ಬೆಳ್ತಂಗಡಿ | ಕೊರೋನಾಗೆ ಮಹಿಳೆ ಬಲಿ
ಬೆಳ್ತಂಗಡಿ: ಇಲ್ಲಿಯ ರೆಂಕೆದಗುತ್ತು ಆಶ್ರಯ ಬಡಾವಣೆ ನಿವಾಸಿ, ಗೋಪಾಲ ಪೂಜಾರಿಯವರ ಧರ್ಮಪತ್ನಿ ಭಾರತಿ(39) ಕೊರೋನದಿಂದ ಬಳಲಿ, ಮೇ.31 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಭಾರತಿಯವರು ಕೆಲ ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಇವರನ್ನು ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೋವಿಡ್ ಪರೀಕ್ಷೆ ವೇಳೆ ಇವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೇ.31 ರಂದು ಕೊನೆಯುಸಿರೆಳೆದಿದ್ದಾರೆ.
ಮೃತರು ಪತಿ ಗೋಪಾಲ ಪೂಜಾರಿ, ಇಬ್ಬರು ಪುತ್ರಿಯರಾದ ತೃಪ್ತಿ, ದೀಪ್ತಿ ಹಾಗೂ ಕುಟುಂಬದವರನ್ನು ಅಗಲಿದ್ದಾರೆ.