ಕಡಬ :ಹಿಂದೂ ಸಂಘಟನೆಯ ಮುಖಂಡನ ಮೇಲಿನ ತಲವಾರು ದಾಳಿ ಪ್ರಕರಣ..ಆರೋಪಿಗೆ ಜಾಮೀನು ಮಂಜೂರುಗೊಳಿಸಿದ ನ್ಯಾಯಾಲಯ..ಸುಳ್ಳಾಯಿತೇ ಮುಖಂಡನ ಆರೋಪ?
ಕಡಬ ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣದ ಆರೋಪಿಗೆ ಪುತ್ತೂರಿನ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕಡಬದಲ್ಲಿ ಹಿಂದೂ ಸಂಘಗಳಲ್ಲಿ ಗುರುತಿಸಿಕೊಂಡಿದ್ದ ಶ್ರೀ ರಾಮಸೇನೆಯ ಮುಖಂಡ ಗೋಪಾಲ ನಾಯ್ಕ ಎಂಬವರು ಮೇ.2 ರಂದು ತನ್ನ ಮೇಲೆ ಅನಿಲ್ ರೈ ಎಂಬವರು ತಲ್ವಾರ್ ನಿಂದ ದಾಳಿ ಮಾಡಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಕಡಬ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಅನಿಲ್ ರೈ ಹಾಗೂ ಇತರರ ಮೇಲೆ ಕೊಲೆ ಪ್ರಕರಣ ಯತ್ನ ದಾಖಲಿಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಅನಿಲ್ ಗೈಯವರು ಪುತ್ತೂರು ಐದನೇ ಹೆಚ್ಚುವರಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಗೋಪಾಲ ನಾಯಕ್ ನನ್ನ ಮೇಲೆ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಸುಳ್ಳು ದೂರು ದಾಖಲಿಸಿದ್ದು ದಿನಾಂಕ ಮೇ 2 ರಂದು ರಾತ್ರಿ ಪ್ರಕರಣ ನಡೆದಿದೆ ಎಂದು ಹೇಳಲಾದ ವೇಳೆಯಲ್ಲಿ ತಾನು ಕಡಬದ ಪೆಟ್ರೋಲ್ ಪಂಪ್ ಒಂದರಲ್ಲಿ ತನ್ನ ವಾಹನ ಸಮೇತನಾಗಿ ಇದ್ದ ಬಗ್ಗೆ ಸಿಸಿ ಟಿವಿ ಫುಟೆಜ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.ಆರೋಪಿ ಪರ ಖ್ಯಾತ ನ್ಯಾಯವಾದಿ ನರಸಿಂಹ ಪ್ರಸಾದ್ ವಾದಿಸಿದರು.
ಏನಿದು ಘಟನೆ?: ಮೇ.2 ರಂದು ಗೋಪಾಲ ನಾಯ್ಕರವರು ತಮ್ಮ ಶೂಟಿಯಲ್ಲಿ ಬಿಪಿ ಮತ್ತು ಶುಗರ್ ಮಾತ್ರ ಕೊಡಲು ತನ್ನ ಮಾವನ ತೆರಳುತ್ತಿದ್ದಾಗ ಕಡಬ ತಾಲೂಕಿನ ಕೋಡಿಂಬಾಳ ಸಮೀಪ ಸುಮಾರು 8 30 ರ ವೇಳೆ ತನ್ನ ಮೇಲೆ ಯಾರೋ ಹಲ್ಲೆ ಮಾಡಿದ್ದಾರೆ. ಆಗ ಎದುರಿನಿಂದ ಬಂದ ಜೀಪಿನ ಬೆಳಕಿನಲ್ಲಿ ನೋಡಿದಾಗ ಕಡಬದ ಕ್ರೇನ್ ಚಾಲಕ ಅನಿಲ್ ರೈ ಎಂಬಾತನ ಇತರ 4 ಜನರೊಂದಿಗ ತಲವಾರು ಹಿಡಿದು ನಿಂತಿದ್ದನ್ನು ನೋಡಿರುವುದಾಗಿ ಗೋಪಾಲರವರು ತಮ್ಮ ದೂರಿನಲ್ಲಿ ತಿಳಿಸಿದ್ದರು. ಅಲ್ಲದೇ ಆಗ ಸ್ಥಳಕ್ಕೆ ಜೀಪು ಬಂದ ಹಿನ್ನೆಲೆಯಲ್ಲಿ ಆರೋಪಿಗಳೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ. ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಬಳಿ ತಲವಾರಿನಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು