ಸಚಿವ ಶಿವರಾಂ ಹೆಬ್ಬಾರ್ ಮೇಲೆ 1 ರೂಪಾಯಿಯ ಮಾನ ನಷ್ಟ ಮೊಕದ್ದಮೆ ಹೂಡಿದ ನಟ ಚೇತನ್ | ಜಾಬ್ ಲೆಸ್ ನಟನಿಗೆ ಕೇಸು ಗೆಲ್ಲುವ ಆತ್ಮವಿಶ್ವಾಸ ಇಲ್ಲ ಎಂದು ನಗುತ್ತಿದೆ ಕಾನೂನು ಬಲ್ಲ ಜನ

ನಟ ಭಯಂಕರ ಚೇತನ್ ಅಹಿಂಸಾ ಎಂಬ ಜಾಬ್ ಲೆಸ್ ವ್ಯಕ್ತಿ ಇದೀಗ ಅರ್ಜೆಂಟಾಗಿ ಹೋರಾಟಗಾರನಾಗಿ ಗುರುತಿಸಿಕೊಳ್ಳಲು ತಿಣುಕಾಡುತ್ತಿರುವುದು ಹಳೆಯ ಸುದ್ದಿ. ಇದೀಗ ತನ್ನ ಮೇಲೆ ಬ್ರಾಹ್ಮಣರು ತಿರುಗಿ ಬಿದ್ದ ಸಂದರ್ಭ ಬಂದ ಆರೋಪಕ್ಕೆ ಸಚಿವ ಶಿವರಾಂ ಹೆಬ್ಬಾರ್ ಅವರ ವಿರುದ್ಧ 1 ರೂಪಾಯಿಯ ಮಾನ ನಷ್ಟ ಮೊಕದ್ದಮೆ ಹೂಡಿದ್ದಾನೆ. ಥೇಟು, ದೊಡ್ಡವರು ಅನ್ನಿಸಿಕೊಂಡವರು ಮತ್ತು ಮಹಾನ್ ಹೋರಾಟಗಾರರು ಅಂದುಕೊಂಡವರು 1 ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡ್ತಾರಲ್ಲ, ಹಾಗೆ ಚೇತನ್ ಮಾಡಿದ್ದಾನೆ.

ಬ್ರಾಹ್ಮಣ್ಯದ ಕುರಿತಂತೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ ಬಳಿಕ ನಟ ಚೇತನ್​ ಅವರು ಅನೇಕ ವಿವಾದಗಳನ್ನು ಎದುರಿಸುತ್ತಿದ್ದಾನೆ. ಆತನ ಮೇಲೆ ಪೊಲೀಸ್​ ಠಾಣೆಯಲ್ಲಿ ದೂರು ಕೂಡ ದಾಖಲಾಗಿದ್ದು, ಆ ಸಂಬಂಧ ಎರಡು ಬಾರಿ ವಿಚಾರಣೆಗೆ ಒಳಗಾಗಿದ್ದಾನೆ. ಚೇತನ್​ ಅವರ ಪೋಸ್ಟ್​ ಖಂಡಿಸಿ, ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್​ ಅವರು ಟ್ವೀಟ್​ ಮಾಡಿದ್ದರು. ಇದರಿಂದ ತಮ್ಮ ತೇಜೋವಧೆ ಆಗಿದೆ ಎಂದು ಚೇತನ್​ ಅವರು ಸಚಿವರ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾನೆ !

ಶಿವರಾಮ್​ ಹೆಬ್ಬಾರ್​ ವರ್ಸಸ್​ ಚೇತನ್​ ಜಟಾಪಟಿ ಈಗ ಕೋರ್ಟ್​ ಮೆಟ್ಟಿಲೇರಿದೆ. 1 ರೂ. ಮಾನನಷ್ಟ ಪರಿಹಾರ ನೀಡಬೇಕು ಮತ್ತು ಬೇಷರತ್​ ಕ್ಷಮೆ ಯಾಚಿಸಬೇಕು ಎಂದು ಚೇತನ್​ ಅವರು ಮೊಕದ್ದಮೆ ಹೂಡಿದ್ದಾರೆ. ಈ ಸಂಬಂಧ ಸಿಟಿ ಸಿವಿಲ್​ ಸೆಷನ್ಸ್​ ಕೋರ್ಟ್​ನಿಂದ ಸಚಿವ ಶಿವರಾಮ್​ ಹೆಬ್ಬಾರ್​ಗೆ ನೋಟಿಸ್​ ಜಾರಿ ಮಾಡಲಾಗಿದೆ. ಇದೇ ಜು.14ಕ್ಕೆ ವಿಚಾರಣೆ ನಡೆಯಲಿದೆ.

ಸಚಿವ ಶಿವರಾಂ ಹೆಬ್ಬಾರ್ ಮಾಡಿದ ಟ್ವೀಟ್ ಏನು ?

‘ಕನ್ನಡ ಚಿತ್ರರಂಗಗಳಲ್ಲಿ ನಟಿಸುತ್ತಿರುವ ಚೇತನ್ ಎನ್ನುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ವಿರುದ್ಧವಾಗಿ ಅವಹೇಳನಕಾರಿಯಾಗಿ, ಪ್ರಚೋದನಕಾರಿಯಾಗಿ ಮಾತಾಡಿರುವುದು ಗಮನಕ್ಕೆ ಬಂದಿತು. ಮೊದಲಿಗೆ, ಆತನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ. ಇನ್ನು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ, ಜಾತಿಗಳಿಗೆ ಸ್ಥಾನಮಾನ ನೀಡಿದ್ದಾರೆ. ಈ ವ್ಯಕ್ತಿಯ ಹೇಳಿಕೆ ಸಂವಿಧಾನಕ್ಕೆ ವಿರೋಧವಾದುದು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವಂತಹದು. ಸಮಾಜದಲ್ಲಿ ತಾನು ಗುರುತಿಸಿಕೊಳ್ಳಬೇಕು ಅಂತಲೋ, ಗಂಜೀ ಕಾಸಿನ ಆಸೆಗೋ ಹೇಳಿಕೆ ಕೊಡೋ ಇಂತಹ ಸಮಾಜ ಕಂಟಕರನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಶಿವರಾಮ್​ ಹೆಬ್ಬಾರ್​ ಟ್ವೀಟ್​ ಮಾಡಿದ್ದರು.

ಸಮಾಜ ಕಂಟಕರನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.@BSYBJP | @CMofKarnataka | @KarnatakaVarthe | @tv9kannada | @AsianetNewsSN | @publictvnews

— Shivaram Hebbar (@ShivaramHebbar) June 11, 2021

ಮಾನ ನಷ್ಟ ಮೊಕದ್ದಮೆ ಹಾಕುವ ವ್ಯಕ್ತಿ ಕೇಸು ಹಾಕುವ ಮೊತ್ತದ 10% ದುಡ್ಡನ್ನು ಅಡ್ವಾನ್ಸ್ ಆಗಿ ಕೋರ್ಟಲ್ಲಿ ಕಟ್ಟಬೇಕೆಂದು ಕೋರ್ಟಿನ ಕಾನೂನು. ಕೇಸು ಗೆಲ್ಲುವ ಆತ್ಮವಿಶ್ವಾಸ ಇಲ್ಲದ ಕಾರಣ 1 ರೂಪಾಯಿಯ ಕೇಸು ದಾಖಲಿಸಿದ್ದಾರೆ ಚೇತನ್ ಅನ್ನುವುದು ಕಾನೂನು ಬಲ್ಲವರ ಮಾತು.

Leave A Reply

Your email address will not be published.