ದುಬೈ ಲತೀಫಾ ಆಸ್ಪತ್ರೆಯಲ್ಲಿ ಯುಎಇ ಅನಿವಾಸಿ ಕನ್ನಡಿಗರ ಒಕ್ಕೂಟದ ವತಿಯಿಂದ ರಕ್ತದಾನ ಶಿಬಿರ

ದುಬೈ ಲತೀಫಾ ಆಸ್ಪತ್ರೆಯಲ್ಲಿ ಅನಿವಾಸಿ ಕನ್ನಡಿಗರ ಒಕ್ಕೂಟ ಯುಎಇ ಇದರ ವತಿಯಿಂದ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಯುಎಇ ಅನಿವಾಸಿ ಕನ್ನಡಿಗರ ಒಕ್ಕೂಟದ ಶಾಫಿ ಬಜ್ಪೆ ಮಾತನಾಡಿ, ಪ್ರತಿಯೊಬ್ಬ ರಕ್ತದಾನಿ ಇನ್ನೊಬ್ಬರ ಜೀವ ರಕ್ಷಕರಾಗಿರುತ್ತಾರೆ. ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಮಾನವೀಯತೆಯ ಮನೋಭಾವನೆಗಳನ್ನು ಬೆಳೆಸಬೇಕು ಎಂದರು.

ರಕ್ತದಾಎ ಶಿಬಿರದಲ್ಲಿ ಒಟ್ಟು 105 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

ಅನಿವಾಸಿ ಕನ್ನಡಿಗರ ಈ ಮಾನವೀಯ ಹಾಗೂ ಸಾಮಾಜಿಕ ಕಾರ್ಯಕ್ಕೆ ಲತೀಫಾ ಆಸ್ಪತ್ರೆಯ ಆಡಳಿತ ಮಂಡಳಿ ಶ್ಲಾಘನೆ ವ್ಯಕ್ತಪಡಿಸಿದೆ.

ರಕ್ತದಾನಿಗಳಿಗೆ ಯುಎಇ ಅನಿವಾಸಿ ಕನ್ನಡಿಗರ ಒಕ್ಕೂಟದ ಅಧ್ಯಕ್ಷರಾದ ಶಂಸುದ್ದೀನ್ ಉಡುಪಿ ಅಭಿನಂದನಾ ಪತ್ರ ನೀಡಿ ಗೌರವಿಸಿದರು.

Leave A Reply

Your email address will not be published.