ವಿಟ್ಲ ಠಾಣಾ ಎಸೈ ವಿನೋದ್ ರೆಡ್ಡಿ ಅವರಿಗೆ ವರ್ಗಾವಣೆ | ಉತ್ತರ ಕನ್ನಡ ಜಿಲ್ಲೆಯ ರಾಮನಗರ ಠಾಣೆಗೆ ವರ್ಗ

ವಿಟ್ಲ ಠಾಣಾ ಎಸ್. ಐ ವಿನೋದ್ ಎಸ್. ರೆಡ್ಡಿಯವರನ್ನು ಉತ್ತರಕನ್ನಡ ಜಿಲ್ಲೆಯ ರಾಮನಗರ ಠಾಣೆಗೆ ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ಆದೇಶ ಹೊರಡಿಸಿದ್ದಾರೆ.

2017ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ವಿನೋದ್ ಎಸ್. ರೆಡ್ಡಿಯವರು ಆ ಬಳಿಕ ಮಂಗಳೂರು ಕೇಂದ್ರ ಸ್ಥಾನದಲ್ಲಿ ಪ್ರೊಬೆಷನರಿ ಎಸ್.ಐ. ಆಗಿ ಕರ್ತವ್ಯ ಆರಂಭಿಸಿದರು. ಬಳಿಕ ಉಡುಪಿ ಜಿಲ್ಲೆಯ ಹೆಜಮಾಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 2019ರಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ಪ್ರೊಬೆಷನರಿ ಎಸ್.ಐ ಆಗಿ ವರ್ಗಾವಣೆಗೊಂಡಿದ್ದರು.

ವಿಟ್ಲ ಠಾಣಾ ಎಸ್ ಐ ಆಗಿದ್ದ ಯಲ್ಲಪ್ಪ ಅವರ ವರ್ಗಾವಣೆಗೊಂಡ ಬಳಿಕ ವಿನೋದ್ ಎಸ್. ರೆಡ್ಡಿರವರನ್ನು ವಿಟ್ಲ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವಿನೋದ್ ಎಸ್. ರೆಡ್ಡಿ ಯವರು ಮೂಲತಃ ಬಾಗಲಕೋಟೆಯವರಾಗಿದ್ದು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ.

Leave A Reply

Your email address will not be published.