ಒಂದೇ ತಿಂಗಳ ಅಂತರದಲ್ಲಿ ಮತ್ತೊಂದು ಬಡ ಕುಟುಂಬಕ್ಕೆ ಸೂರು ನಿರ್ಮಿಸಿ ಆಸರೆಯಾದ ಪೆರುವಾಯಿಯ ಮುಸ್ಲಿಂ ಐಕ್ಯ ವೇದಿಕೆ
✍️ ರಶೀದ್ ಬೆಳ್ಳಾರೆ
ಸಮಾಜಮುಖಿ ಕಾರ್ಯದಲ್ಲಿ ತನ್ನನ್ನ ತಾನು ತೊಡಗಿಸಿಕ್ಕೊಂಡ ಬಂಟ್ವಾಳ ತಾಲೂಕಿನ ಪೆರುವಾಯಿಯ ಮುಸ್ಲಿಂ ಐಕ್ಯ ವೇದಿಕೆಯು ಮೊನ್ನೆ ತಾನೆ ಹಿಂದೂ ಸಹೋದರಿಯ ಕುಟುಂಬದ ಸೂರಿನ ಅವ್ಯವಸ್ಥೆಯನ್ನು ಕಂಡು ಕೇವಲ 4 ದಿನದಲ್ಲಿ ಸೂರು ನಿರ್ಮಿಸಿ ಸಹೋದರತೆಗೆ ಸಾಕ್ಷಿಯಾಗಿ ಎಲ್ಲೆಡೆಯಿಂದ ಮೆಚ್ಚುಗೆಗಳ ಸಂದೇಶವೇ ಹರಿದಾಡಿತ್ತು.
ಇದೀಗ ತನ್ನದೆ ಸಮುದಾಯದ ಪೆರುವಾಯಿಯ ಮಹಿಳೆಯ ಸೂರಿನ ಅವ್ಯವಸ್ಥೆಯನ್ನು ಕಂಡು ಕಷ್ಟಕ್ಕೆ ಸ್ಪಂದಿಸಿದ ಘಟನೆ ವರದಿಯಾಗಿದ್ದು ಈ ಮನೆ ಹಿಂದೂ ಸಹೋದರಿಯ ಮನೆ ನಿರ್ಮಾಣವಾದ ಒಂದೇ ತಿಂಗಳ ಅಂತರದಲ್ಲಿ ನಡೆದಿದೆ.
ಪೆರುವಾಯಿಯ ನೆಬಿಸ ಎಂಬ ಒಂಟಿ ಮಹಿಳೆಯು ತೀರಾ ಬಡತನವನ್ನ ಎದುರಿಸಿ ಕಷ್ಟಕರ ಜೀವನವನ್ನು ನಡೆಸುತ್ತಿದ್ದು ಒಂದು ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದರು.ಈ ಮಹಿಳೆಗೆ ಸರಕಾರದಿಂದ ದೊರಕುವ ಆಶ್ರಯ ಯೋಜನೆಯಡಿಯಲ್ಲಿ ದೊರೆತ ಮನೆಯಾಗಿತ್ತು ಆದರೆ ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲಿರಲಿಲ್ಲ ಒಂದು ವರುಷದ ಹಿಂದೆ ಅಲ್ ಅಮೀನ್ ಪೆರುವಾಯಿ ಯು ಎ ಇ ಘಟಕವು ಇಲ್ಲಿಗೆ ವಿದ್ಯುತ್ ಸಂಪರ್ಕ ವನ್ನು ಕಲ್ಪಿಸಿಕೊಟ್ಟರು.ಮಹಿಳೆಯ ಕಷ್ಟ ವನ್ನ ಹೇಳ ತೀರದಾಗಿದ್ದು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕ್ಕೊಂಡು ಜೀವನವನ್ನು ದೂಡುತ ಅವ್ಯವಸ್ಥೆ ಯಿಂದ ಕೂಡಿದ ಈ ಮನೆಯಲ್ಲಿ ವಾಸವಾಗಿದ್ದರು.ಆದರೆ ಯಾವುದೇ ಜನಪ್ರತಿನಿಧಿಯಾಗಲಿ ಸ್ಥಳೀಯ ಸಂಬಂಧಪಟ್ಟವರಾಗಲಿ ಇಲ್ಲಿಯವರೆಗೆ ಈ ಸಮಸ್ಯೆ ಯನ್ನ ಕೇಳಿದವರಿಲ್ಲ.ಸೂರಿನ ಅವ್ಯವಸ್ಥೆಯ ಸ್ಥಿತಿಗೆ ಸುಮಾರು ಆರು ವರುಷಗಳೇ ಕಳೆದು ಹೋಯಿತು. ಆದರೆ ಒಂಟಿ ಮಹಿಳಗೆ ಏನು ಮಾಡಬೇಕೆಂಬುದು ದೋಚದಂತಾಯಿತು.ಇದನ್ನ ಗಮನಿಸಿದ ಪೆರುವಾಯಿಯ ಮುಸ್ಲಿಂ ಐಕ್ಯ ವೇದಿಕೆ ಈ ಮಹಿಳೆಗೆ ಸಾರಥಿಯಾಗಿ ನಿಂತು ಸ್ಪಂದಿಸಿ ಕತ್ತಲಿನಿಂದ ಬೆಳಕಿನೆಡೆಗೆ ತರುವಲ್ಲಿ ಕೈ ಜೋಡಿಸುತ್ತೇವೆ ಎಂದಾಕ್ಷಣ ಆಯಿತೆಂದು ಮಹಿಳೆ ಒಪ್ಪಿಕ್ಕೊಂಡರು.ಪೆರುವಾಯಿಯ ಸ್ಥಳೀಯ ಮುಸ್ಲಿಂ ಸಂಘಸಂಸ್ಥೆಗಳ ಸಹಕಾರ ವನ್ನು ತೆಗೆದುಕ್ಕೊಂಡು ಸರಿ ಸುಮಾರು ಎರುಡವರೆ ಲಕ್ಷ ಖರ್ಚು ವೆಚ್ಚದಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಗಳನ್ನು ಒಳಗೊಂಡು ಈ ಸೂರನ್ನ ನಿರ್ಮಿಸಿಕೊಟ್ಟ ಐಕ್ಯ ವೇದಿಕೆಯ ಸಹೋದರರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೀಯ ವ್ಯಕ್ತವಾಗುತ್ತಿದೆ ಹಾಗೂ ಹೊಸ ಸೂರು ಬೆಳಗುತ್ತಿದೆ ನೆಬಿಸಾರವರ ಸೂರಿನ ಕಷ್ಟ ವು ದೂರವಾಗುತ್ತಿದೆ.
ಪೆರುವಾಯಿ ನೆಬಿಸರವರು ಹಲವಾರು ವರುಷಗಳಿಂದ ಅವ್ಯವಸ್ಥೆ ಯಿಂದ ಕೂಡಿದ ಮನೆಯಲ್ಲಿ ವಾಸವಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕ್ಕೊಂಡು ಒಬ್ಬಂಟಿಯಾಗಿ ವಾಸವಾಗಿದ್ದರು.ಮಕ್ಕಳು ಇದ್ದಾರೆಯೆಂದು ಹೇಳ್ತಾರೆ ಆದರೆ ಈ ತಾಯಿಯ ಕಷ್ಟ ಕರ ಕೂಗಿಗೆ ಯಾರೇ ಬರಲಿಲ್ಲ .ಸಣ್ಣ ಗುಡಿಸಲಾಗಿತ್ತು ಯಾವುದೇ ಒಂದು ಮೂಲಭೂತ ಸೌಕರ್ಯ ಇಲ್ಲವಾಗಿತ್ತು.ಇದನ್ನ ಮನಗಂಡ ಐಕ್ಯ ವೇದಿಕೆಯ ಸಹೋದರ ತಂಡ ವೀಕ್ಷಣೆ ಮಾಡಿ ಮಾಹಿತಿ ಕಲೆಹಾಕಿದೆವು.ಇವರ ವಿಷಯವನ್ನ ಕೇಳಿದ ನಾವು ಊರಿನ ಸ್ಥಳೀಯ ಮುಸ್ಲಿಂ ಸಂಘ ಸಂಸ್ಥೆಗಳಿಗೆ ಈ ವಿಷಯವನ್ನು ಪ್ರಸ್ತಾಪಿಸಿದಾಗ ಅವರ ಸಹಕಾರವು ನಮಗೆ ದೊರಕಿತ್ತು.ಇಷ್ಟೆಲ್ಲಾ ಕಷ್ಟ ನೋವುಗಳನ್ನು ಅನುಭವಿಸುತ್ತಿರುವಾಗ ಸಮಸ್ಯೆ ಗಳನ್ನು ಆಲಿಸಬೇಕಾದ ಜನಪ್ರತಿನಿಧಿಗಳು ಮೌನವಾಗಿ ಕುಳಿತುಕೊಂಡದ್ದು ದುಃಖಕರ ಸಂಗತಿಯಾಗಿದೆ.ಸುಂದರವಾದ ಮನೆಯು ನಿರ್ಮಾಣವಾಗುವಲ್ಲಿ ಎಲ್ಲರೂ ಸಹಕರಿಸಿದ್ದೀರಿ.ಮುಂದೆಯೂ ಕೂಡ ಸರ್ವಧರ್ಮಗಳ ಕಷ್ಟ ಕ್ಕೆ ಸ್ಪಂದಿಸಲಿದ್ದೇವೆ .
- ಮುಸ್ಲಿಂ ಐಕ್ಯ ವೇದಿಕೆ