ಕ್ರೀಡಾ ವೀರರು ಕೊಡುಗೈ ಶೂರರು – ಬರಹ : ಬಾಲಚಂದ್ರ ಕೋಟೆ


ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಗಲಿರುಳು ಶ್ರಮಿಸುತ್ತಿದ್ದು, ಸಿನಿಮಾ ತಾರೆಯರು, ಉದ್ಯಮಿಗಳು ಸೇರಿದಂತೆ ಕ್ರೀಡಾಪಟುಗಳು ಕೂಡ ಸಂತ್ರಸ್ತರಿಗೆ ನೆರವು ನೀಡುವುದರೊಂದಿಗೆ ಸರ್ಕಾರದೊಂದಿಗೆ ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸಿದ್ದಾರೆ. ಅಂತಹ ಕ್ರೀಡಾಳುಗಳ ವಿವರ ಇಲ್ಲಿದೆ.


ಕೊಹ್ಲಿ ದಂಪತಿ 11 ಕೋಟಿ ರೂ. :
ಕೋವಿಡ್19 ನಿಯಂತ್ರಣಕ್ಕೆ ಸರ್ಕಾರಕ್ಕಾಗಿ ನೆರವಾಗಲು ಕೊಹ್ಲಿ-ಅನುಷ್ಕಾ ದಂಪತಿ ಅಭಿಯಾನ ಆರಂಭಿಸಿದ್ದು, ಒಟ್ಟು 11 ಕೋಟಿ ರೂ. ಸಂಗ್ರಹಿಸಿದ್ದಾರೆ. ಇದರಲ್ಲಿ ಕೊಹ್ಲಿ ದಂಪತಿ ನೀಡಿದ ಸ್ವತಃ 2 ಕೋಟಿ ರೂ. ದೇಣಿಗೆಯೂ ಸೇರಿದೆ. ಕೊಹ್ಲಿ ಈ ಕುರಿತು ಟ್ವಿಟರ್ ಮೂಲಕ ಖಚಿತಪಡಿಸಿದ್ದಾರೆ.


ಸಚಿನ್ 1 ಕೋಟಿ ರೂ. :
ದಿಲ್ಲಿ ಮೂಲದ ಸಂಘವೊಂದು ಆಕ್ಸಿಜನ್ ಅಭಿಯಾನ ಆರಂಭಿಸಿದ್ದು, ಆಕ್ಸಿಜನ್ ಆಮದಿಗಾಗಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ 1 ಕೋಟಿ ರೂ.ನೀಡುವ ಮೂಲಕ ಸಂಘದೊಂದಿಗೆ ಕೈಜೋಡಿಸಿದ್ದಾರೆ.


ಪಾಂಡ್ಯ ಬ್ರದರ್ಸ್:200 ಸಾಂದ್ರಕಗಳು :
ಕೋವಿಡ್ ಚಿಕಿತ್ಸೆಗೆ ಹಾರ್ದಿಕ್ ಪಾಂಡ್ಯ ಹಾಗೂ ಕ್ರುನಾಲ್ ಪಾಂಡ್ಯ ನೆರವಾಗಿದ್ದು,ತಮ್ಮ ಟ್ರಸ್ಟ್ ಮೂಲಕ 200 ಆಮ್ಲಜನಕ ಸಾಂದ್ರಕಗಳನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.


ಮೊಬೈಲ್ ಟೆಸ್ಟಿಂಗ್ ಕೇಂದ್ರ: ಭಜ್ಜಿ
ಭಾರತದ ಮಾಜಿ ಆಫ್‍ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಟ್ರಸ್ಟ್ ವತಿಯಿಂದ ಪುಣೆಯಲ್ಲಿ ಮೊಬೈಲ್ ಕೋವಿಡ್ ಟೆಸ್ಟಿಂಗ್ ಕೇಂದ್ರ ಆರಂಭಿಸುವ ಕುರಿತು ಘೋಷಿಸಿದ್ದಾರೆ.ಮೊಬೈಲ್ ಟೆಸ್ಟಿಂಗ್ ಕೇಂದ್ರ ದಿನಕ್ಕೆ 1,500 ತಪಾಸಣಾ ಸಾಮಥ್ರ್ಯವನ್ನು ಹೊಂದಿದ್ದು, ಬಡವರಿಗೆ ಉಚಿತ ಎಂದು ಭಜ್ಜಿ ತಿಳಿಸಿದ್ದಾರೆ.


ಜಡೇಜಾ ಕುಟುಂಬದಿಂದ ರೇಷನ್:
ಸ್ಟಾರ್ ಆಲ್‍ರೌಂಡರ್ ರವೀಂದ್ರ ಜಡೇಜಾ ಸಹೋದರಿ ರೈನಾ ಜತೆಗೂಡಿ ರಾಜ್‍ಕೋಟ್ ಆಸುಪಾಸಿನ ಬಡವರಿಗೆ ಅಗತ್ಯ ವಸ್ತುಗಳ ಸಹಿತ ದಿನಸಿ ವಸ್ತುಗಳನ್ನು ವಿತರಿಸಿದ್ದು, ಅಗತ್ಯ ಇರುವವರಿಗೆ ಮತ್ತಷ್ಟು ವಿತರಿಸುವುದಾಗಿ ಘೋಷಿಸಿದ್ದಾರೆ.
ಟೇಬಲ್
ನೆರವು ನೀಡಿದ ಆಟಗಾರರು
ಆಟಗಾರ/ಆಟಗಾರ್ತಿ ಮೊತ್ತ(ರೂ.)
ಗೌತಮ್ ಗಂಭೀರ್ 2ಕೋಟಿ
ರೋಹಿತ್ ಶರ್ಮಾ 80ಲಕ್ಷ
ಸುರೇಶ್ ರೈನಾ 52ಲಕ್ಷ
ಸೌರವ್ ಗಂಗೂಲಿ 50ಲಕ್ಷ
ಮಿಥಾಲಿ ರಾಜ್ 10ಲಕ್ಷ
ಪೂನಂ ಯಾದವ್ 2ಲಕ್ಷ
ಪಾಯಿಂಟ್ಸ್………….
*ನೀಲಿ ಜೆರ್ಸಿಯಲ್ಲಿ ಆಡುವ ಪಂದ್ಯದ ಮೊತ್ತ ದೇಣಿಗೆಯಾಗಿ ನೀಡಲು ಆರ್‍ಸಿಬಿ ನಿರ್ಧಾರ
*ಬಿಸಿಸಿಐ ಸಹಿತ ಹಲವು ಕ್ರಿಕೆಟ್ ಸಂಸ್ಥೆಯಿಂದ 50 ಕೋಟಿ ರೂ.ದೇಣಿಗೆ
*ಪಂಜಾಬ್ ಕಿಂಗ್ಸ್ ವತಿಯಿಂದ ಆಕ್ಸಿಜನ್ ಅಭಿಯಾನ
*ಪ್ರಸಕ್ತ ವರ್ಷದ ಐಪಿಎಲ್ ವೇತನದಿಂದ ಶೇ.10ರಷ್ಟು ನೀಡುವುದಾಗಿ ಜೈದೇವ್ ಉನದ್ಗಟ್ ಘೋಷಣೆ

Leave A Reply

Your email address will not be published.