ಉಜಿರೆ ಧರ್ಮಸ್ಥಳ ರಸ್ತೆಯಲ್ಲಿ ಕಡವೆಗೆ ಅಪರಿಚಿತ ವಾಹನ ಡಿಕ್ಕಿ | ರಸ್ತೆಯಲ್ಲಿ ಬಿದ್ದು ಆಕ್ರಂದನವಿಡುತ್ತಿದ್ದ ಕಡವೆಗೆ ಉಜಿರೆಯಲ್ಲಿ ಚಿಕಿತ್ಸೆ

ಇಂದು ಬೆಳಗ್ಗೆ 8:00 ಗಂಟೆ ಸುಮಾರಿಗೆ ಒಂದು ಹೆಣ್ಣು ಕಡವೆ ಯಾವುದೋ ಒಂದು ಗಾಡಿಗೆ ರೋಡ್ ದಾಟುವಾಗ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ಬಿದ್ದಿದನ್ನು ಅಲ್ಲಿದ್ದವರು ಗಮನಿಸಿದ್ದಾರೆ.

 

ಅನಂತ ರಾಮ್ ಮಾಸ್ಟರ್ ಅವರು ನೇತ್ರಾವತಿ ಇಂದ ತೀರ್ಥ ತೆಗೆದುಕೊಂಡು ಹೋಗುತಿರುವಾಗ ಕಡವೆ ರಸ್ತೆಯಲ್ಲಿ ಬಿದ್ದು ನೋವಿಂದ ಆಕ್ರಂದನ ನಡೆಸುತ್ತಿತ್ತು. ಅದರು ಬೊಬ್ಬೆ ಹೊಡೆಯುವುದನ್ನು ಕಂಡು ಪುನಃ ಅವರು ಕಡವೆ ಇರುವ ಜಾಗಕ್ಕೆ ಬಂದಿದ್ದಾರೆ.

ಅಲ್ಲಿಗೆ ಬಂದು ಕಡವೆಗೆ ಹೋಗಲು ಆಗದೆ ಇರುವುದನ್ನು ತಿಳಿದು ಸ್ನೇಕ್ ಪ್ರಕಾಶ್ ಅವರಿಗೆ ಕರೆ ಮಾಡಿ ತಿಳಿಸಿದ್ದು,ಅವರ ಮಾಹಿತಿ ಮೇರೆಗೆ ಶೌರ್ಯ ತಂಡದ ಕಾರ್ಯಕರ್ತರಾದ ಸ್ನೇಕ್ ಪ್ರಕಾಶ್ ಅವರು ಅಲ್ಲಿಗೆ ಬಂದು ನಂತರ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.

ತಿಳಿಸಿದ ತಕ್ಷಣವೇ ವಲಯ ಅರಣ್ಯ ಅಧಿಕಾರಿ ತ್ಯಾಗರಾಜ ಎಚ್ ಎಸ್ ರ ಮಾರ್ಗದರ್ಶನದ ಮೇರೆಗೆ ರಾಜೇಶ್ ಗಾರ್ಡ್ ಅಲ್ಲಿಗೆ ಧಾವಿಸಿ ನಂತರ ಆ ಕಡವೆಯನ್ನು ಹೆಚ್ಚಿನ ಚಿಕಿತ್ಸೆಗೆ ಉಜಿರೆಯ ಉಚ್ಚಿಲ ಪಶು ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗಲಾಗಿದೆ.

ಉಜಿರೆಯ ಚಿಕಿತ್ಸಾಲಯಕ್ಕೆ ಉಜಿರೆಯ ಅರಣ್ಯ ರಕ್ಷಕ ಶರತ್ ಶೆಟ್ಟಿ ಸಹಕರಿಸಿದ್ದಾರೆ.

ಜೊತೆಯಲ್ಲಿ ಕಡವೆ ಬಿದ್ದಲ್ಲೇ ಇದ್ದು ಸಹಕರಿಸಿದ ಊರಿನ ಮಹನೀಯರಿಗೆ ಮತ್ತು ಶೌರ್ಯ ತಂಡದ ಸ್ವಯಂಸೇವಕರಿಗೆ ಸ್ನೇಕ್ ಪ್ರಕಾಶ್, ಧರ್ಮಸ್ಥಳ ಇವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ. ಇದೀಗ ಕಡವೆ ಉಜಿರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

Leave A Reply

Your email address will not be published.