ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಏರಿಕೆ ನಂತರ ವಿದ್ಯುತ್ ಶಾಕ್

ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿ ಬುಧವಾರ (ಜೂ.9) ಆದೇಶ ಹೊರಡಿಸಲಾಗಿದೆ. 2021ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಯೂನಿಟ್ ಗೆ 30 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಬಿದ್ದಿದೆ.

ಕೊರೋನಾ ಸಂಕಷ್ಟದ ನಡುವೆಯೇ ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್, ದೈನಂದಿನ ಪದಾರ್ಥಗಳ ಬೆಲೆ ಹೆಚ್ಚಳದ ನಡುವೆಯೇ ವಿದ್ಯುತ್ ದರ ಏರಿಕೆಯಾಗಿರುವುದು ಸಾರ್ವಜನಿಕರಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ಈಗಾಗಲೇ ತುಂಬಾ ತುಂಬಾ ಜನರು ನಷ್ಟದಲ್ಲಿದ್ದು, ಈ ನಡುವೆ ಈ ವಿದ್ಯುತ್ ದರ ಏರಿಕೆ ಅವರೆಲ್ಲರ ಬೆನ್ನಿಗೆ ಬರೆಯೆರದಂತಾಗಿದೆ.

Leave A Reply

Your email address will not be published.