ಚಂಡಮಾರುತದ ಸಂದರ್ಭ ನಡೆದ ಚಂಡಾಲ ಕೃತ್ಯ | ಮಹಿಳಾ ಪೇದೆಯ ಮೇಲೆ ಮೇಲಧಿಕಾರಿಯಿಂದ ರೇಪ್
ಊರು,ಹೊಲ ಕಾಯಬೇಕಾದ ಪೋಲಿಸ್ ಅಧಿಕಾರಿಯೆ ಮೇಯಲು ಹೋಗಿ ತನ್ನದೇ ಡಿಪಾರ್ಟ್ ಮೆಂಟಿನಲ್ಲಿ ಮಹಿಳಾ ಪೇದೆಯಾಗಿರುವ ಹೆಣ್ಣೊಬ್ಬಳ ಸೆರಗಿಗೆ ಕೈ ಹಾಕಿದ ಕಳವಳಕಾರಿ ಘಟನೆ ನಡೆದಿದೆ.
ಅಲ್ಲಿ ಒಡಿಶಾ ರಾಜ್ಯದಲ್ಲಿ ಮಹಿಳಾ ಪೇದೆ ಮೇಲೆ ಪೊಲೀಸ್ ಅಧಿಕಾರಿಯೋರ್ವ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.
ಈ ಸಂಬಂಧ ಬನ್ಸಿದಾರ್ ಪ್ರದಾನ್ ಎಂಬ ಪೊಲೀಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಗೋಪಾಲ್ಪುರ ಪ್ರದೇಶದಲ್ಲಿ ಔಟ್ ಪೋಸ್ಟ್ ಇನ್ ಚಾರ್ಜ್ ಅಧಿಕಾರಿಯಾಗಿದ್ದ. ಬಾಲಾಸೋರ್ ಜಿಲ್ಲೆಯ ಗೋಪಾಲ್ಪಪುರ ಪ್ರದೇಶದಲ್ಲಿ ಯಾಸ್ ಚಂಡಮಾರುತದ ಕರ್ತವ್ಯದಲ್ಲಿದ್ದ ವೇಳೆ ಈ ಅಧಿಕಾರಿಯ ಜತೆ ಇದೀಗ ರೇಪ್ ಆಗಿರುವ ಮಹಿಳಾ ಅಧಿಕಾರಿಯನ್ನು ಕೂಡ ಅಲ್ಲಿ ಡ್ಯೂಟಿಗೆ ನಿಯೋಜಿಸಲಾಗಿತ್ತು. ಚಂಡಮಾರುತ ಗ್ರಸ್ತ ಹಳ್ಳಿಯ ಪ್ರದೇಶದಲ್ಲಿ ಆಕೆ ತನಗಿಂತ ಉನ್ನತ ಅಧಿಕಾರಿ ಬಂಸಿದಾರ್ ಪ್ರಧಾನ್ ಜೊತೆ ಕೆಲಸ ಮಾಡುತ್ತಿರುವಾಗ, ಆತ ಆ ಮಹಿಳಾ ಪೇದೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.
ರೇಪ್ ಮಾಡಿರುವುದಾಗಿ ಮಹಿಳಾ ಪೇದೆ ದೂರು ನೀಡಿದ್ದಾರೆ.ಆದರೂ ಆರಂಭದಲ್ಲಿ ಕೇಸ್ ದಾಖಲಿಸಿಲು ಪೊಲೀಸರು ನಿರಾಕರಿಸಿದ್ದರು. ಇದರಿಂದಾಗಿ ಪೇದೆ ರೈಲ್ವೇ ಹಳಿಯಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದರು. ಈ ವಿಚಾರ ತಿಳಿದ ರೈಲ್ವೇ ಪೊಲೀಸರು ಒಡಿಶಾ ರಾಜ್ಯ ಪೊಲೀಸ್ನ ಪೂರ್ವ ವಿಭಾಗದ ಐಜಿಗೆ ಮಾಹಿತಿ ನೀಡಿದ್ದರು.
ಐಜಿ ದೀಪ್ತೇಶ್ ಪಟ್ನಾಯಿಕ್, ಬನ್ಸಿದಾರ್ ಪ್ರದಾನ್ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದು, ಆ ಬಳಿಕ ಆರೋಪಿತ ಪೊಲೀಸ್ ಅಧಿಕಾರಿಯನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆ ಮಾಡಿ ನ್ಯಾಯಾಲದ ಮುಂದೆ ಹಾಜರುಪಡಿಸಲಾಗಿದೆ.