ಕೋವಿಡ್ ನಿಯಮ‌ ಉಲ್ಲಂಘಿಸಿ ವ್ಯಾಪಾರ | ಅಂಗಡಿಗಳಿಗೆ ದಂಡ ವಿಧಿಸಿದ ಗ್ರಾ.ಪಂ.

ಕಡಬ : ಗುಂಡ್ಯ, ಅಡ್ಡಹೊಳೆ ಪ್ರದೇಶದಲ್ಲಿ ಸರಕಾರದ ಕೋವಿಡ್ ನಿಯಮ ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದ 7 ಅಂಗಡಿಗಳಿಗೆ ಶಿರಾಡಿ ಗ್ರಾ.ಪಂ.ನಿಂದ ತಲಾ ರೂ.1000ದಂತೆ ದಂಡ ವಿಧಿಸಲಾಗಿದೆ.

 

ಜೂ.21ರ ಮುಂಜಾನೆ ತನಕ ಲಾಕ್‌ಡೌನ್ ಜಾರಿಯಲ್ಲಿದ್ದರೂ ಶಿರಾಡಿ ಗ್ರಾ.ಪಂ.ವ್ಯಾಪ್ತಿಯ ಗುಂಡ್ಯ, ಅಡ್ಡಹೊಳೆ ಪ್ರದೇಶದಲ್ಲಿ ಜೂ.16ರಂದು ಸಂಜೆ 7 ಅಂಗಡಿಯವರು ಕೋವಿಡ್ ನಿಯಮ ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಶಿರಾಡಿ ಗ್ರಾ.ಪಂ. ಪಿಡಿಒ ವೆಂಕಟೇಶ್ ಹಾಗೂ ಸಿಬ್ಬಂದಿಗಳು ಒಟ್ಟು 7 ಅಂಗಡಿಯವರಿಗೆ ದಂಡ ವಿಧಿಸಿದ್ದಾರೆ.

ಕೋವಿಡ್ ನಿಯಮ ಉಲ್ಲಂಘಿಸಿ ವ್ಯಾಪಾರ ಮಾಡಿದಲ್ಲಿ ರೂ. 5 ಸಾವಿರ ದಂಡ, ವ್ಯಾಪಾರ ಪರವಾನಿಗೆ ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ವ್ಯಾಪರಸ್ಥರು ಹಾಗೂ ಸಾರ್ವಜನಿಕರು ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಿಡಿಒ ವೆಂಕಟೇಶ್‌ರವರು ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

Leave A Reply

Your email address will not be published.