Relationship: ಗಂಡನ ಮೂಡ್ ಹೆಚ್ಚಿಸಲು ಪತ್ನಿಯು ದೇಹದ ಆ ಭಾಗಗಳಿಗೆ ಪರ್ಫ್ಯೂಮ್ ಹಾಕೋ ಜೊತೆಗೆ ಈ ಟಿಪ್ಸ್ ಫಾಲೋ ಮಾಡಿ!
Relationship: ಪ್ರತಿಯೊಬ್ಬರು ವಿವಾಹವಾದ ಬಳಿಕ ಲೈಂಗಿಕ ಸುಖ ಬಯಸುವರು. ಲೈಂಗಿಕ ಸುಖ ಎನ್ನುವುದು ವೈವಾಹಿಕ (Relationship) ಜೀವನದ ಒಂದು ಭಾಗ. ಆದರೆ ಕೆಲವು ಮಹಿಳೆಯರಿಗೆ ಗಂಡನಿಂದ ಇದು ಸಿಗದೆ ಇರಬಹುದು. ಹೌದು, ವೈವಾಹಿಕ ಸಂಬಂಧದಲ್ಲಿ ಕೆಲವೊಮ್ಮೆ ಗಂಡ ಸಮಯಾನೇ ಕೊಡಲ್ಲ ಎನ್ನುವುದು ಬಹಳಷ್ಟು ಮಹಿಳೆಯರ ನೋವು. ಹಾಗಿದ್ದರೆ ಗಂಡ ಹಿಂದಿಂದೆ ಬರುವಂತಾಗಲು, ನಿಮ್ಮ ಜೊತೆಗೆ ರೊಮ್ಯಾನ್ಸ್ಗೆ ಮಾಡಲು, ಆಕರ್ಷಣೆ ಆಗಲು ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು.
ಸಾಮಾನ್ಯವಾಗಿ ಪುರುಷರು ಮಾತುಗಳು, ಭಾವನೆಗಳನ್ನು ಕೇಳುವುದಕ್ಕಿಂತ, ನಿಮ್ಮ ಹೊಸ ಲುಕ್, ದೇಹದ ಪರಿಮಳದಿಂದ ಬೇಗ ನಿಮಗೆ ಫಿದಾ ಆಗುತ್ತಾರೆ. ಹಾಗಾಗಿ ನೀವು ನಿಮ್ಮ ಪತಿಗಾಗಿ ಸ್ವಲ್ಪ ಹೆಚ್ಚು ಗಮನ ವಹಿಸಿ ಪತಿಗಾಗಿ ರೊಮ್ಯಾಂಟಿಕ್ ಆಗಿ ರೆಡಿಯಾಗಿ. ಹೇಗೆಂದರೆ ನಿಮ್ಮನ್ನು ನೋಡಿದಾಗ ನಿಮ್ಮ ಪತಿ ಖುಷಿ ಪಡಬೇಕು, ಆ ರೀತಿಯಲ್ಲಿ ರೆಡಿಯಾಗಿ. ಇನ್ನು ಮನೆಯಲ್ಲಿ ಪತಿ ಮಾತ್ರ ಇದ್ದರೆ ಹೆಚ್ಚು ರಿವೀಲಿಂಗ್ ಡ್ರೆಸ್, ನೈಟ್ ವೇರ್, ನೆಟ್ ಡ್ರೆಸ್ ಧರಿಸಿದಾಗ ಪತಿ ತಕ್ಷಣ ನಿಮ್ಮ ಕಡೆಗೆ ವಾಲುತ್ತಾರೆ. ಇದರ ಜೊತೆಗೆ ಇನ್ನೂ ಒಂದು ಸೂಪರ್ ಟೆಕ್ನಿಕ್ ಇದೆ.
ಸಾಮಾನ್ಯವಾಗಿ ರೊಮ್ಯಾನ್ಸ್ಗೆ ಮೊದಲು ನೀವು ಪರ್ಫ್ಯೂಮ್ ಹಚ್ಚುವುದು ತುಂಬಾ ಅಗತ್ಯ, ಯಾಕೆಂದರೆ ರೊಮ್ಯಾನ್ಸ್ನಲ್ಲಿ ನಿಮ್ಮ ದೇಹದ ಸುಗಂಧ ತುಂಬಾ ಮುಖ್ಯ. ನಿಮ್ಮ ದೇಹದ ಪರಿಮಳವೇ ನಿಮ್ಮ ಗಂಡನನ್ನು ನಿಮ್ಮತ್ತ ಹೆಚ್ಚು ಸೆಳೆಯುತ್ತದೆ. ಅದಕ್ಕಾಗಿ ನೀವು ಸ್ನಾನ ಮಾಡುವಾಗ ಸುವಾಸನೆಯುಕ್ತ ಬಾಡಿವಾಶ್ ಬಳಸಿ. ಅಥವಾ ಶವರ್ ಜೆಲ್ ಬಳಸಿ. ಹದವಾದ ಬಿಸಿ ನೀರಿನಿಂದ ಸ್ನಾನ ಮಾಡಿ. ಯಾಕೆಂದರೆ ಇದು ನಿಮ್ಮ ದೇಹದಲ್ಲಿ ಸುಗಂಧ ಉಳಿಯಲು ಸಹಾಯ ಮಾಡುತ್ತೆ.
ಅದರಲ್ಲೂ ಪರ್ಫ್ಯೂಮ್ ಹಚ್ಚುವ ಮೊದಲು ಮಾಯ್ಚಿರೈಸರ್ ಹಚ್ಚಿದರೆ ಸುಗಂಧ ಹೆಚ್ಚು ಕಾಲ ಉಳಿಯುತ್ತದೆ. ಇನ್ನು ಕಂಕುಳಲ್ಲಿ, ಕುತ್ತಿಗೆ ಬದಿಗೆ , ಎದೆಯ ಭಾಗದಲ್ಲಿ ನೀವು ಪರ್ಫ್ಯೂಮ್ ಹಾಕಿ. ಅದಲ್ಲದೆ ಹೇರ್ ಸ್ಪ್ರೇ ಕೂಡಾ ಬಳಸಿ. ಇನ್ನು ಮಹಿಳೆಯರ ದೇಹದಲ್ಲಿ ಕರ್ವ್ಸ್ ಅಥವಾ ಸೊಂಟದ ಭಾಗ ಅತ್ಯಂತ ಆಕರ್ಷಣೀಯ ಆಗಿರುವ ಕಾರಣ ಸೊಂಟ ಮತ್ತು ಕರ್ವ್ಸ್ ಭಾಗದಲ್ಲಿ ಪರ್ಫ್ಯೂಮ್ ಹಾಕಿ. ಜೊತೆಗೆ ಬೆಲ್ಲಿ ಬಟನ್ಗೂ ಪರ್ಫ್ಯೂಮ್ ಹಾಕೋದನ್ನು ಮರೆಯಬೇಡಿ. ಇದು ಹೆಚ್ಚು ಪರಿಣಾಮಕಾರಿಯಾಗಿ ಅವರನ್ನು ನಿಮ್ಮತ್ತ ಮತ್ತಷ್ಟು ಸೆಳೆಯುತ್ತದೆ. ಅಲ್ಲದೆ ಗಂಡನಿಗೆ ನಿಮ್ಮ ಜೊತೆಗೆ ಸುದೀರ್ಘವಾಗಿರುವ ರೊಮ್ಯಾನ್ಸ್ ಮಾಡಲು ಮನಸಾಗುತ್ತೆ.