ತುಳು ಧ್ವಜಕ್ಕೆ ಚಪ್ಪಲಿ ಹೊಂದಿಸಿ ಅವಮಾನ | ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸೂರ್ಯ ಬಂಧನ

ಮಂಗಳೂರು: ತುಳುನಾಡಿನ ಬಾವುಟವನ್ನು ಚಪ್ಪಲಿಯಲ್ಲಿ ಬಳಸಿ ತುಳು ಭಾಷೆಗೆ ನಿಂದಿಸಿ ಬರೆದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಪೋಸ್ಟ್ ಮಾಡಿದ್ದ ಪ್ರಕರಣದಲ್ಲಿ ಬರ್ಕೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಮಂಗಳೂರಿಗೆ ಕರೆ ತಂದಿದ್ದಾರೆ.

ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಸೂರ್ಯ ಎನ್.ಕೆ. (19) ಬಂಧಿತ ಆರೋಪಿ. ಆರೋಪಿ ಸೂರ್ಯ ಎನ್.ಕೆ. ಬೆಂಗಳೂರಿನ ಶ್ರೀರಾಂಪುರದ ಒಂದನೇ ಕ್ರಾಸ್ ನಿವಾಸಿ.

ತುಳುನಾಡಿನ ಬಾವುಟವನ್ನು ಎಡಿಟ್ ಮಾಡಿ, ತನ್ನ ಫೇಸ್ ಬುಕ್ ನಲ್ಲಿ ಹಾಕಿದ್ದಲ್ಲದೆ ಅಶ್ಲೀಲವಾಗಿ ಕಮೆಂಟ್ ಹಾಕಿದ್ದ. ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶಶಿಧರ ಹೆಗ್ಡೆ ಪೊಲೀಸರಿಗೆ ದೂರು ನೀಡಿದ್ದರು.ಬರ್ಕೆ ಠಾಣೆಯಲ್ಲಿ ಈ ಬಗ್ಗೆ ಪೊಲೀಸರು 153 (ಎ) ಮತ್ತು 505 (2) ಐಪಿಸಿ ಅಡಿ ಪ್ರಕರಣ ದಾಖಲಿಸಿದ್ದರು.

ಬರ್ಕೆ ಠಾಣೆ ಎಸ್ಎಐ ಹಾರುಣ್ ಅಖರ್ ನೇತೃತ್ವದಲ್ಲಿ ಉರ್ವಾ ಪೊಲೀಸ್ ಠಾಣೆ ಸಿಬಂದಿ ಪುಷ್ಪರಾಜ್, ಪ್ರಕಾಶ್, ಬರ್ಕೆ ಠಾಣೆಯ ಶರತ್ ಎಂಬವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಪೊಲೀಸ್ ತಂಡ ಬೆಂಗಳೂರಿಗೆ ತೆರಳಿ, ಆರೋಪಿಯ ಮನೆಯನ್ನು ಪತ್ತೆ ಮಾಡಿದೆ. ಆರೋಪಿಯನ್ನು ನಿನ್ನೆ ಮಂಗಳೂರಿಗೆ ಕರೆತಂದು ಕೋರ್ಟಿಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈಗ ಬಂಧಿತ ಸೂರ್ಯ ಯಾವುದೋ ಕಾರಣಕ್ಕಾಗಿ ಪೂರ್ವಗ್ರಹ ಪೀಡಿತನಾಗಿ ತುಳುವರನ್ನು ಕೆರಳಿಸುವುದಕ್ಕಾಗಿ ತುಳು ಬಾವುಟವನ್ನು ಚಪ್ಪಲಿಗೆ ಹೊಂದಿಸಿ, ಪೋಸ್ಟ್ ಮಾಡಿದ್ದಲ್ಲದೆ, ‘ಇವತ್ತು ತುಳುನಾಡ್ ಚಪ್ಪಲಿ ಬಂದಿದೆ, ನಾಳೆ ಬಿಕಿನಿಯೂ ಬರಬಹುದು, ಹಾಕಿಕೊಂಡು ಮಜಾ ಮಾಡಿ ‘ ಎಂದು ಕಾಮೆಂಟ್ ಮಾಡಿದ್ದ. ಅದು ಅಪ್ಪಟ ಭಾಷಾ ಪ್ರೇಮಿ ತುಳುವರನ್ನು ಕೆರಳಿಸಿತ್ತು. ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

Leave A Reply

Your email address will not be published.