ಟಿಪ್ಪರ್ ಮಗುಚಿದ ಕಾರಣ ಚಾಲಕ ಸ್ಥಳದಲ್ಲೇ ಸಾವು

ಪಡುಬಿದ್ರಿ: ಟಿಪ್ಪರ್ ಮಗುಚಿ ಬಿದ್ದು ಚಾಲಕ ಸಾವನ್ನಪ್ಪಿದ ಘಟನೆ ನಂದಿಕೂರು ಬಳಿ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಪಕ್ಷಿಕೆರೆ ನಿವಾಸಿ ಹರೀಶ್ ಕೋಟ್ಯಾನ್ (37) ಎಂದು ಗುರುತಿಸಲಾಗಿದೆ. ಇವರು ಟಿಪ್ಪರ್ ನಲ್ಲಿ ಮಣ್ಣು ಸಾಗಿಸುತ್ತಿದ್ದು, ಖಾಲಿ ಮಾಡುತ್ತಿರುವ ವೇಳೆ ಟಿಪ್ಪರ್ ಲಾರಿ ಮಗುಚಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಹರೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಸೇರಿದ ಇಂಡಸ್ಟ್ರಿಯಲ್ ಎಸ್ಟೇಟ್ ಸೈಟಲ್ಲಿ ಇಂದು ಬೆಳಗ್ಗೆ 10:30 ರ ಸುಮಾರಿಗೆ ಮಣ್ಣು ತುಂಬಿದ್ದ ಟಿಪ್ಪರ್ ನ ಹೈಡ್ರಾಲಿಕ್ ಜಾಕನ್ನು ಏರಿಸಿದಾಗಲೂ ಒದ್ದೆ ಮಣ್ಣು ಬೀಳದೆ ಇದ್ದಾಗ ಟಿಪ್ಪರನ್ನು ಚಾಲೂ ಸ್ಥಿತಿಯಲ್ಲಿರಿಸಿ ಹಿಂಬದಿ ಬೋಲ್ಟ್ ಸರಿಸಲು ಬಂದಾಗ ಟಿಪ್ಪರ್ ಮಗುಚಿ ಅವರ ಮೇಲೆಯೇ ಬಿದ್ದಿದೆ. ಪರಿಣಾಮ ಹರೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹರೀಶ್ ತಂದೆ, ತಾಯಿ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಘಟನೆ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು ಮೊದಲು ಬಸ್ ಚಾಲಕನಾಗಿ ದುಡಿಯುತ್ತಿದ್ದರು ಎಂದು ತಿಳಿದುಬಂದಿದೆ.

Leave A Reply

Your email address will not be published.