ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಿಟ್ ವಿತರಣೆ | ಕೆಪಿಸಿಸಿ ವಕ್ತಾರ ನಂದಕುಮಾರ್ ಪ್ರಾಯೋಜಕತ್ವ |185 ಕೊರೊನಾ ವಾರಿಯರ್ಸ್ಗಳಿಗೆ ತಲಾ.1500 ಮೌಲ್ಯದ ಕಿಟ್
ಪರಿಪೂರ್ಣ ಮನಸ್ಸಿನಿಂದ ದೇಶಕ್ಕೆ ಬಂದಿರುವ ಮಹಾಮಾರಿಯ ವಿರುದ್ದ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್ ಸೇವೆ ಶ್ಲಾಘನಿಯ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಅವರು ಜೂ.11ರಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಕೆ.ಪಿ.ಸಿ.ಸಿ. ಸಂಯೋಜಕ ನಂದ ಕುಮಾರ್ ಮಡಿಕೇರಿಯವರು ಪ್ರಾಯೋಜಿಸಿದ್ದ ಕಿಟ್ನ್ನು ಆಶಾಕಾರ್ಯಕರ್ತೆಯರಿಗೆ, ಗೃಹರಕ್ಷಕದಳದ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ, ಡಿ ದರ್ಜೆ ನೌಕರರಿಗೆ ವಿತರಿಸಿ ಮಾತನಾಡಿ, ದೇಶಕ್ಕೆ ಬಂದಿರುವ ಕೊರೋನಾ ಮಹಾಮಾರಿಯ 2ನೇ ಅಲೆ ಬಂದಿದೆ, ಕೊರೋನಾ ನಿಯಂತ್ರಣದಲ್ಲಿ ಸರಕಾರ ವಿಫಲವಾಗಿದ್ದರೂ ಕೊರೋನಾ ವಾರಿಯರ್ಸ್ಗಳ ಸೇವೆ ಶ್ಲಾಘನಿಯ, ಆಶಾಕಾರ್ಯಕರ್ತೆಯರಿಗೆ ಸರಿಯಾಗಿ ಸಂಬಳ ಬರದಿದ್ದರೂ ಅವರು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ, ಸರಕಾರ ಕೊರೋನಾದ ಸಂದಿಗ್ದ ಕಾಲದಲ್ಲಿಯೂ ಪೆಟ್ರೋಲ್, ವಿದ್ಯುತ್ ದರ ಹೆಚ್ಚಿಸಿ ಜನರಿಗೆ ಬರೆ ಎಳೆದಿದೆ ಎಂದು ಹೇಳಿದರು.
ಕಿಟ್ ಪ್ರಾಯೋಜಿಸಿದ ನಂದ ಕುಮಾರ್ ಅವರು ಮಾತನಾಡಿ, ಕೊರೋನಾ ಸಂಕಷ್ಟದಿಂದ ಜನರನ್ನು ಪಾರು ಮಾಡಲು ಕಾಂಗ್ರೆಸ್ ಪ್ರಯತ್ನಪಡುತ್ತಿದ್ದು, ಅಕ್ಕಿ ಸಾಮಾಗ್ರಿ, ಆಂಬುಲೆನ್ಸ್,ಔಷಧಿಗಳನ್ನು ವಿತರಿಸುವ ಕೆಲಸ ಮಾಡಿದೆ ಎಂದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಕೃಷ್ಣಪ್ಪ,ಕೆ.ಪಿ.ಸಿ.ಸಿ. ಸದಸ್ಯ ಡಾ| ರಘು, ಕೆ.ಪಿ.ತೋಮಸ್, ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಜಿ ಜಿ.ಪಂ.ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ರಾಜ್ಯ ಅಲ್ಪ ಸಂಖ್ಯಾತ ವಿಭಾಗದ ಸಂಚಾಲಕ ಶರೀಫ್ ಎ.ಎಸ್. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿಜಯ ಕುಮಾರ್ ರೈ, ಡಿಸಿಸಿ ಕಾರ್ಯದರ್ಶಿ ಗಣೇಶ್ ಕೈಕುರೆ, ಸೈಮನ್ ಸಿ.ಜೆ, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ, ಸುಳ್ಯ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣ ಸಂಯೋಜಕರಾದ ಸಚಿನ್ ರಾಜ್ ಶೆಟ್ಟಿ, ಭವಾನಿ ಶಂಕರ್ ಕಲ್ಮಡ್ಕ ಪ್ರಮುಖರಾದ ಫಝಲ್ ಕೋಡಿಂಬಾಳ,ಸತೀಶ್ ನಾಕ್ ಮೇಲಿನ ಮನೆ, ಹನೀಫ್ ಕೆ.ಎಂ.ಅಶ್ರಫ್ ಶೇಡಿಗುಂಡಿ, ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷ ಫೈಝಲ್ ಎಸ್.ಇ.ಎಸ್, ಸುಧೀರ್ ದೇವಾಡಿಗ, ಡೆನ್ನಿಸ್ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.
ಕಡಬ ತಾಲೂಕಿನಲ್ಲಿ 185 ಕಿಟ್ ವಿತರಣೆ
ಕಾಂಗ್ರೆಸ್ ವತಿಯಿಂದ ಕಡಬ ತಾಲೂಕಿನ ಕಡಬ, ಶಿರಾಡಿ, ನೆಲ್ಯಾಡಿ, ಕೊಯಿಲ, ಕಾಣಿಯೂರು, ಪಾಲ್ತಾಡಿಯಲ್ಲಿ ಒಟ್ಟು 185 ಕಿಟ್ನ್ನು ವಿತರಿಸಲಾಗಿದೆ, ಆಶಾಕಾರ್ಯಕರ್ತೆಯರು, ಗೃಹರಕ್ಷಕದಳದ ಸಿಬ್ಬಂದಿ ಹಾಗೂ ಪತ್ರಕರ್ತರು, ಡಿ ದರ್ಜೆ ನೌಕರರಿಗೆ ವಿತರಿಸಿದ ಕಿಟ್ನಲ್ಲಿ ಅಕ್ಕಿ ಸಕ್ಕರೆ, ಸಾಬೂನು, ಚಾಪುಡಿ, ಸಾಂಬಾರ ಪದಾರ್ಥಗಳು ಸೇರಿದಂತೆ ರೂ.1500 ಮೌಲ್ಯದ ಸಾಮಾಗ್ರಿಗಳಿದ್ದವು