ರಾಜ್ಯಾದ್ಯಂತ ಜೂನ್ 07 ರಿಂದ ಅನ್’ಲಾಕ್ ಖಚಿತ..ತಜ್ಞರ ಸಲಹೆಯ ಬಳಿಕ ಕೈಗೊಳ್ಳಬೇಕಿದೆ ನಿರ್ಧಾರ..ಉಪ ಮುಖ್ಯ ಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್
ರಾಜ್ಯಾದ್ಯಂತ ಕೊರೊನ ಸೋ೦ಕಿನ ನಿಯಂತ್ರಣಕ್ಕೆ ಸರ್ಕಾರ ಈಗಾಗಲೇ ಜೂನ್ 7ರವರೆಗೆ ಲಾಕ್ ಡೌನ್ ನ್ನು ವಿಸ್ತರಿಸಿದ್ದು, ಅಗತ್ಯತೆ ಇದ್ದರೆ ಇನ್ನಷ್ಟು ದಿನ ಮುಂದುವರೆಸುವ ಕುರಿತು ಚರ್ಚೆಗಳು ನಡೆಯುತ್ತಿದೆ. ಈ ನಡುವೆ ರಾಜ್ಯ ವಿಪಕ್ಷಗಳು ಲಾಕ್ಡೌನ್ ಮುಂದುವರೆಸಬೇಕೆಂದು ಸರ್ಕಾರಕ್ಕೆ ಪದೇ ಪದೇ ಸಲಹೆಯನ್ನು ಕೂಡಾ ನೀಡುತ್ತಿವೆ.
ಕೋವಿಡ್ ಸಲಹಾ ಸಮಿತಿಯ ತಜ್ಞರು ಕೂಡ ಲಾಕ್ಡೌನ್ ಕುರಿತು ಸರ್ಕಾರಕ್ಕೆ ಈಗಾಗಲೇ ಸಮಿತಿಯ ತೀರ್ಮಾನದ ಮಾಹಿತಿ ನೀಡಿದ್ದಾರೆ. ಈ ನಡುವೆ ವಿಧಿಸಲಾದ ಲಾಕ್ಡೌನ್ ಕುರಿತು ಜೂನ್ 5 ಅಥವಾ 6ರಂದು ಪರಿಸ್ಥಿತಿ ಪರಿಶೀಲಿಸಿ, ಸಮಿತಿಯ ಸಲಹೆಯನ್ನು ಗಣನೆಗೆ ತೆಗೆದುಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರು “ಜೂನ್ 7ರ ನಂತರ ಲಾಕ್ ಡೌನ್ ಅನ್ನು ತಡೆಹಿಡಿದು ಅನ್ ಲಾಕ್ ಮಾಡುವುದು ಖಚಿತವಾಗಿದೆ. ಒಮ್ಮೆಲೇ ಪೂರ್ಣ ಪ್ರಮಾಣದಲ್ಲಿ ಅನ್ ಲಾಕ್ ಮಾಡುವುದು ಅಸಾಧ್ಯ ಎಂಬ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಸೋಂಕು ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣಕ್ಕೆ ಬಾರದ ಕಾರಣ ಹಂತ ಹಂತವಾಗಿ ಅನ್ಲಾಕ್ ಮಾಡಬೇಕಾಗುತ್ತದೆ. ಹೇಗೆ ಮಾಡಬೇಕು ಎಂಬುದರ ಬಗ್ಗೆ ತಜ್ಞರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ, ಎಲ್ಲವೂ ಜನತೆಯ ಕೈಯ್ಯಲ್ಲಿದೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.