ಕೊಯಿಲ : ಯುವತಿಗೆ ಗರ್ಭದಾನ | ರಿಕ್ಷಾ ಚಾಲಕ ಯುವರಾಜನ ಗುಟ್ಟು ರಟ್ಟಾಯಿತು | ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

ಕಡಬ : ರಿಕ್ಷಾಚಾಲಕನೋರ್ವ ಯುವತಿಯೊಬ್ಬಳೊಂದಿಗೆ ಬಲವಂತದಿಂದ ಲೈಂಗಿಕ ಸಂಪರ್ಕಗೊಳಿಸಿದರಿಂದ ಯುವತಿ ಈಗ 8 ತಿಂಗಳ ಗರ್ಭಿಣಿಯಾಗಿದ್ದು,ಯುವತಿ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

ಆರೋಪಿ ರಿಕ್ಷಾ ಚಾಲಕ ಯುವರಾಜ ಎಂಬಾತನು, ಪ್ರೌಢಶಾಲಾ ದಿನಗಳಲ್ಲಿ ಯುವತಿಯನ್ನು ಶಾಲೆಗೆ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದು,ಬಳಿಕ 2019ರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಯುವತಿಯೊಂದಿಗೆ ಕೊಯಿಲ ಗ್ರಾಮದ ಬುಡಲೂರು ಗುಡ್ಡೆಯಲ್ಲಿ ಬಲವಂತದಿಂದ ಲೈಂಗಿಕ ಸಂಪರ್ಕ‌ ಮಾಡಿದ್ದು ಬಳಿಕ 2020ರ ಅಕ್ಟೋಬರ್ ತನಕ ಬಲವಂತದಿಂದ ಈ ಕೃತ್ಯ ನಡೆಸುತ್ತಿದ್ದ.ಇದರ ಪರಿಣಾಮ ಯುವತಿ ಈಗ 8 ತಿಂಗಳ ಗರ್ಭವತಿಯಾಗಿದ್ದು,ಈ ವಿಚಾರದ ಕುರಿತು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತಂತೆ ಆರೋಪಿ ರಿಕ್ಷಾ ಚಾಲಕ ಬುಡಲೂರಿನ ಯುವರಾಜನ ವಿರುದ್ಧ16-06-2021 ರಂದು ಕಡಬ ಠಾಣಾ ಅ ಕ್ರ ನಂಬ್ರ: 44/2021 ಕಲಂ : 376(2) (n) 506 .IPC And U/s – 5.6 POCSO ACT- 2012ಯಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave A Reply

Your email address will not be published.