‘ ಬಂಗಾರದ ಮನುಷ್ಯ’ ಎಂದು ಖ್ಯಾತಿ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು
ಗಾಂಧಿನಗರ: ಚಿನ್ನದ ಮನುಷ್ಯ ಎಂದು ಹೆಸರು ಪಡೆದಿರುವ ಕುಂಜಾಲ್ ಪಟೇಲ್ ಅಲಿಯಾಸ್ ಕೆ.ಪಿ ಪಟೇಲ್ ಗುಜರಾತಿನ ಅಹಮದಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕುಟುಂಬದ ಜೊತೆ ನೆಡೆದ ವಾಗ್ವಾದದ ಬಳಿಕ ತಾನೇ ಕುತ್ತಿಗೆ ಹಿಸುಕಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ರಾಜಕೀಯ ಪಕ್ಷವೊಂದರ ಅಭ್ಯರ್ಥಿಯಾಗಿ ಕುಂಜಾಲ್ ಪಟೇಲ್, ದರಿಯಾಪುರ್ ಕ್ಷೇತ್ರದಿಂದ ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದನು. ಕೆ.ಜಿ ಗಟ್ಟಲೇ ಚಿನ್ನಾಭರಣ ಧರಿಸುತ್ತಿದ್ದ ಕುಂಜಾಲ್ ಪಟೇಲ್, ಆ ಫೋಟೋಗಳು ವೈರಲ್ ಆಗಿ ಬಹಳ ಖ್ಯಾತಿಗಳಿಸಿದ್ದನು.
ಆತ್ಮಹತ್ಯೆ ಸಂಬಂಧ ಅನುಮಾನ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿರುವ ಮಧುಪುರ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.