ಭೀಕರ ರಸ್ತೆ ಅಪಘಾತಕ್ಕೆ ತುಂಬು ಗರ್ಭಿಣಿ ಬಲಿ | ಹೊಟ್ಟೆಯಿಂದ ಮಗು ಹೊರಕ್ಕೆ ಚೆಲ್ಲಿದ ಹೃದಯ ವಿದ್ರಾವಕ ಘಟನೆ
ರಾಜಸ್ತಾನ: ತುಂಬು ಗರ್ಭಿಣಿಯ ಟ್ರಕ್ ಹರಿದು ಆಕೆಯ ಹೊಟ್ಟೆಯಲ್ಲಿದ್ದ 7 ತಿಂಗಳ ಮಗು ಹೊರಕ್ಕೆ ಬಂದ ಹೃದಯವಿದ್ರಾವಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಗಂಗ್ರಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಮತ್ತು ಅಪರಿಚಿತ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಗರ್ಭಿಣಿಯೊಬ್ಬಳ ಹೊಟ್ಟೆ ಮೇಲೆ ವಾಹನ ಹರಿದು ಸ್ಥಳದಲ್ಲೇ ತಾಯಿ ಹೇಮಾ ಮೃತಪಟ್ಟಿದ್ದಾರೆ. ಆಕೆಯ ಹೊಟ್ಟೆಯಲ್ಲಿದ್ದ ಮಗು ಮರಣಿಸಿದೆ. ಜತೆಗಿದ್ದ ಗಂಡ ಮತ್ತು 7 ವರ್ಷದ ಮಗನ ಸ್ಥಿತಿ ಗಂಭೀರವಾಗಿದೆ.
ಧೋಲಿ ಮೊಹಲ್ಲಾ ನಿವಾಸಿ ಬಾಲರಾಜ್ ಎಂಬುವರ ಪತ್ನಿ, ತುಂಬುಗರ್ಭಿಣಿ ಹೇಮಲತಾ ಮತ್ತು ಅವರ ಏಳು ವರ್ಷ ಪ್ರಾಯದ ಮಗ ಮಗ ಬೈಕಿನಲ್ಲಿ ಸಂಚರಿಸುತ್ತಿದ್ದರು. ಹೇಮಾ ಅವರ ದೊಡ್ಡಪ್ಪ ತೀರಿಕೊಂಡ ಪ್ರಯುಕ್ತ ಪ್ರಾರ್ಥನಾ ಕೂಟ ಏರ್ಪಡಿಸಲಾಗಿತ್ತು. ಅಲ್ಲಿ ಪ್ರಾರ್ಥನೆ ಪೂರೈಸಿ ವಾಪಸ್ಸು ಬರುವ ಸಂದರ್ಭದಲ್ಲಿ ಬೈಕ್ನಲ್ಲಿ ಗಂಗರಾರ್ನಿಂದ ಚಿತ್ತೋರಗಢದತ್ತ ಬರುತ್ತಿರುವಾಗ, ಹಿಂಬದಿಯಿಂದ ಬಂದ ಟ್ರಕ್ ಒಂದು ಬೈಕಿಗೆ ಡಿಕ್ಕಿ ಹೊಡೆದಿದೆ.
ಈ ವೇಳೆ ರಸ್ತೆಗೆ ಬಿದ್ದ ಗರ್ಭಿಣಿ ಮೇಲೆ ವಾಹನ ಹರಿದಿದೆ. ಮಹಿಳೆ ಮೃತಪಟ್ಟಿದ್ದು, ಆಕೆಯ ಹೊಟ್ಟೆ ಹರಿದು ಮಗು ಹೊರ ಬಂದು ಬಿದ್ದಿದೆ. ಹಾಗೇ ಬಂದ ಮಗುವನ್ನ ಉಳಿಸಲು ಸಾರ್ವಜನಿಕರ ನೆರವಿನಿಂದ ಸ್ಥಳಕ್ಕೆ ವೈದ್ಯರು ದೌಡಾಯಿಸಿದ್ದರಾದರೂ ಮಗು ಬದುಕಲಿಲ್ಲ. ಬೈಕ್ ಸವಾರ ಬಾಲರಾಜ್ ಬೈಕ್ ಸಹಿತ ರಸ್ತೆಬದಿಗೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದಾರೆ. 7 ವರ್ಷದ ಮಗನ ಸ್ಥಿತಿಯೂ ಚಿಂತಾಜನಕವಾಗಿದೆ. ಅಪ್ಪ-ಮಗ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ನಡುರಸ್ತೆಯಲ್ಲಿ ವಾಹನಕ್ಕೆ ಗರ್ಭಿಣಿ ಬಲಿಯಾದ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದು, ಆಕ್ರೋಶಗೊಂಡ ಸ್ಥಳೀಯರನ್ನು ಸಮಾಧಾನಪಡಿಸುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.