ಐತ್ತೂರು: ಸ್ಥಳಿಯಾಡಳಿದಿಂದ ಕಸ ಎಸೆದವನಿಗೆ ದಂಡ | ಹೊಯ್ಸಳ ಪೊಲೀಸ್ ಹರೀಶ್ ಕರ್ತವ್ಯ ಪ್ರಜ್ಞೆ

ಕಡಬ: ಯುವಕನೋರ್ವ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿದ್ದನ್ನು ಹೊಯ್ಸಳ ಪೊಲೀಸರು ಗಮನಿಸಿ ಸ್ಥಳಿಯಾಡಳಿತದ ಗಮನಕ್ಕೆ ತಂದಾಗ ವ್ಯಕ್ತ್ತಿಯಿಂದ ೧೦೦೦ ರೂಪಾಯಿ ದಂಡ ಕಟ್ಟಿಸಿಕೊಂಡ ಘಟನೆ ಐತ್ತೂರಿನಲ್ಲಿ ನಡೆದಿದೆ.

ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಸಮೀಪ ಯುವಕ ಸ್ಕೂಟಿಯಲ್ಲಿ ಬಂದು ಸರ್ಕಾರಿ ಸ್ಥಳದಲ್ಲಿ ಕಸ ಎಸೆಯಿವುದನ್ನು ಕಂಡ ಕರ್ತವ್ಯ ನಿರತ ಕಡಬ ಪೊಲೀಸ್ ಹೆಡ್‌ಕಾನ್ಸೇಟೆಬಲ್ , ಪ್ರಸ್ತುತ ಹೊಯ್ಸಳದಲ್ಲಿ ಕರ್ತವ್ಯದಲ್ಲಿರುವ ಹರೀಶ್ ವಿಚಾರಿಸಿದ್ದಾರೆ. ಬಳಿಕ ಐತ್ತೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸುಜಾತ ಅವರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿ ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ. ಈ ಸಂದರ್ಭ ಗ್ರಾಮ ಪಂಚಾಯಿತಿ ಸಿಬ್ಬಂದಿ ದೇವಿಕಾ , ಹೊಯಿಸಲ ಪೊಲೀಸ್ ಸಿಬ್ಬಂದಿ ಪ್ರಕಾಶ್ ಇದ್ದರು.

Leave A Reply

Your email address will not be published.