ದಕ್ಷಿಣ ಕನ್ನಡ ಕೋವಿಡ್ ನಿಯಮಾವಳಿ ಬಿಗಿ | ಅವಶ್ಯ ವಸ್ತು ಖರೀದಿಗೆ ನಡೆದುಕೊಂಡೇ ಹೋಗಿ,ಅವಧಿ ಮೀರಿ ಅಂಗಡಿ ತೆರೆದರೆ ಕಠಿಣ ಕ್ರಮ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಕೊರೊನಾ ಪಾಸಿಟಿವಿಟಿ ದರ ಶೇ. 20 ರಿಂದ 21ರಷ್ಟಿದ್ದು, ಅದನ್ನು ಶೇ. 5ಕ್ಕೆ  ಇಳಿಸಲು ಜನರ ಸಹಕಾರ ಅಗತ್ಯ. ಇದಕ್ಕೆ ಮುಂದಿನ ಒಂದು ವಾರ ನಿರ್ಣಾಯಕ. ಜೂ. 14ರವರೆಗೂ ಲಾಕ್‌ ಡೌನ್‌ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ.ಈ ನಿಟ್ಟಿನಲ್ಲಿ  ಎಂದು ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ. ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಅವಶ್ಯ ವಸ್ತು ಖರೀದಿಗೆ ಮನೆ ಸಮೀಪದ ಅಂಗಡಿಗೆ ನಡೆದೇ ಹೋಗಿ ಬರಬೇಕು.ಅವಧಿ ಮೀರಿ ಅಂಗಡಿ- ಮುಂಗಟ್ಟು ತೆರೆದಿಡುವುದು, ಅನಗತ್ಯ ವಾಹನ ಸಂಚಾರ ಇತ್ಯಾದಿಗಳ ಬಗ್ಗೆ ಗಮನ ಹರಿಸಲು ಪಾಲಿಕೆಯ ಆಯುಕ್ತರ ನೇತೃತ್ವದ 10 ಫ್ಲೈಯಿಂಗ್ ಸ್ಕ್ವಾಡ್‌ಗಳು ಕಾರ್ಯ ನಿರ್ವಹಿಸಲಿವೆ. ತಾಲೂಕು ಮಟ್ಟದಲ್ಲಿ ಸಹಾಯಕ ಆಯುಕ್ತರ ನೇತೃತ್ವದ 2ರಿಂದ 3 ವಿಚಕ್ಷಣ ತಂಡಗಳು ಕಾರ್ಯಾಚರಿಸಲಿವೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50ಕ್ಕಿಂತ ಹೆಚ್ಚು ಪಾಸಿಟಿವ್‌ ಪ್ರಕರಣಗಳಿರುವ ಗ್ರಾ.ಪಂ.ಗಳಲ್ಲಿ ಪೂರ್ವ ನಿಗದಿತ ಮದುವೆ ಮತ್ತು ಇತರ ಕಾರ್ಯಕ್ರಮಗಳಿಗೂ ಅನುಮತಿ ಇಲ್ಲ. ಹೊಸ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದಿಲ್ಲ. ಜಿಲ್ಲೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದರು.

ಫ್ಲೈಯಿಂಗ್ ಸ್ಕ್ವಾಡ್‌
ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಜನರ ಅನಗತ್ಯ ಸಂಚಾರ ತಡೆಯಲು ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ.

ಹೋಂ ಐಸೊಲೇಶನ್‌ನಲ್ಲಿ ಇರುವವರಿಗೆ ಪ್ರತ್ಯೇಕ ಶೌಚಾಲಯ ಇಲ್ಲದಿರುವುದು, ಬಿಪಿ, ಮಧುಮೇಹದ‌ಂತಹ ಅನಾರೋಗ್ಯ ಇದ್ದಲ್ಲಿ ಅಂಥವರನ್ನು ಕಡ್ಡಾಯವಾಗಿ ಕೊರೊನಾ ಕೇರ್‌ಸೆಂಟರ್‌ ಗೆ ದಾಖಲಿಸಲಾಗುತ್ತದೆ ಎಂದರು.

Leave A Reply

Your email address will not be published.