ಫೇಸ್ ಬುಕ್ ಲೈವ್ ಬಂದು ಆತ್ಮಹತ್ಯೆಗೆ ಯತ್ನ | ಅಮೆರಿಕದ ಅಧಿಕಾರಿಯಿಂದ ಭಾರತೀಯನ ರಕ್ಷಣೆ
ಸಂತೋಷದ ಸಂದರ್ಭದಲ್ಲಿ ಅಥವಾ ಇನ್ಯಾವುದೇ ಸಮಾರಂಭಗಳಲ್ಲಿ ಸಾಮಾನ್ಯ ಜನರು ಫೇಸ್ ಬುಕ್ ಲೈವ್ ಬರುತ್ತಾರೆ. ಆದರೆ ಇಲ್ಲೊಬ್ಬ ಸಾಯಲೆಂದೇ ಫೇಸ್ ಬುಕ್ ಲೈವ್ ಬಂದಿದ್ದಾನೆ. ದೆಹಲಿಯ ವ್ಯಕ್ತಿಯೊಬ್ಬ ಫೇಸ್ಬುಕ್ ಲೈವ್ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಅಮೆರಿಕದ ಅಧಿಕಾರಿಗಳು ರಕ್ಷಿಸಿದ ಅಪರೂಪದ ಘಟನೆ ನಡೆದಿದೆ.
ಜೂನ್ 3 ರ ಮಧ್ಯರಾತ್ರಿಯ ವೇಳೆ ದೆಹಲಿಯ ಸುಮಾರು 39 ವರ್ಷದ ವ್ಯಕ್ತಿ ಜೀವನದಲ್ಲಿ ಜುಗುಪ್ಸೆಗೊಂಡು ಫೇಸ್ ಲೈವ್ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ಸಮಯದಲ್ಲಿ ಫೇಸ್ಬುಕ್ನ ಅಮೆರಿಕ ಕಚೇರಿಯಲ್ಲಿ ಕುಳಿತ್ತಿದ್ದ ಸಿಬ್ಬಂದಿ ಇದನ್ನು ಗಮನಿಸಿದ್ದಾರೆ. ನಂತರ ಕೂಡಲೇ ದೆಹಲಿಯ ಪೊಲೀಸರಿಗೆ ಈ ಮಾಹಿತಿಯನ್ನು ತಕ್ಷಣ ರವಾನಿಸಿದ್ದಾರೆ.
ಅಮೇರಿಕಾದಿಂದ ವಿಡಿಯೋಗಳನ್ನು ಕೂಡಲೇ ದೆಹಲಿಯ ಪಾಲಂ ಪೊಲೀಸರಿಗೆ ರವಾನಿಸಲಾಗಿದೆ. ಕೂಡಲೇ ಆ ವ್ಯಕ್ತಿಯ ವಿಳಾಸ ಪತ್ತೆ ಮಾಡಲಾಯಿತು. ಪಾಲಂ ಠಾಣೆಯ ಪಿಎಸ್ಐ ಅಮಿತ್ ಕುಮಾರ್ ಕೂಡಲೇ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಆ ವೇಳೆಗಾಗಲೇ ವ್ಯಕ್ತಿಗೆ ತೀವ್ರ ರಕ್ತಸ್ರಾವವಾಗಿತ್ತು. ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ಏಮ್ಸ್ಗೆ ದಾಖಲು ಮಾಡಲಾಗಿದೆ.