ಲತೀಶ್ ಗುಂಡ್ಯ ವಿರುದ್ದ ಸುಳ್ಳು ಆರೋಪ ಹೊರಿಸಿ ದೂರು | ದೂರುದಾರರನ್ನು ಕಲ್ಕುಡ ದೈವಸ್ಥಾನಕ್ಕೆ ಪ್ರಮಾಣಕ್ಕೆ ಆಹ್ವಾನಿಸಿದ ಲತೀಶ್ ಗುಂಡ್ಯ
ಸುಳ್ಯದ ಅಂಬ್ಯುಲೆನ್ಸ್ ಚಾಲಕ ಅಭಿಲಾಶ್ ಎಂಬವರನ್ನು ನಿಂದಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಅವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಆದರೆ ಪ್ರಕರಣ ದಾಖಲಾಗಿಲ್ಲ.
ದೂರು ಸ್ವೀಕರಿಸಲಾಗಿದೆ ಎಂದು ಸುಳ್ಯ ಎಸೈ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿಂದೂ ಸಂಘಟನೆಗಳಲ್ಲಿ ಸಕ್ರೀಯವಾಗಿರುವ ಬಜರಂಗದಳದ ಮುಖಂಡ ಲತೀಶ್ ಗುಂಡ್ಯ ಅವರು, ನಾನು ಅಂಬ್ಯುಲೆನ್ಸ್ ಚಾಲಕ ಅಭಿಲಾಶ್ ಅವರಿಗೆ ಫೋನ್ ಮಾಡಿ ಪೈಲಾರಿನ ಮನೆಯವರಿಂದ 7 ಸಾವಿರ ರೂ. ಪಡೆದಿರುವ ಬಗ್ಗೆ ವಿಚಾರಿಸಿದ್ದೇನೆ.ಆದರೆ ಹಿಂದುಗಳ ಮೃತದೇಹ ಮುಸ್ಲಿಂ ಅಂಬ್ಯುಲೆನ್ಸ್ ನಲ್ಲಿ ಕೊಂಡೊಯ್ಯಬಾರದು ಎಂದು ಹೇಳಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ ಹೊರಿಸಿ ದೂರು ನೀಡಿದ್ದಾರೆ ಎಂದಿದ್ದಾರೆ.
ಅಭಿಲಾಶ್ ಮತ್ತು ದೂರು ನೀಡಿರುವ ಸುಂದರ ಪಾಟಾಜೆ ಇಬ್ಬರೂ ಕಲ್ಕುಡ ದೈವಸ್ಥಾನಕ್ಕೆ ಬಂದು ದೈವದ ನಡೆಯಲ್ಲಿ ಪ್ರಮಾಣ ಮಾಡಬೇಕು ಎಂದು ಲತೇಶ್ ಗುಂಡ್ಯ ತಿಳಿಸಿದ್ದಾರೆ.