ದುಬೈಗೆ ವಿಮಾನ ಯಾನ ಆರಂಭ | ಹಲವು ನಿಬಂಧನೆಗಳೊಂದಿಗೆ ವಿಮಾನ ಹಾರಾಟ ಪ್ರಾರಂಭ

ದುಬೈ: ಕೋವಿಡ್ ಹಿನ್ನೆಲೆಯಲ್ಲಿ ದುಬೈ ಪ್ರಯಾಣಕ್ಕೆ ವಿಧಿಸಿದ್ದ ನಿರ್ಬಂಧವನ್ನು ದುಬೈ ಎಮಿರೇಟ್ಸ್ ವಾಪಾಸ್ಸು ತೆಗೆದುಕೊಂಡಿದೆ. ಜೂನ್ 23ರಿಂದ ವಿಮಾನ ಹಾರಾಟಕ್ಕೆ ಕೆಲದೇಶಗಳಿಗೆ ಅನುಮತಿಯನ್ನು ನೀಡಿದೆ.

ದುಬೈನ ನೈಸರ್ಗಿಕ ವಿಕೋಪ ಮತ್ತು ಬಿಕ್ಕಟ್ಟು ನಿರ್ವಹಣೆಯ ಉನ್ನತ ಮಟ್ಟದ ಸಮಿತಿ ಸಭೆ ಬಳಿಕ ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾ ದೇಶಗಳಿಗೆ ಜೂನ್ 23ರಿಂದ ವಿಮಾನ ಹಾರಾಟ ಪ್ರಾರಂಭಗೊಳಿಸಲು ಅನುಮತಿ ನೀಡಲಾಗಿದೆ.

ಪ್ರಯಾಣಿಕರಿಗೆ ಈ ವೇಳೆ ಕೆಲವು ನಿರ್ಬಂಧವನ್ನು ಕೂಡ ವಿಧಿಸಲಾಗಿದೆ. ಯುಎಇ ಮಾನ್ಯತೆ ಪಡೆದ ಎರಡು ಡೋಸ್ ಕೋವಿಡ್ ಲಸಿಕೆ ಪ್ರಯಾಣಿಕರು ಪಡೆದಿರಲೇಬೇಕಾಗಿದೆ. ಭಾರತದಿಂದ ದುಬೈಗೆ ಪ್ರಯಾಣಿಸುವ ಪ್ರಯಾಣಿಕರು 4 ಗಂಟೆ ಮೊದಲು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕು ಹಾಗೂ ದುಬೈನಲ್ಲಿ ಮತ್ತೆ ಪರೀಕ್ಷೆ ಮಾಡಿಸಬೇಕು ಎಂದು ಸೂಚನೆ ನೀಡಲಾಗಿದೆ.

Leave A Reply

Your email address will not be published.