೆದುನಿಂತಿರುವ ಹುಲ್ಲುಗಳನ್ನು ಯಂತ್ರದ ಮುಖಾಂತರ ಕತ್ತರಿಸಿ ಸ್ವಚ್ಛಗೊಳಿಸಿದರು.
ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪರವಂಡ ಸಿರಾಜ್ ಮಾತನಾಡಿ, ಮೊದಲನೆಯದಾಗಿ ಚೆರಿಯಪರಂಬು ಕಲ್ಲುಮೊಟ್ಟೆ SKSSF ನ ಯುವ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. 95ನೇ ಸ್ಥಾಪಕ ದಿನದ ಪ್ರಯುಕ್ತ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬಹಳ ಸಂತೋಷದ ವಿಷಯ. ಇಂತಹ ಅನೇಕ ಕೆಲಸ ಕಾರ್ಯಗಳು ನಮ್ಮ ಗ್ರಾಮದಲ್ಲಿ ಇನ್ನೂ ಬಾಕಿ ಉಳಿದಿದೆ. ಸಂಘಟನೆ ಯಾವುದೇ ಇರಲಿ, ನಾಡಿನ ಅಭಿವೃದ್ದಿಗೋಸ್ಕರ ಪ್ರತಿಯೊಬ್ಬರು ಒಂದೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಥವಾ ಇಂತಹ ಒಳ್ಳೆಯ ಕೆಲಸಗಳನ್ನು ಮಾಡುವವರೊಂದಿಗೆ ಕೈಜೋಡಿಸಿ ಸಹಕರಿಸಿದರೆ, ನಮ್ಮ ನಾಡು ಅಭಿವೃದ್ಧಿಯತ್ತ ಸಾಗುತ್ತದೆ ಇದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಗ್ರಾಮದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಮಳೆಗಾಲ ಬಂದರೆ ಸಾಕು ಕಾವೇರಿ ನದಿ ಮೈದುಂಬಿ ಹರಿದು ಬಹುಬೇಗನೆ ಗ್ರಾಮದ 2 ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಳ್ಳುತ್ತವೆ. ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕಲ್ಲುಮೊಟ್ಟೆ ಚೆರಿಯಪರಂಬು SKSSF SYS ಅಧ್ಯಕ್ಷರಾದ ಶ್ರೀ ಸಾದುಲಿ( ಚಾಬು)’ಪ್ರಧಾನ ಕಾರ್ಯದರ್ಶಿ ಹನೀಫ ಬಿ ಎ, ಸದಸ್ಯರಾದ ಸಮೀರ್ ಪಿ ಎಂ, ಮುಝಮ್ಮಿಲ್, ಉಮ್ಮರ್, ಇತರರು ಹಾಜರಿದ್ದರು.