ಮರಳು ಅಕ್ರಮ ದಾಸ್ತಾನು ಅಡ್ಡೆಗೆ ಗಣಿ ಇಲಾಖೆ,ಪೊಲೀಸ್ ಜಂಟಿ ದಾಳಿ | 45 ಲೋಡ್ ಮರಳು ವಶ
ಮಂಗಳೂರು : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ಅಕ್ರಮವಾಗಿ ಮರಳನ್ನು ದಾಸ್ತಾನು ಇರಿಸಿದ್ದ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದಾರೆ.
ಕಲ್ಲಾಪು ರಾ.ಹೆ. ಬಳಿ ನಿರ್ಮಾಣಗೊಳ್ಳುತ್ತಿರುವ ಹೊಸ ಮಾರುಕಟ್ಟೆ ಮತ್ತು ಅಪಾರ್ಟ್ಮೆಂಟ್ ಬಳಿ ಮರಳು ಸ್ಟಾಕ್ ಮಾಡಲಾಗಿದೆ ಎಂದು ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿ 45 ಲೋಡ್ ಮರಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮರಳನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಆರೋಪಿಗಳು ಯಾರೆಂದು ಮಾಹಿತಿ ಕಲೆ ಹಾಕಲಾಕುತ್ತಿದ್ದಾರೆ.
ಈ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.