ಬಡ ಮತ್ತು ಮಧ್ಯಮ ವರ್ಗದವರ 3 ತಿಂಗಳ ವಿದ್ಯುತ್ ಬಿಲ್ ಮನ್ನಾ | ಸುದ್ದಿಯ ಬೆನ್ನು ಹತ್ತಿ ಹೋದಾಗ….!!

ರಾಜ್ಯದಲ್ಲಿನ ಬಡ ಮತ್ತು ಮಾಧ್ಯಮ ವರ್ಗದ ಕುಟುಂಬದವರ 3 ತಿಂಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡುವ ಬಗ್ಗೆ ಸುದ್ದಿಯೊಂದು ಹರಡುತ್ತಿದೆ.

ಬಡ ಮತ್ತು ಮಧ್ಯಮ ವರ್ಗದವರಿಗೆ ಬಿಪಿಎಲ್ ಕಾರ್ಡ್ ಉಳ್ಳ ಜನರಿಗೆ ಇದ್ದವರಿಗೆ ಸರ್ಕಾರದಿಂದ ಮೆಸ್ಕಂ ಕಂಪನಿ ಇವರು ಮೂರು ತಿಂಗಳ ಕರೆಂಟ್ ಬಿಲ್ಲನ್ನು ಮನ್ನಾ ಮಾಡಿದ್ದಾರೆ. ಆಧಾರ್ ಕಾರ್ಡ್ ಮತ್ತು ಕರೆಂಟ್ ಬಿಲ್ಲಿನ ಪ್ರತಿ ಮತ್ತು ಬಿಪಿಎಲ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಹತ್ತಿರದ ಮೆಸ್ಕಾಂ ಇಲಾಖೆಗೆ ಸಲ್ಲಿಸಬೇಕಾಗಿ ಮಾಹಿತಿ ಎಂದು ಅಡಿಯಲ್ಲಿ ಬರೆದ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತಿಂಗಳ ಬಿಲ್ ಫ್ರೀ ಎಂಬ ಮಾಹಿತಿ ನಿಜವೇ ಎಂದು ಮೆಸ್ಕಾಂ ಅನ್ನು ಸಂಪರ್ಕಿಸಿದಾಗ, ಇದು ಸುಳ್ಳು. ಇಲ್ಲಿಯತನಕ ಇಂತಹ ಯಾವ ಮಾಹಿತಿ ಕೂಡ ಸರ್ಕಾರದಿಂದ ಬಂದಿಲ್ಲ ಎಂಬ ಮಾಹಿತಿ ಈಗ ತಾನೆ ಮೇಸ್ಕಾಂ ನಿಂದ ಲಭ್ಯವಾಗಿದೆ.

ಮೆಸ್ಕಾಂ ಮಂಗಳೂರು ಲೆಟರ್ ಹೆಡ್ಡಿನಲ್ಲಿ ಬರೆದ ಪತ್ರದಲ್ಲಿ ಏನಿದೆ ?!

ಕೋವೀಡ್-19 ಮಹಾಮಾರಿಯ ಈ ಸಂದರ್ಭ ದಲ್ಲಿ ರಾಜ್ಯದಲ್ಲಿನ ಬಡ ಮತ್ತು ಮಾಧ್ಯಮ ವರ್ಗದ ಕುಟುಂಬ ವರ್ಗದವರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು ಲಾಕ್ ಡೌನ್ ನಿಂದಾಗಿ ದಿನನಿತ್ಯ ದುಡಿದು, ಮಾಸಿಕ ವೇತನವನ್ನು ಅವಲಂಬಿಸಿ ಜೀವನ ನಡೆಸುವ ಬಡ ಮತ್ತು ಮಾಧ್ಯಮ ವರ್ಗದವರ ಆರ್ಥಿಕ ಹೊರೆಯಾಗಿದೆ. ಆರ್ಥಿಕ ಪ್ಯಾಕೇಜ್ ಗಳು ಎಲ್ಲರಿಗೂ ತಲುಪದೇ ಇರುವ ಕಾರಣ 3 ತಿಂಗಳನ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡುವುದರಿಂದ ಸ್ವಲ್ಪ ಮಟ್ಟಿನ ಪರಿಹಾರವನ್ನು ಒದಗಿಸಿ ಒತ್ತಡರಹಿತ ಜೀವನ ನಡೆಸಲು ಅನಕೂಲ ಮಾಡಲು, ಸರ್ಕಾರವು ಕರೋನಾದ ಈ ಸಂಕಷ್ಟದ ಸಮಯದಲ್ಲಿ ಬಡ ಮತ್ತು ಮಾಧ್ಯಮ ವರ್ಗದವರಿಗೆ ಆರ್ಥಿಕ ಹೊರೆಯಿಂದ ಹೊರಬರಲು ಅನುಕೂಲವಾಗುವಂತೆ ಮಾಡಲು 3 ತಿಂಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಲು ಮೇಲನ ಉಲ್ಲೇಖದಲ್ಲ ತಿಳಿಸಿದ್ದು ಅದರಂತೆ ನಮ್ಮ ಶಾಖಾ ವ್ಯಾಪ್ತಿಯಲ್ಲಿ ಬರುವ ವಿ.ಪಿ.ಎಲ್ ಕಾರ್ಡ್ ಹೊಂದಿರುವ ಮನೆಯ ಸ್ಥಾವರಗಳ ಆರ್.ಆರ್. ಸಂಖ್ಯೆಯನ್ನು ಕೂಡಲೇ 3 ದಿನದೊಳಗಾಗಿ ನೀಡಲು ಈ ಮೂಲಕ ಕೋರಲಾಗಿದೆ ಎಂಬ ಒಕ್ಕಣೆ ಉಳ್ಳ ಪತ್ರ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದೀಗ ಈ ಮಹಿತಿ ಸುಳ್ಳು ಎಂದು ಸಾಬೀತಾಗಿದ್ದು, ಇಂತಹ ಸುದ್ದಿಗಳನ್ನು ವೈರಲ್ ಮಾಡಬಾರದಾಗಿ ಕೋರಿ ಕೊಳ್ಳಲಾಗಿದೆ.

Leave A Reply

Your email address will not be published.