ತನ್ನ ಧರ್ಮವನ್ನು ಮುಚ್ಚಿಟ್ಟು ಇನ್ನೊಂದು ಮದುವೆಯಾದ ಏಳು ಮಕ್ಕಳ ತಂದೆ

ವ್ಯಕ್ತಿಯೊಬ್ಬ ತನ್ನ ನಿಜವಾದ ಧರ್ಮವನ್ನು ಮರೆ ಮಾಚಿ ಸುಳ್ಳು ಹೇಳಿ ಯುವತಿಯೊಬ್ಬಳಿಗೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಉತ್ತರಪ್ರದೇಶದ ಲಕ್ಷ್ಮೀ ಸಮೀಪದ ಗಾಜಿಪುರ್ ನಲ್ಲಿ ಈ ಪ್ರಕರಣ ದಾಖಲಾಗಿದೆ. ಅಬಿದ್ ಎಂಬ ಹೆಸರಿನ ವ್ಯಕ್ತಿ ತನ್ನನ್ನು ಆದಿತ್ಯ ಸಿಂಗ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ನನ್ನನ್ನು ಮದುವೆಯಾಗಿದ್ದ ಎಂದು ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ.

ಅಬಿದ್ ಗೆ ಈ ಹಿಂದೆ ಮದುವೆಯಾಗಿದ್ದು ಏಳು ಮಕ್ಕಳನ್ನು ಹೊಂದಿದ್ದಾನೆ ಎಂಬುದು ಮದುವೆ ಬಳಿಕ ತಿಳಿಯಿತು ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಮದುವೆಯಾದ ಬಳಿಕ ನನ್ನನ್ನು ಬಲವಂತವಾಗಿ ಮತಾಂತರಿಸಲಾಯಿತು ಎಂದು ಕೂಡ ಅವರು ಆರೋಪಿಸಿದ್ದಾರೆ.

ತನ್ನ ಧರ್ಮವನ್ನು ಮುಚ್ಚಿಟ್ಟು, ಈ ರೀತಿ ಮತಾಂತರ ಮಾಡಿಕೊಂಡ ಅಬಿದ್ ಗೆ ಸೂಕ್ತ ರೀತಿಯಲ್ಲಿ ಶಿಕ್ಷೆಯಾಗಬೇಕೆಂದು ಯುವತಿ ಒತ್ತಾಯಿಸಿದ್ದಾರೆ. ಹಾಗೂ ಈ ಪ್ರಕರಣ ಲವ್ ಜಿಹಾದ್ ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿದುಬಂದಿದೆ.

Leave A Reply

Your email address will not be published.