ಮುಸ್ಲಿಂ ಭಾರತೀಯ ಮಹಿಳೆಯನ್ನು ಜೀತದಾಳಾಗಿ ಇಟ್ಟುಕೊಂಡ ಸೌದಿ | ಕೊನೆಗೂ ಭಾರತೀಯರ ಪ್ರಯತ್ನದಿಂದ ತಾಯ್ನಾಡಿಗೆ

ಮುಸ್ಲಿಂ ಮಹಿಳೆಯೊಬ್ಬರು ತನ್ನ ಹೊಟ್ಟೆಯ ಹಸಿವು ತೀರಿಸಿಕೊಂಡು ಮಕ್ಕಳ ಭವಿಷ್ಯ ಕಟ್ಟಿಕೊಳ್ಳುವ ಉದ್ದೇಶಕ್ಕಾಗಿ ಉದ್ಯೋಗವನ್ನು ಅರಸಿ ಮುಸ್ಲಿಂ ರಾಷ್ಟ್ರಕ್ಕೆ ಹೋದರೆ ರಾಷ್ಟ್ರ, ಆ ರಾಷ್ಟ್ರ ಆಕೆಯನ್ನು ವಾಪಸ್ ಮರಳಲೂ ಬಿಡದೆ ಕೂಡಿಹಾಕಿದ ಘಟನೆ ನಡೆದಿದೆ.

 

ಇದೀಗ ಕೊನೆಗೂ ಸೌದಿಯಲ್ಲಿರುವ ಕನ್ನಡಿಗರ ಸಹಾಯದಿಂದ ಮಹಿಳೆಯನ್ನು ಸ್ವದೇಶಕ್ಕೆ ಕರೆತರಲಾಗಿದೆ.

ದಾವಣಗೆರೆ ನಗರದ ಆಜಾದ್‍ನಗರದ ಎರಡನೇ ಮುಖ್ಯರಸ್ತೆ, ಐದನೇ ಅಡ್ಡರಸ್ತೆಯ ನಿವಾಸಿ ಮಕ್ಬುಲ್‍ಸಾಬ್ ಅವರ ಮಗಳು ಫೈರೋಜಾ ಬಾನು ಭಾರತಕ್ಕೆ ವಾಪಸ್ಸಾದವರು. ಮಹಿಳೆಯ ಬಳಿ ಇರುವ ವಿಸಾ, ಪಾಸ್ ಪೋರ್ಟ್ ಕಸಿದುಕೊಂಡು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇದೀಗ ಸೌದಿಯಲ್ಲಿರುವ ಕನ್ನಡಿಗರು ಮಾಡಿದ ಹೋರಾಟದ ಫಲವಾಗಿ, ಭಾರತ ಸರ್ಕಾರ ಮತ್ತು ಸೌದಿ ಅರೇಬಿಯಾ ಸರ್ಕಾರ ಸ್ಪಂದಿಸಿದ್ದರಿಂದ ಮಹಿಳೆ ಭಾರತಕ್ಕೆ ಮರಳಿದ್ದಾರೆ.

ಮಕ್ಬುಲ್ ಸಾಬ್ ಜುಬೇದಾಬಿ ದಂಪತಿಗೆ ಏಳು ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಕಳು. ಮೊದಲ ಮಗಳಾದ ಫೈರೋಜಾ ಬಾನುಗೆ 14 ವರ್ಷಗಳ ಹಿಂದೆ ಮದುವೆಯಾಗಿತ್ತು. ಮೂರು ಮಕ್ಕಳಾದ ಮೇಲೆ ಗಂಡನೂ ಬಿಟ್ಟುಹೋಗಿದ್ದ. ಹೊಟ್ಟೆಪಾಡಿಗಾಗಿ ಎರಡು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಫೈರೋಜಾ ಬಾನು ಹೋಗಿದ್ದರು. ಆದರೆ ಆನಂತರ ಆರ್ಥಿಕ ಭಾರತಕ್ಕೆ ಬರುವ ಅವಕಾಶವನ್ನು ನೀಡಲಿಲ್ಲ. ಆಕೆಯ ತಾಯಿ ಮೃತಪಟ್ಟಾಗ ನೋಡಲು ಕೂಡ ಕಳುಹಿಸಿಕೊಟ್ಟಿರಲಿಲ್ಲ, ವೇತನವನ್ನೂ ನೀಡದೆ ಸೌದಿಯ ಕುಟುಂಬವೊಂದು ಆಕೆಯನ್ನು ಜೀತದಾಳಾಗಿ ದುಡಿಸಿಕೊಳ್ಳುತ್ತಿತ್ತು. ಅವರನ್ನು ಹೇಗಾದರೂ ಭಾರತಕ್ಕೆ ಕರೆಸಿ ಎಂದು ಆಕೆಯ ಸಹೋದರಿ ನಸ್ರೀನ್‍ಬಾನು ಸರ್ಕಾರಕ್ಕೆ ಮನವಿ ಮಾಡಿದ್ದರು.

ಇತ್ತೀಚೆಗೆ ಸೌದಿಯ ರಿಯಾದ್‍ನಲ್ಲಿ ಇರುವ ಪಡುಬಿದ್ರಿಯ ಹಮೀದ್ ಇವರಿಗೆ ಸ್ಪಂದಿಸಿದ್ದರು. ಅವರಿಗೆ ದಮಾಮ್‍ನಲ್ಲಿರುವ ಕಲಬುರ್ಗಿಯ ಯಾಸಿನ್ ಎಂಬಾತ ಸಹಾಯ ಮಾಡಿದ್ದ. ಈ ಇಬ್ಬರ ಪ್ರಯತ್ನದಿಂದ ಸೌದಿ ರಾಜಧಾನಿ ರಿಯಾದ್‍ನಿಂದ ಸುಮಾರು ಸಾವಿರ ಕಿಲೋಮೀಟರ್ ದೂರ ಇರುವ ಸಕಾಕಹ್‍ನಲ್ಲಿ ಫೈರೋಜಾ ಬಾನು ಇರುವುದು ಪತ್ತೆಯಾಗಿತ್ತು. ಸಕಾಕಹ್‍ನಲ್ಲಿ ಇರುವ ಕೇರಳದ ಸಲಿಂ ಎಂಬುವರ ನೆರವು ಪಡೆದುಕೊಂಡು ಅಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಭಾರತದ ವಿದೇಶಾಂಗ ಸಚಿವಾಲಯದ ಗಮನಕ್ಕೂ ತಂದಿದ್ದರು. ಜೊತೆಗೆ ಅಲ್ಲಿ ಹ್ಯೂಮನ್ ರೈಟ್ಸ್ ಕಮಿಷನ್‍ನ ಗಮನಕ್ಕೆ ಕೂಡಾ ಇದನ್ನು ತರಲಾಗಿತ್ತು. ಈ ಎಲ್ಲರ ಪ್ರಯತ್ನದ ಫಲವಾಗಿ ಫೈರೋಜ್ ಬಾನು ಅವರನ್ನು ಭಾರತಕ್ಕೆ ಕಳುಹಿಸಿಕೊಡಲು ಒಪ್ಪಿದ್ದಾರೆ. ಬಳಿಕ ಶುಕ್ರವಾರ ಸಕಾಕಹ್‍ನಿಂದ ಕತಾರ್‍ಗೆ ಬಂದು, ಅಲ್ಲಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಕೊನೆಗೂ ಭಾರತೀಯರಾದ ಫೈರೋಜ್ ಬಾನು ನಂತವರಿಗೆ, ತಾವು ಮುಸ್ಲಿಂ ಧರ್ಮೀಯರು ಎನ್ನುವುದು ಕೂಡ ಸಹಾಯಕ್ಕೆ ಬಂದಿಲ್ಲ. ಕೊನೆಗೆ ಭಾರತೀಯರೇ ಕಷ್ಟಕಾಲಕ್ಕೆ ಆಗುವುದು ಎನ್ನುವುದು ಮತ್ತೆ ಸಾಬೀತಾಗಿದೆ.

Leave A Reply

Your email address will not be published.