ಅನ್ ಲಾಕ್ ನ ಸುಳಿವು ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ !
ಬೆಂಗಳೂರು, ಜೂನ್ 5 : ಜೂನ್ 14 ಕ್ಕಿಂತ ಮುನ್ನವೇ ಲಾಕ್ಡೌನ್ ನಲ್ಲಿ ನಾಲ್ಕೈದು ಸಡಿಲಿಕೆ ನೀಡುವ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ.
ಪಾಸಿಟಿವಿಟಿ ರೇಟ್ ಶೇಕಡಾ 5ಕ್ಕಿಂತ ಕಡಿಮೆ ಬರುವ ಜಿಲ್ಲೆಗಳಿಗೆ ಏನು ಸಡಿಲಿಕೆ ನೀಡುವ ಸಂಭವ ಇದೆ. ಈ ಕುರಿತು ಅಧಿಕಾರಿಗಳು ಮತ್ತು ತಜ್ಞರ ಜೊತೆ ಚರ್ಚೆ ನಡೆಸಲಾಗುತ್ತದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ಬಗ್ಗೆ ವಿವರವಾಗಿ ತಿಳಿಸಲಾಗುವುದು ಎಂದು ಜೂನ್ 14ರ ಮುಂಚೆಯೇ ಅನ್ಲಾಕ್ ಮಾಡುವ ಕುರಿತು ಸುಳಿವು ನೀಡಿದರು.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಐದು ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ವರದಿಯಾಗಿವೆ. ಇನ್ನು ರಾಜಧಾನಿಯಲ್ಲಿ ಶುಕ್ರವಾರ ಪಾಸಿಟಿವಿಟಿ ರೇಟ್ ಶೇ.4.94 ಗೆ ಕುಸಿತ ಕಂಡಿದೆ.
ಇಂದು ಬೆಂಗಳೂರಿನಲ್ಲಿ ಅತ್ಯಂತ ಕಡಿಮೆ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿ ಸೇರಿ 2,724 ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಮೂರು ತಿಂಗಳ ನಂತರ ಮೂರು ಸಾವಿರಕ್ಕಿಂತ ಒಳಗಡೆ ಕೇಸ್ ದಾಖಲಾಗ್ತಿದೆ. ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲೂ 500 ಕ್ಕಿಂತ ಕಡಿಮೆ ಕೇಸ್ ದಾಖಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಯಡಿಯೂರಪ್ಪನವರು ನೀಡಿದ ಸುಳಿವಿನ ಆಧಾರದ ಮೇಲೆ ಹೇಳುವುದಾದರೆ, ಲಾಕ್ ಡೌನ್ ನ ಕೊನೆಯ ದಿನ ಅಂದರೆ ಜೂನ್ 14ರ ಒಳಗೆ ಅನ್ ಲಾಕ್ ಅಲ್ಲಲ್ಲಿ ಆಗುವ ಸಂಭವವಿದೆ. ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಿರುವ ಬೆಂಗಳೂರು, ಯಾದಗಿರಿ, ಬೀದರ್, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಸೇರಿದಂತೆ 7 ಜಿಲ್ಲೆಗಳಲ್ಲಿ ಲಾಕ್ ಡೌನ್ ತೆರವುಗೊಳಿಸಲು ಸರ್ಕಾರ ಮುಂದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.