ಗಂಡನ ಮರ್ಮಾಂಗ ಕಟ್ ಮಾಡಿದ ಹೆಂಡತಿ ಸೋಯಾಬೀನ್ ಎಣ್ಣೆ ಹಾಕಿ ತಯಾರಿಸಿದ್ದು ‘ ಪೀನಿಸ್ ಫ್ರೈ ‘ !

ಜೂನ್ 7 : ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಂದದ್ದಲ್ಲದೆ ಆತನ ಮರ್ಮಾಂಗವನ್ನು ಫ್ರೈ ಮಾಡಿದ ವಿಕ್ಷಿಪ್ತ ಘಟನೆ ನಡೆದಿದೆ.

ಬ್ರೆಜಿಲ್‌ ರಾಷ್ಟ್ರದ ಸಾವೊ ಗೊನ್ನಾಲೊ ನಗರ ಈ ರೀತಿಯ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ಕ್ರಿಸ್ಟಿನಾ ರೊಡ್ರಿಗಸ್ ಮಸಾಡೊ ಹೆಸರಿನ ಮಹಿಳೆಗೆ ಆಯಂಡ್ರೆ ಹೆಸರಿನ ವ್ಯಕ್ತಿಯೊಂದಿಗೆ ಮದುವೆಯಾಗಿದ್ದು, ಅವರ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದರು. ದೊಡ್ಡವ ಎಂಟು ವರ್ಷದ ಮಗ ಹಾಗೂ ಚಿಕ್ಕವಳು ಐದು ವರ್ಷದ ಮಗಳು. ದಂಪತಿ ನಡುವೆ ಸದಾ ಒಂದಲ್ಲೊಂದು ಕಾರಣಗಳಿಗಾಗಿ ಕೌಟುಂಬಿಕ ಕಲಹಗಳು ಸಾಮಾನ್ಯವಾಗಿತ್ತು. ಸಾಕಷ್ಟು ಭಿನ್ನಾಭಿಪ್ರಾಯಗಳು ಇಬ್ಬರ ಬಗ್ಗೆಯೂ ಇತ್ತು. ಹಿಂದೊಂದು ಬಾರಿ ಕಲಹ ತಾರಕಕ್ಕೇರಿ ಇಬ್ಬರೂ ಬೇರೆ ಬೇರೆಯಾಗಿದ್ದರು.

ಅವರಿಗೆ ಮದುವೆಯಾಗಿ ಹತ್ತು ವರ್ಷವಾಗಿತ್ತು. ಅದರಲ್ಲಿನ 2 ವರ್ಷ ಅವರು ಬೇರೆಯಾಗಿ ವಾಸಿಸುತ್ತಿದ್ದರು. ಅದಾದ ಮೇಲೆ ಎರಡು ವರ್ಷದ ಹಿಂದೆ ಅವರು ಮತ್ತೆ ಒಂದಾಗಿ ಮಕ್ಕಳಿಗಾಗಿ ಜತೆಗೆ ಸಂಸಾರ ನೌಕೆಯನ್ನು ಎಳೆಯುತ್ತಿದ್ದರು.

ಮೊನ್ನೆ ಮತ್ತೊಮ್ಮೆ ಅವರಿಬ್ಬರ ನಡುವೆ ಜಗಳ ಹತ್ತಿಕೊಂಡಿದೆ. ನಿಜಕ್ಕೂ ಅಲ್ಲಿ ಏನಾಯಿತೆಂದು ಈಗ ಯಾರಿಗೂ ಗೊತ್ತಿಲ್ಲ. ಆದರೆ ತನ್ನ ಪತಿ ಮಲಗಿರುವ ಸಮಯದಲ್ಲಿ ಪತ್ನಿ ಕ್ರಿಸ್ಟಿನಾ ಆತನನ್ನು ಕೊಂದು ಹಾಕಿದ್ದಾಳೆ. ಆತನನ್ನು ಕೊಂದ ನಂತರ ಕೂಡ ಆಕೆಯ ಕೋಪ ಕಮ್ಮಿ ಆಗಿಲ್ಲ. ಜೀವ ಕಳೆದುಕೊಂಡು ಕಾಲು ಚಾಚಿ ಮಲಗಿದ ಆತನ ಶಿಶ್ನವನ್ನು ಆಕೆ ಚಾಕುವಿನಿಂದ ಕತ್ತರಿಸಿ ತೆಗೆದಿದ್ದಾಳೆ. ಆನಂತರ ಆಕೆ ವಿಕ್ಷಿಪ್ತವಾಗಿ ನಡೆದುಕೊಂಡಿದ್ದು ಗುಪ್ತಾಂಗವನ್ನು ಫ್ರೈ ಮಾಡಲು ಬಳಸುವ ತವಾದಲ್ಲಿ ಸೋಯಾಬೀನ್ ಎಣ್ಣೆ ಸುರಿದು ಫ್ರೈ ಮಾಡಿದ್ದಾಳೆ.

ಇದೀಗ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಕೌಟುಂಬಿಕ ದೌರ್ಜನ್ಯದಿಂದ ಬೇಸತ್ತ ಮಹಿಳೆ ಈ ರೀತಿ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಮಹಿಳೆಯನ್ನು ಆತನ ಗಂಡ ದಿನವೂ ಹಿಂಸಿಸುತ್ತಿದ್ದ ಮತ್ತು ಆಕೆ ಡೈವೋರ್ಸ್ ಕೂಡಾ ತೆಗೆದುಕೊಳ್ಳಲು ಬಿಡುತ್ತಿರಲಿಲ್ಲ ಎನ್ನುವುದು ಮಹಿಳೆಯ ಪರ ವಕೀಲರ ಹೇಳಿಕೆ.

ಆದರೆ ಮಹಿಳೆಯ ಪತಿ ಸಹೋದರಿ, ಅಂಡ್ರಿಯನ ಹೇಳಿದ್ದೇ ಬೇರೆ. ಇದೀಗ ಕೊಲೆಯಾಗಿ ಹೋದ ಆಕೆಯ ಸಹೋದರ ಪತ್ನಿಗೆ ವಂಚಿಸಿದ್ದ. ಇದರಿಂದ ಕೋಪಗೊಂಡ ಆಕೆ ಕೊಲೆ ಮಾಡಿ ಆತನೇ ಗುಪ್ತಾಂಗಕ್ಕೆ ಚಾಕು ಹಾಕಿದ್ದಳು ಎನ್ನುವುದು ತೀರಿಹೋದ ವ್ಯಕ್ತಿಯ ಸಹೋದರಿಯ ಹೇಳಿಕೆ.

ಈ ದಂಪತಿ ಜೊತೆಯಾಗಿ ಪಿಜ್ಜಾ ಡೆಲಿವರಿ ಅಂಗಡಿ ನಡೆಸುತ್ತಿದ್ದರು. ಗಂಡನನ್ನು ಕೊಂದ ದ್ದಲ್ಲದೆ ಆತನ ಪಿನೆಸ್ ಫ್ರೈ ಮಾಡಿ ಮಹಿಳೆಯ ನಡೆ ಕಳವಳಕಾರಿಯಾಗಿದ್ದು, ಆಕೆಗೆ ಕಠಿಣ ಶಿಕ್ಷೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Leave A Reply

Your email address will not be published.